More

    ಕರವೇಯಿಂದ ಜನರಿಗೆ ಸ್ಪಂದಿಸುವ ಕಾರ್ಯ

    ಮುದಗಲ್: ಕನ್ನಡ ನಾಡು, ನುಡಿ ಮತ್ತು ನಾಗರಿಕ ಸೇವೆಗೆ ಕರ್ನಾಟಕ ರಕ್ಷಣಾ ವೇದಿಕೆ ಅಪಾರ ಕೊಡುಗೆ ನೀಡಿದೆ ಎಂದು ಲಿಂಗಸುಗೂರು ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.

    ನಾಗರಿಕ ಸೇವೆಗೆ ಕರ್ನಾಟಕ ರಕ್ಷಣಾ ವೇದಿಕೆ ಅಪಾರ ಕೊಡುಗೆ

    ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಘಟಕದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಡ ದ್ವಜರೋಹಣ ನೆರವೇರಿಸಿ ಸೋಮವಾರ ಮಾತನಾಡಿದರು. ಸ್ಥಳೀಯ ನಾಗರಿಕ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಕರವೇ ಮಾಡುತ್ತಿದೆ. ಅಲ್ಲದೆ ಹೋರಾಟದ ಮೂಲಕ ಅಧಿಕಾರಿಗಳ ಕಣ್ತೆರೆಸಿ ಜನರಿಗೆ ಸೌಲಭ್ಯ ಕಲ್ಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರು.

    ಇದನ್ನೂ ಓದಿ: ಭಾರತವಿಲ್ಲದೆ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ ಅಸಾಧ್ಯ: ನಾರ್ವೆ ಉಪ ವಿದೇಶಾಂಗ ಸಚಿವ

    ಕರವೇ ಮುದಗಲ್ ಘಟಕದ ಅಧ್ಯಕ್ಷ ಎಸ್‌ಎ.ನಯಿಂ ಮಾತನಾಡಿ, ಕಳೆದ ಹದಿನೈದು ವಷರ್ಗಳಿಂದ ಕನ್ನಡದ ನೆಲ, ಜಲ, ಭಾಷೆ ಮತ್ತು ಮೂಲ ಸೌಕರ್ಯಕ್ಕಾಗಿ ಅವಿರತ ಹೋರಾಟಗಳನ್ನು ಮಾಡಲಾಗುತ್ತಿದೆ. ಅಲ್ಲದೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡದ ಅಭಿಮಾನ ಬೆಳೆಸಲಾಗುತ್ತಿದೆ. ಮುದಗಲ್ ಕರವೇ ಘಟಕ ರಚನೆಯಾಗಿ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.
    ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಿಂದ ಭುವನೇಶ್ವರಿಯ ಭಾವಚಿತ್ರ ಹಾಗೂ 825 ಅಡಿ ಉದ್ದದ ಕನ್ನಡ ಭಾವುಟ ಮೆರವಣಿಗೆಗೆ ಪುರಸಭೆ ಮಾಜಿ ಅಧ್ಯಕ್ಷ ಅಶೋಕಗೌಡ ಚಾಲನೆ ನೀಡಿದರು. ಪುರಸಭೆ ಮುಂಭಾಗ, ಬಸ್ ನಿಲ್ದಾಣ ರಸ್ತೆ ಸೇರಿ ಪ್ರಮುಖ ರಸ್ತೆ ಉದ್ದಕ್ಕೂ ಮಹಾತ್ಮರ ಛದ್ಮವೇಷ ಧರಿಸಿ ವಿದ್ಯಾರ್ಥಿಗಳು ಗಮನ ಸೆಳೆದರು.
    ಸಾಧನೆ ಮಾಡಿದ ಸಂಜನಾ ಮತ್ತು ಶಿವರಾಜ ತಳವಾರ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕರವೇ ಪ್ರಮುಖರಾದ ಎಸ್‌ಎನ್.ಖಾದ್ರಿ, ಇಸ್ಮಾಯಿಲ್ ಬಳೆಗಾರ, ಮಹಾಂತೇಶ, ಸಾಬು ಹುಸೇನ್, ರಹಿಮಾನ ದೂಲಿ, ಅಬ್ದುಲ್ ಮಜೀದ್, ಪುರಸಭೆ ಸದಸ್ಯರಾದ ಎಸ್‌ಕೆ.ಅಜ್ಮೀರ್ ಬೆಳ್ಳಿಕಟ್, ಮುಖ್ಯಾಧಿಕಾರಿ ನಬಿಸಾಬ ಕಂದಗಲ್, ದಾವೂದ್ ಸಾಬ, ಗ್ಯಾನಪ್ಪ, ರಾಜಮಹ್ಮದ್, ಇಸ್ಮಾಯಿಲ್ ಕೊಳ್ಳಿ, ನಬಿಸಾಬ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts