More

    ದೇಸಿ ಪರಂಪರೆಯ ಕೃಷಿ ಪದ್ಧತಿಗೆ ಒತ್ತು ನೀಡಿ

    ತೀರ್ಥಹಳ್ಳಿ: ರಾಸಾಯನಿಕ ಗೊಬ್ಬರ ಬಳಕೆ ಪರಿಣಾಮ ಆಹಾರ ಪದಾರ್ಥಗಳು ವಿಷಯುಕ್ತವಾಗುತ್ತಿದ್ದು ಅದರಿಂದ ಮುಕ್ತರಾಗಲು ದೇಸಿ ಪರಂಪರೆಯ ಕೃಷಿ ಪದ್ಧತಿಗೆ ಆದ್ಯತೆ ನೀಡಬೇಕು ಎಂದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

    ಪಟ್ಟಣದ ಸಾಗರ ರಸ್ತೆಯಲ್ಲಿ ನೂತನ ಪಶುವೈದ್ಯಕೀಯ ಆಸ್ಪತ್ರೆ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಅಧಿಕ ಆಹಾರ ಉತ್ಪಾದನೆ ಹೆಸರಿನಲ್ಲಿ ಹೆಚ್ಚಿನ ರಾಸಾಯನಿಕ ಬಳಸುತ್ತಿದ್ದೇವೆ. ಹೀಗಾಗಿ ವಿಷಯುಕ್ತ ಆಹಾರ ಹೆಚ್ಚಾಗಿದ್ದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ ಎಂದರು.

    ಮಣ್ಣಿನ ಸತ್ವ ಉಳಿಸುವ ಅಗತ್ಯವಿದೆ. ವಿಷ ಮುಕ್ತ ಆಹಾರ ಉತ್ಪಾದಿಸಲು ಪಾರಂಪರಿಕ ದೇಸಿ ಪದ್ಧತಿಯ ಕೃಷಿ ಅನಿವಾರ್ಯ. ಈ ಎಲ್ಲ ಆಧಾರದ ಹಿನ್ನೆಲೆಯಲ್ಲಿ ಸಾವಯವ ಗೊಬ್ಬರದ ಕೃಷಿಗೆ ಒತ್ತು ನೀಡುವ ಸಲುವಾಗಿ ಪಶುಪಾಲನೆ ಭಾವನಾತ್ಮಕವಾಗಿ ಮಾಡಬೇಕಿದೆ ಎಂದು ಹೇಳಿದರು.

    ಹಾಲು ಉತ್ಪಾದನೆಯಲ್ಲಿ ತಾಲೂಕಿನಲ್ಲಿ ಕಳೆದ ಮೂರೂವರೆ ದಶಕಗಳಿಂದ ಸುಧಾರಿತ ತಳಿಗಳ ಪರ್ವವೇ ಆರಂಭವಾಗಿದೆ. ತಾಲೂಕಿನಲ್ಲಿ 24 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು ಸಂಕದಹೊಳೆ ಹಾಗೂ ಕಟ್ಟೆಹಕ್ಕಲಿನಲ್ಲಿ 2 ಹಾಲಿನ ಶೀಥಲೀಕರಣ ಘಟಕ ಹೊಂದಲಾಗಿದೆ ಎಂದು ತಿಳಿಸಿದರು.

    ಜಿಪಂ ಸದಸ್ಯ ಕಾಸರವಳ್ಳಿ ಶ್ರೀನಿವಾಸ್, ತಾಪಂ ಉಪಾಧ್ಯಕ್ಷೆ ಯಶೋದಾ ಮಂಜುನಾಥ್, ಸದಸ್ಯರಾದ ಟಿ.ಮಂಜುನಾಥ್, ಗೀತಾಶೆಟ್ಟಿ, ಸಹಕಾರಿ ಮುಖಂಡ ಕೆ.ನಾಗರಾಜ ಶೆಟ್ಟಿ, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಅರುಣ್ ಕುಮಾರ್, ಡಾ. ಮುರಳೀಧರ್, ಡಾ. ಯುವರಾಜ್, ಡಾ. ಕೃಷ್ಣಮೂರ್ತಿ, ಸೊಪ್ಪುಗುಡ್ಡೆ ರಾಘವೇಂದ್ರ, ಟಿ.ಎನ್.ಅನಿಲ್ ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts