More

    ಮಿಣಜಗಿ ಮಾದರಿ ಗ್ರಾಮವನ್ನಾಗಿ ಮಾಡಲು ಬದ್ಧ : ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿಕೆ

    ತಾಳಿಕೋಟೆ : ಮಿಣಜಗಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಲು ಬದ್ಧನಾಗಿದ್ದೇನೆ ಎಂದು ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.

    ಸಮೀಪದ ಮಿಣಜಗಿ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ 25 ಲಕ್ಷ ರೂಗಳಲ್ಲಿ ಕೈಗೊಂಡ ದೇವಸ್ಥಾನ ಜೀರ್ಣೋದ್ಧಾರದ ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
    ಗ್ರಾಮದಲ್ಲಿ ಈಗಾಗಲೇ ಸಿ.ಸಿ. ರಸ್ತೆ, ಡಾಂಬರೀಕರಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಆದರೂ ಇನ್ನೂ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಬೇಕು. ಜತೆಗೆ ಕುಡಿಯುವ ನೀರಿನ ಸಮಸ್ಯೆಗೂ ಶಾಶ್ವತ ಪರಿಹರಿಸಲು ಕ್ರಮ ಕೈಗೊಂಡಿದ್ದೇನೆ. ಗ್ರಾಮದಲ್ಲಿ ಗಣಿಗಾರಿಕೆಯಲ್ಲಿ ಸಾವಿರಾರು ಜನರು ದುಡಿಯುತ್ತಿದ್ದಾರೆ. ಕೆಲವರು ಈ ಕಾರ್ಯಕ್ಕೆ ಅಡ್ಡಿಪಡಿಸುತ್ತಿದ್ದು, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಮುಂದಿನ ದಿನಗಳಲ್ಲಿ ಈ ಕುರಿತು ಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.

    ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.

    ಗ್ರಾ.ಪಂ. ಮಾಜಿ ಸದಸ್ಯ ಬಸನಗೌಡ ವಣಕ್ಯಾಳ, ಸೋಮನಗೌಡ ಕವಡಿಮಟ್ಟಿ, ಎಸ್.ಎಂ. ಬೆಣ್ಣೂರ, ಎ.ಎಂ. ಯಾಳವಾರ, ಎಚ್.ಬಿ. ಬಾಗೇವಾಡಿ, ರಾಜುಗೌಡ ಪಾಟೀಲ, ಸಂಗನಗೌಡ ಬಿರಾದಾರ (ಮಿಲ್ಟ್ರಿ), ಬಸವರಾಜ ಯರನಾಳ, ಡಿ.ಕೆ. ಪಾಟೀಲ, ಶಿವನಗೌಡ ಬಿರಾದಾರ, ಬಸನಗೌಡ ಪಾಟೀಲ, ಜಿ.ಎಂ. ಪಾಟೀಲ, ಬಾಬುಗೌಡ ಬಿರಾದಾರ, ಜಿ.ಎಂ. ಪಾಟೀಲ, ಜಿ.ಎಸ್. ಕಶೆಟ್ಟಿ, ಸಿ.ಎಸ್. ಬಿರಾದಾರ, ಐ.ಬಿ. ಪಾಟೀಲ, ಸುರೇಶ ಯಾಳವಾರ, ಸಿದ್ದನಗೌಡ ಬಿರಾದಾರ ಮತ್ತಿತರರಿದ್ದರು.

    ಜಿ.ಬಿ. ಪಾಟೀಲ ನಿರೂಪಿಸಿದರು. ಮಹಾಂತೇಶ ಬಿರಾದಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts