More

    ವೃತ್ತಿ ಜೀವನದಲ್ಲಿ 20 ಸಾವಿರ ರನ್ ಪೂರೈಸಿದ ಮಿಥಾಲಿ ರಾಜ್

    ಮ್ಯಾಕ್‌ಕೇ: ಭಾರತ ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ವೃತ್ತಿಜೀವನದಲ್ಲಿ 20 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಆಸೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಅವರು ಈ ಮೈಲಿಗಲ್ಲು ನೆಟ್ಟರು. ಈ ಪೈಕಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಡಿಸಿದ 10,400 ರನ್‌ಗಳೂ ಸೇರಿವೆ. 1999ರಿಂದ ಕ್ರಿಕೆಟ್ ಆಡುತ್ತಿರುವ 38 ವರ್ಷದ ಮಿಥಾಲಿ, ಪ್ರಥಮ ದರ್ಜೆ, ಲಿಸ್ಟ್ ಎ, ದೇಶೀಯ ಟಿ20 ಪಂದ್ಯಗಳಲ್ಲಿ ಗಳಿಸಿರುವ ರನ್‌ಗಳೂ ಇದರಲ್ಲಿ ಸೇರಿವೆ.

    ನಾಯಕಿ ಮಿಥಾಲಿ ರಾಜ್ (63 ರನ್, 107 ಎಸೆತ, 3 ಬೌಂಡರಿ) ಅರ್ಧಶತಕದಾಟದ ನಡುವೆಯೂ ಬೌಲರ್‌ಗಳ ನಿಸ್ತೇಜ ನಿರ್ವಹಣೆಯಿಂದಾಗಿ ಭಾರತ ಮಹಿಳಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 9 ವಿಕೆಟ್‌ಗಳಿಂದ ಸೋಲನುಭವಿಸಿತು. ಇದರಿಂದ 3 ಪಂದ್ಯಗಳ ಸರಣಿಯಲ್ಲಿ ಭಾರತ 0-1 ಹಿನ್ನಡೆ ಕಂಡರೆ, ಆತಿಥೇಯ ಆಸೀಸ್ ತಂಡ ಸತತ ಗೆಲುವಿನ ಓಟವನ್ನು 25ನೇ ಪಂದ್ಯಕ್ಕೆ ವಿಸ್ತರಿಸಿಕೊಂಡಿತು. ರಾಯ್ ಮಿಚೆಲ್ ಓವಲ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, 8 ವಿಕೆಟ್‌ಗೆ 225 ರನ್ ಪೇರಿಸಿತು. ಪ್ರತಿಯಾಗಿ ರಾಚೆಲ್ ಹೇಯನ್ಸ್ (93*ರನ್, 100 ಎಸೆತ, 7 ಬೌಂಡರಿ), ಅಲಿಸ್ಸಾ ಹೀಲಿ (77ರನ್, 77 ಎಸೆತ, 8 ಬೌಂಡರಿ, 2 ಸಿಕ್ಸರ್) ಹಾಗೂ ಮೆಗ್ ಲ್ಯಾನಿಂಗ್ (53*ರನ್, 69 ಎಸೆತ, 7 ಬೌಂಡರಿ) ಭರ್ಜರಿ ಬ್ಯಾಟಿಂಗ್‌ನಿಂದ ಆಸೀಸ್, 41 ಓವರ್‌ಗಳಲ್ಲಿ 1 ವಿಕೆಟ್‌ಗೆ 227 ರನ್ ಗಳಿಸಿ ಜಯಿಸಿತು. 2ನೇ ಹಣಾಹಣಿ ಶುಕ್ರವಾರ ನಡೆಯಲಿದೆ.

    ಭಾರತ: 8 ವಿಕೆಟ್‌ಗೆ 225 (ಮಿಥಾಲಿ ರಾಜ್ 63, ರಿಚಾ 32*, ಜೂಲನ್ 20, ಡಾರ್ಸಿ ಬ್ರೌನ್ 33ಕ್ಕೆ 4, ಮೊಲಿನೆಕ್ಸ್ 39ಕ್ಕೆ 2), ಆಸ್ಟ್ರೇಲಿಯಾ: 41 ಓವರ್‌ಗಳಲ್ಲಿ 1 ವಿಕೆಟ್‌ಗೆ 227 (ರಾಚೆಲ್ ಹೇಯನ್ಸ್ 93*, ಅಲಿಸ್ಸಾ ಹೀಲಿ 77, ಲ್ಯಾನಿಂಗ್ 53*, ಪೂನಂ ಯಾದವ್ 58ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts