More

    ಕೇಂದ್ರದಿಂದ ಸರ್ಕಾರಿ ಸಂಸ್ಥೆಗಳ ದುರ್ಬಳಕೆ

    ಚಿಕ್ಕಮಗಳೂರು: ಕೇಂದ್ರ ಸರ್ಕಾರದ ನಿಲುವುಗಳು ಪ್ರಜಾಪ್ರಭುತ್ವ ವ್ಯವಸ್ಥೆ, ಭಾರತ ದೇಶದ ಅಭಿವೃದ್ಧಿಗೆ ಮಾರಕವಾಗಿವೆ ಎಂದು ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಆರೋಪಿಸಿದರು.

    ರಾಷ್ಟ್ರದಲ್ಲಿ ಇಡಿ ಹಾಗೂ ಐಟಿ ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಅಭಿವ್ಯಕ್ತಿ ಸ್ವಾತಂತ್ರೃ, ಹಕ್ಕುಗಳನ್ನು ಕಸಿದುಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಲೋಕಸಭಾ ಅಧಿವೇಶನ ನಡೆಯುವ ಸಂದರ್ಭ ಹೊಗೆ ಬಾಂಬ್ ಎಸೆದ ವ್ಯಕ್ತಿಗಳು ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದರೂ ವಿಪಕ್ಷದವರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
    ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಾಂಗ್ರೆಸ್ ಪಕ್ಷಕ್ಕೆ ಮುಂದೆ ವಿಳಾಸ ಇಲ್ಲದಂತಾಗುತ್ತದೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ವಿಳಾಸವನ್ನು ಹುಡುಕುವ ಕೆಲಸವನ್ನು ನಿಮಗೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಅವರು, ಈ ಹಿಂದೆ ಕೆಜೆಪಿ ಕಟ್ಟಿ ವಿಳಾಸ ಕಳೆದುಕೊಂಡವರಿಂದ ಪಾಠ ಕಲಿಯುವ ಅಗತ್ಯ ಕಾಂಗ್ರೆಸ್‌ಗಿಲ್ಲ ಎಂದು ತಿರುಗೇಟು ನೀಡಿದರು.
    ಗ್ಯಾರಂಟಿ ಯೋಜನೆಗಳು ಹಸಿದವರು, ಬಡವರು, ನಿರ್ಗತಿಕರು, ರೈತರು, ಕಾರ್ಮಿಕರ ಬದುಕನ್ನು ಗಟ್ಟಿಗೊಳಿಸಿವೆ. ಹೀಗಿರುವಾಗ ಬಿಜೆಪಿಯವರು ಎಷ್ಟೇ ಅಪಪ್ರಚಾರ ಮಾಡಿದರೂ ಪ್ರಯೋಜನವಾಗಲ್ಲ. ಕಳೆದ ತಿಂಗಳು ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಭೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕೆಂದು ಒಕ್ಕೊರಲ ಧ್ವನಿ ಮಾಡಿದವರು ಯಾರು ಎಂಬುದನ್ನು ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.
    ಚಿಕ್ಕಮಗಳೂರಿನಲ್ಲಿ ದಂಧೆ ಹೆಚ್ಚಾಗಿದೆ ಎಂದು ಸಿ.ಟಿ.ರವಿ ಆರೋಪಿಸಿದ್ದಾರೆ. ದಂಧೆ ಎಂದರೆ ಏನು. ತಾವು ಈ ಮಾತು ಹೇಳುತ್ತಿದ್ದೀರಿ ಎಂದರೆ ನಿಮಗೆ ಮಾರ್ಗ ತಿಳಿದಿರಬೇಕು. ಕಳೆದ 20 ವರ್ಷಗಳಿಂದ ದಂಧೆಯನ್ನು ತಾವು ನಡೆಸಿರಬೇಕು. ಇಲ್ಲದಿದ್ದರೆ ದಂಧೆಯ ಮಾತುಗಳನ್ನು ಆಡುತ್ತಿರಲಿಲ್ಲ. ಕಾಂಗ್ರೆಸ್‌ಗೆ ದಂಧೆ ಮಾಡಿ ಬದುಕುವ ಅಗತ್ಯವಿಲ್ಲ ಎಂದರು.
    ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬಿನ್ ಮೊಸಸ್, ಪ್ರಮುಖರಾದ ದಯಾನಂದ್, ಸಂತೋಷ್ ಲಕ್ಯಾ, ರಮೇಶ್, ಎಚ್.ಡಿ.ಮಂಜಪ್ಪ ಆಚಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts