More

    ಭಿಕ್ಷೆ ಬೇಡುತ್ತಿದ್ದಾಕೆಗೆ ಕೊನೆಗಾಲದಲ್ಲಿ ಮಕ್ಕಳೊಂದಿಗಿರುವ ಬಯಕೆ; ಮಕ್ಕಳ ಹುಡುಕಾಟಕ್ಕೆ ಶುರುವಾಗಿದೆ ‘ಮಿಷನ್ ಸರೋಜಮ್ಮ’

    ಉಡುಪಿ: ಉಡುಪಿಯ ಬೀದಿ ಬೀದಿಯಲ್ಲಿ 30 ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರು ಇದೀಗ ಬೀಡಿನಗುಡ್ಡೆ ನಿರಾಶ್ರಿತರ ತಾಣದಲ್ಲಿ ಹಾಸಿಗೆ ಹಿಡಿದಿದ್ದು, ಮಕ್ಕಳೊಂದಿಗೆ ಅಂತಿಮ ದಿನ ಕಳೆಯುವ ಇಚ್ಛೆಯಿಂದ ಸಾಮಾಜಿಕ ಕಾರ್ಯಕರ್ತರ ಮೊರೆಹೋಗಿದ್ದಾರೆ. ಅದಕ್ಕಾಗಿ ‘ಮಿಷನ್ ಸರೋಜಮ್ಮ’ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈಕೆಯನ್ನು ಮಕ್ಕಳೊಂದಿಗೆ ಸೇರಿಸುವ ಗುರಿ ಇರಿಸಿಕೊಳ್ಳಲಾಗಿದೆ.

    ಹೋಂ ಡಾಕ್ಟರ್ ಫೌಂಡೇಷನ್ ಸಂಸ್ಥೆ ಈ ಅಜ್ಜಿಗೆ ಕಳೆದ 3 ವರ್ಷಗಳಿಂದ ಊಟದ ವ್ಯವಸ್ಥೆಯನ್ನು ಕಲ್ಪಿಸಿದೆ. ಇದೀಗ ಹಾಸಿಗೆ ಹಿಡಿದಿರುವ ಅಜ್ಜಿ ಮೊದಲ ಬಾರಿ ಆಕೆಯ ಕೊನೆಯ ಆಸೆ ಹೇಳಿಕೊಂಡಿದ್ದು, ಮಂಡ್ಯದಲ್ಲಿ ಮನೆ ಇದೆ. ಮಗ ಬೆಂಗಳೂರಿನಲ್ಲಿ ಆಟೋ ಚಾಲಕರಾಗಿದ್ದಾರೆ. ಗೌರಿ ಹಾಗೂ ರಾಜಮ್ಮ ಎಂಬಿಬ್ಬರು ಹೆಣ್ಣು ಮಕ್ಕಳು ಮಂಡ್ಯ ಭೋವಿ ಕಾಲನಿ, 9ನೇ ಅಡ್ಡರಸ್ತೆಯಲ್ಲಿ ವಾಸವಾಗಿದ್ದಾರೆ. ಅಲ್ಲಿಗೆ ಕರೆದುಕೊಂಡು ಹೋಗಿ ಬಿಟ್ಟು ಬನ್ನಿ ಎನ್ನುತ್ತಿದ್ದಾರೆ.

    ಹೋಂ ಡಾಕ್ಟರ್ ಫೌಂಡೇಷನ್‌ನ ಡಾ. ಶಶಿಕಿರಣ್ ಶೆಟ್ಟಿ (9945130630) ಅಜ್ಜಿಯ ಬೇಡಿಕೆಗೆ ಸ್ಪಂದಿಸಿದ್ದು, ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಿಂದಾಗಿ ಸ್ಥಳೀಯ ನಗರಸಭಾ ಸದಸ್ಯರು ಶಶಿಕಿರಣ್ ಶೆಟ್ಟಿ ಅವರನ್ನು ಸಂಪರ್ಕಿಸಿ ಮಕ್ಕಳನ್ನು ಹುಡುಕಿಕೊಡುವ ಭರವಸೆ ನೀಡಿದ್ದಾರೆ.

    ಭಿಕ್ಷೆ ಬೇಡುತ್ತಿದ್ದಾಕೆಗೆ ಕೊನೆಗಾಲದಲ್ಲಿ ಮಕ್ಕಳೊಂದಿಗಿರುವ ಬಯಕೆ; ಮಕ್ಕಳ ಹುಡುಕಾಟಕ್ಕೆ ಶುರುವಾಗಿದೆ 'ಮಿಷನ್ ಸರೋಜಮ್ಮ'

    ಭಿಕ್ಷೆ ಬೇಡುತ್ತಿದ್ದಾಕೆಗೆ ಕೊನೆಗಾಲದಲ್ಲಿ ಮಕ್ಕಳೊಂದಿಗಿರುವ ಬಯಕೆ; ಮಕ್ಕಳ ಹುಡುಕಾಟಕ್ಕೆ ಶುರುವಾಗಿದೆ 'ಮಿಷನ್ ಸರೋಜಮ್ಮ'

    ಒಂದೂವರೆ ವರ್ಷದ ಮಗನನ್ನೇ ಮಾರಿದ ತಾಯಿ; ನಾಲ್ಕೂವರೆ ವರ್ಷ ಹುಡುಕಾಡಿ ಪುತ್ರನನ್ನು ಪತ್ತೆ ಮಾಡಿ ಪಡೆದ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts