More

    ಪತ್ತೆಯಾಯ್ತು ನೇಪಾಳ ವಿಮಾನ: ಪ್ರಯಾಣಿಕರ ಗುರುತು ಪತ್ತೆ

    ನವದೆಹಲಿ: ನೇಪಾಳದಲ್ಲಿ ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದ ವಿಮಾನ ಪತ್ತೆಯಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಕೊವಾಂಗ್​ ಪರ್ವತ ಪ್ರದೇಶದಲ್ಲಿ ವಿಮಾನ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವಿಮಾನದಲ್ಲಿದ್ದ ಬಹುತೇಕ ಎಲ್ಲರೂ ಬದುಕುಳಿದಿರುವ ಸಾಧ್ಯತೆ ತೀರ ಕಡಿಮೆ ಎನ್ನಲಾಗಿದ್ದು, ಪರ್ವತ ಪ್ರದೇಶವಾಗಿರುವುದರಿಂದ ವಿಮಾನ ಪತನಗೊಂಡ ಸ್ಥಳಕ್ಕೆ ಹೋಗಲು ಕಷ್ಟಕರವಾಗುತ್ತಿದೆ. ಈ ನಡುವೆ ಭಾರತೀಯ ಮೂಲದ ನಾಲ್ವರು ಪ್ರಯಾಣಿಕರು ಮುಂಬೈ ಮೂಲದವರೆಂದು ತಿಳಿದುಬಂದಿದೆ.

    ವಿಮಾನ ಪತನಗೊಂಡ ಸ್ಥಳದಲ್ಲಿ ಭೂ ಕುಸಿತ ಉಂಟಾಗಿರುವುದರಿಂದ ಸೇನೆ ಸ್ಥಳಕ್ಕೆ ತಲುಪುತ್ತಿದೆ ಎಂದು ವರದಿಯಾಗಿದೆ. ತಾರಾ ಏರ್​ 9ಎನ್​​ಎಇಟಿ ಎರಡು ಇಂಜಿನ್​​ವುಳ್ಳ ಖಾಸಗಿ ವಿಮಾನ ಭಾನುವಾರ ಬೆಳಗ್ಗೆ ಕಣ್ಮರೆಯಾಗಿತ್ತು. ಪೋಖ್ರಾದಿಂದ ಹಾರಾಟ ನಡೆಸಿದ್ದ ವಿಮಾನ ಬೆಳಗ್ಗೆ 9.55ಕ್ಕೆ ಸಂಪರ್ಕ ಕಡಿತಗೊಂಡಿತ್ತು. ಕಠ್ಮಂಡುವಿನಿಂದ ಸುಮಾರು 200 ಕಿಮೀ ದೂರದ ಜೊಮ್ಸನ್​​ ನಗರದ ಬಳಿ ಹಾರಾಟ ನಡೆಸುವ ವೇಳೆ ವಿಮಾನ ನಾಪತ್ತೆಯಾಗಿತ್ತು.

    ವಿಮಾನವು ಮುಸ್ತಾಂಗ್​​ ಜಿಲ್ಲೆಯಲ್ಲಿ ಹಾರಾಟ ನಡೆಸಿದ್ದು ಕಾಣಿಸಿಕೊಂಡ ಬಳಿಕ ಧೌಲಗಿರಿ ಪರ್ವತದತ್ತ ಹಾರಿದ ಬಳಿಕ ಕಣ್ಮರೆಯಾಗಿದೆ. ಅದೇ ಸಂದರ್ಭದಲ್ಲಿ ಸಂಪರ್ಕ ಕಡಿತಗೊಂಡಿದೆ ಎಂದು ಜಿಲ್ಲಾಧಿಕಾರಿ ನೇತ್ರಾ ಪ್ರಸಾದ್​​ ತಿಳಿಸಿದ್ದರು. ಇದೀಗ ವಿಮಾನ ಪತ್ತೆಯಾಗಿದೆ.

    ಮುಂಬೈ ಮೂಲದ ಅಶೋಕ್​ ಕುಮಾರ್ ತ್ರಿಪಾಠಿ, ಧನುಶ್​​ ತ್ರಿಪಾಠಿ, ರಿತಿಕಾ ತ್ರಿಪಾಠೀ ಮತ್ತು ವೈಭವ ತ್ರಿಪಾಠಿ ಒಂದೇ ಕುಟುಂಬ ನಾಲ್ವರು ಇದ್ದರು. ಮೂವರು ಸಿಬ್ಬಂದಿ ಸೇರಿ ಜರ್ಮನ್​ನ ಇಬ್ಬರು ಮತ್ತು 13 ಮಂದಿ ನೇಪಾಳ ಮೂಲದವರಿದ್ದರು ಎಂದು ಏರ್​ಲೈನ್​ ವಕ್ತಾರ ಸುದರ್ಶನ್​ ಭರ್ತುವಾಲ ತಿಳಿಸಿದ್ದಾರೆ.

    ನೇಪಾಳ ರಾಯಭಾರ ಕಚೇರಿಯ ಈ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಸಹಾಯವಾಣಿ ಸಂಖ್ಯೆ: 977-9851107021 (ಏಜೆನ್ಸೀಸ್​)

    ನಾಲ್ವರು ಭಾರತೀಯರು ಸೇರಿ 22 ಮಂದಿ ಪ್ರಯಾಣಿಕರಿದ್ದ ನೇಪಾಳ ವಿಮಾನ ನಾಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts