More

    ಮಹಾಮಾರಿ ಕರೊನಾ ಸೋಂಕಿತರ ಸೇವೆಗೆ ನಿಂತ ಭಾರತ ಮೂಲದ ಇಂಗ್ಲೆಂಡ್‌ ಸುಂದರಿ

    ಲಂಡನ್‌: 2019ರ ‘ಮಿಸ್‌ ಇಂಗ್ಲೆಂಡ್‌’ ಸುಂದರಿ ಭಾಷಾ ಮುಖರ್ಜಿ ಈಗ ಕರೊನಾ ಸೋಂಕಿತರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವೈದ್ಯೆಯಾಗಿರುವ ಭಾಷಾ, 2019ರ ಆಗಸ್ಟ್‌ನಲ್ಲಿ ನಡೆದ ಮಿಸ್ ಇಂಗ್ಲೆಂಡ್‌ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ಕಷ್ಟದಲ್ಲಿರುವವರ ಸೇವೆಯೇ ತಮ್ಮ ಗುರಿ ಎಂದು ಅಂದು ಅವರು ಹೇಳಿದ ಮಾತನ್ನು ಇಂದು ಉಳಿಸಿಕೊಂಡಿದ್ದಾರೆ.

    ಕೋಲ್ಕತ್ತಾದಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದ ಭಾಷಾ, ನಂತರ ಲಂಡನ್‌ನಲ್ಲಿ ನೆಲೆಸಿದ್ದರು. ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ನಡೆದಿದ್ದ ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿಯೂ ಅವರು ಭಾಗವಹಿಸಿದ್ದರು. ಆ ಹಂತದಲ್ಲಿ ವೈದ್ಯ ವೃತ್ತಿಯಿಂದ ನಿವೃತ್ತಿ ಪಡೆದಿದ್ದ ಭಾಷಾ, ಈಗ ಪುನಃ ಕರೊನಾದಿಂದಾಗಿ ವೃತ್ತಿ ಮುಂದುವರಿಸುವುದಾಗಿ ಹೇಳಿದ್ದಾರೆ.

    ’ಕರೊನಾ ಸೋಂಕಿನಿಂದ ಇಂಗ್ಲೆಂಡಿನಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದು, ಹೆಚ್ಚು ಹೆಚ್ಚು ವೈದ್ಯರ ಸೇವೆ ಅಗತ್ಯವಿದೆ. ಹಾಗಾಗಿ ನನ್ನ ಮಾಜಿ ಸಹೋದ್ಯೋಗಿಗಳ ಜತೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇದು ನನಗೆ ತುಂಬಾ ಖುಷಿ ನೀಡುತ್ತಿದೆ’ ಎಂದು ಭಾಷಾ ಹೇಳಿದ್ದಾರೆ.

    ಮಿಸ್‌ ಇಂಗ್ಲೆಂಡ್‌ ಆಗಿ ನನ್ನನ್ನು ಗುರುತಿಸಲಾಗುತ್ತಿದೆ. ಆದ್ದರಿಂದ ಇಲ್ಲಿಯೇ ಸೇವೆ ಸಲ್ಲಿಸಲು ನನಗೆ ಬಹು ದೊಡ್ಡ ಅವಕಾಶ ಸಿಕ್ಕಿದೆ. ಇದಕ್ಕಿಂತ ದೊಡ್ಡ ಅವಕಾಶ ಮತ್ತೊಂದಿಲ್ಲ. ಭಾರತದಲ್ಲಿ ಇದ್ದ ಸಂದರ್ಭದಲ್ಲಿ ಇಂಗ್ಲೆಂಡ್‌ನಲ್ಲಿ ಕರೊನಾ ವೈರಸ್‌ನಿಂದ ಭಾರಿ ಹಾನಿ ಉಂಟಾಗುತ್ತಿರುವ ಬಗ್ಗೆ ಓದಿದೆ. ಆದ್ದರಿಂದ ಕೂಡಲೇ ಸೋಂಕಿತರ ನೆರವಿಗೆ ಧಾವಿಸಿದೆ’ ಎಂದಿದ್ದಾರೆ.

    ಆಫ್ರಿಕಾ, ಟರ್ಕಿ, ಭಾರತ, ಪಾಕಿಸ್ತಾನ ಮತ್ತು ಹಲವು ರಾಷ್ಟ್ರಗಳ ದತ್ತಿ ಸಂಸ್ಥೆಗಳಿಗೆ ರಾಯಭಾರಿಯಾಗಿಯೂ ಭಾಷಾ ಕಾರ್ಯ ನಿರ್ವಹಿಸಿದ್ದಾರೆ. ಲಂಡನ್‌ನಲ್ಲಿ ಇದುವರೆಗೆ 6159 ಮಂದಿ ಕರೊನಾ ವೈರಸ್‌ನಿಂದ ಮೃತಪಟ್ಟಿದ್ದು, ಸುಮಾರು 56 ಸಾವಿರ ಮಂದಿ ಸೋಂಕಿತರಾಗಿದ್ದಾರೆ. (ಏಜೆನ್ಸೀಸ್​)

    ಐಎಲ್ಒ ನೀಡಿದೆ ಆತಂಕದ ವರದಿ: ಕರೊನಾದಿಂದಾಗಿ ಭಾರತದಲ್ಲಿ 40 ಕೋಟಿ ಜನರು ಬಡತನದ ಕೂಪಕ್ಕೆ

    ಬ್ರಿಟನ್​ ಪ್ರಧಾನಿ ಬೋರಿಸ್ ಜಾನ್ಸನ್​​ ಸಾವಿನ ಸುದ್ದಿ ಪ್ರಕಟಿಸಿ ತೀವ್ರ ಮುಜುಗರಕ್ಕೀಡಾದ ಪಾಕ್​ ಮುಂಚೂಣಿ ಮಾಧ್ಯಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts