More

    1,679 ಸಹಕಾರ ಸಂಘಗಳಲ್ಲಿ ಅವ್ಯವಹಾರ:ಹಣ ದುರುಪಯೋಗ ಸೇರಿ ಹಲವು ಅಕ್ರಮ

    ಬೆಂಗಳೂರು:ರಾಜ್ಯದ 1,679 ಸಹಕಾರ ಸಂಘಗಳಲ್ಲಿ ಅವ್ಯವಹಾರ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬಹು ರಾಜ್ಯಮಟ್ಟದ ಸಹಕಾರ ಸಂಘ, ಸಹಕಾರ ಮಹಾಮಂಡಳ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​, ಗ್ರಾಮೀಣ ಬ್ಯಾಂಕ್​, ಕೃಷಿ ಪತ್ತಿನ ಸಹಕಾರ ಸಂಘ, ಲ್ಯಾಂಪ್ಸ್​ ಸಹಕಾರ ಬ್ಯಾಂಕ್​, ರೇಷ್ಮೆ ಬೆಳೆಗಾರ ಬ್ಯಾಂಕ್​, ಸಹಕಾರ ಗ್ರೇನ್​ ಬ್ಯಾಂಕ್​, ಪಟ್ಟಣ ಸಹಕಾರ ಬ್ಯಾಂಕ್​, ಪತ್ತಿನ ಸಹಕಾರ ಬ್ಯಾಂಕ್​, ನೌಕರರ ಪತ್ತಿನ ಬ್ಯಾಂಕ್​, ಟಿಎಪಿಸಿಎಂಎಸ್​, ಮಾರಾಟ ಸಹಕಾರ ಸಂಘ, ಸಹಕಾರಿ ಸಕ್ಕರೆ ಕಾರ್ಖಾನೆ, ಸಂಸ್ಕರಣ ಸಹಕಾರ ಸಂಘ ಹಾಗೂ ಸಹಕಾರಿ ನೂಲಿನ ಗಿರಣಿ ಸೇರಿ ಒಟ್ಟು 46,291 ಸಹಕಾರ ಸಂಘಗಳು ರಾಜ್ಯದಲ್ಲಿವೆ.

    ಜಿಲ್ಲಾ. ತಾಲೂಕು, ಹೋಬಳ್ಳಿ ಸೇರಿ ರಾಜ್ಯ ಮಟ್ಟದಲ್ಲಿ ಆರಂಭವಾಗುವ ಕೆಲ ಕೋ ಆಪರೇಟಿವ್​ ಸೊಸೈಟಿಗಳು ಇ&ಸ್ಟಾ$ಂಪಿಂಗ್​ ಹೊರತುಪಡಿಸಿ ಬೇರೆ ಬ್ಯಾಂಕಿನ ವ್ಯವಹಾರಗಳು ನಡೆಸುತ್ತಿಲ್ಲ. ಬರೀ ಸ್ಟಾಂಪಿಂಗ್​ ಪತ್ರ ವಿತರಣೆಗೆ ಸೊಸೈಟಿ ತೆರೆಯಲಾಗುತ್ತದೆ. ರಾಜಕೀಯವಾಗಿ ಬೆಳೆಯಬೇಕೆಂಬ ಆಸೆ ಇಟ್ಟುಕೊಂಡಿರುವ ಕೆಲವರು ಬಳಿ ಕೋಟ್ಯಂತರ ರೂ. ಹಣ ಇರುತ್ತದೆ. ಅಂಥವರು ಹಣ ಹೂಡಿ ಸೊಸೈಟಿ ತೆರೆಯಲಾಗುತ್ತಿದೆ. ಕೆಲ ಸಂಗಳು ರೈತರ ಅಭ್ಯುದಯಕ್ಕಾಗಿ ಶ್ರಮಿಸುತ್ತಿದ್ದರೆ, ಇನ್ನೂ ಕೆಲ ಸಹಕಾರ ಸಂಗಳಲ್ಲಿ ಹಣ ದುರುಪಯೋಗ ಸೇರಿ ವಿವಿಧ ಅಕ್ರಮಗಳು ನಡೆದಿವೆ. ಹಾಗಾಗಿ, ಸೌಹರ್ದ ಆಕ್ಟ್​ ಅಡಿ ಬರುವ ಸಾವಿರಾರು ಸೊಸೈಟಿಗಳು ನಷ್ಟ, ನಿಷ್ಕಿಯ,ದಿವಾಳಿಯಾಗುತ್ತಿವೆ.

    ಹೇಗೆಲ್ಲಾ ಅವ್ಯವಹಾರ?
    ಸೊಸೈಟಿಗಳಲ್ಲಿ ನಕಲಿ (ಆರ್ಟಿಫಿಷಿಯಲ್​) ಠೇವಣಿ ಸೃಷ್ಟಿಸಿರುವುದು, ಠೇವಣಿದಾರರು ನೈಜವಾಗಿ ಇಲ್ಲದಿದ್ದರೂ ಅನ್ಯರ ಹೆಸರಿನಲ್ಲಿ ಠೇವಣಿ ಇದೆ ಎಂದು ಕೋಟ್ಯಂತರ ರೂ.ಸಾಲ ನೀಡಿರುವುದು, ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ ನಿಯಮ ಪಾಲಿಸದೆ ಕಾನೂನು ಉಲ್ಲಂನೆ, ಯಾವುದೇ ಭದ್ರತೆ ಪಡೆಯದೆ ಬೇಕಾದವರಿಗೆ ಸಾಲ ಮಂಜೂರು, ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು, ಖಾತೆದಾರರ ಹಣ ದುರ್ಬಳಕೆ, ಅಧಿಕ ಲಾಭದ ಆಸೆಗೆ ಬೇರೆ ಕಡೆಗಳಲ್ಲಿ ಠೇವಣಿ ಇಟ್ಟಿರುವುದು, ಸಾಲ ಪಡೆದವರು ಕಂತು ಕಟ್ಟದಿರುವುದು, ಆಸ್ತಿ ಮೌಲ್ಯಕ್ಕಿಂತ ಹೆಚ್ಚಿನ ಸಾಲ ನೀಡಿಕೆ, ನಕಲಿ ಚಿನ್ನದ ಮೇಲೆ ಸಾಲ ನೀಡಿಕೆ, ನಕಲಿ ದಾಖಲೆಗಳ ಮೇಲೆ ಸಾಲ ಕೊಟ್ಟಿರುವುದು ಸೇರಿ ವಿವಿಧ ಬಗೆಯ ಅವ್ಯವಹಾರಗಳು ಸಹಕಾರ ಸಂದಲ್ಲಿ ನಡೆದಿವೆ. ಭ್ರಷ್ಟಾಚಾರ, ಕಪ್ಪು ಹಣವನ್ನು ಬಿಳಿಯಾಗಿಸುವುದು, ಚುನಾವಣೆಗೆ ಹಣ ಬಳಸಿಕೊಳ್ಳುತ್ತಿರುವುದು ಹಾಗೂ ದೊಡ್ಡ ಪ್ರಮಾಣದಲ್ಲಿ ರಿಯಲ್​ ಎಸ್ಟೇಟ್​ ಕ್ಷೇತ್ರದಲ್ಲಿ ಹಣ ಹೂಡಿಕೆಯಾಗುತ್ತಿರುವುದು ಸೇರಿ ವಿವಿಧ ಬಗೆಯ ಅಕ್ರಮಗಳ ಸರಮಾಲೆಗಳ ಜತೆಗೆ ಹಣ ದುರ್ಬಳಕೆಗಾಗಿ ಸೊಸೈಟಿಗಳಲ್ಲಿ ಎರಡೆರಡು ಸಾಫ್ಟ್​​ವೇರ್​ ಬಳಸಿಕೊಳ್ಳುತ್ತಿರುವ ಬಗ್ಗೆಯೂ ಗುರುತರ ಆರೋಪಗಳಿವೆ.

    ಅಕ್ರಮ ಗಣಿಗಾರಿಕೆಯಿಂದ ನುಲುಗಿದ 466 ಹಳ್ಳಿಗಳು:ಸಂಕಷ್ಟದಲ್ಲೇ ಕಾಲ ದೂಡುತ್ತಿರುವ ಜನರು

    ಏಕರೂಪ ಸಾಫ್ಟ್​​ವೇರ್​​ ಅಭಿವೃದ್ಧಿಪಡಿಸಿ
    ಕೋ ಆಪರೇಟಿವ್​ ಸೊಸೈಟಿಗಳು ಪ್ರತಿ ವರ್ಷ ಸೆ.1ರೊಳಗೆ ಲೆಕ್ಕಪರಿಶೋಧನೆ ನಡೆಸಿ ವರದಿ ಸಲ್ಲಿಸಬೇಕು. ಆದರೆ, ಕೆಲ ಸಹಕಾರ ಸಂದಲ್ಲಿ ಅಕ್ರಮಗಳನ್ನು ಮರೆಮಾಚಿ ನಾಮ್​ಕೇವಾಸ್ತೆ ಆಡಿಟ್​ ವರದಿ ತಯಾರಿಸುತ್ತಿರುವ ಬಗ್ಗೆ ಆರೋಪಗಳಿವೆ. ರಾಷ್ಟ್ರೀಕೃತ ಬ್ಯಾಂಕ್​, ಅರ್ಬನ್​ ಕೋ ಆಪರೇಟಿವ್​ ಬ್ಯಾಂಕ್​ ಹಾಗೂ ಶೆಡ್ಯೂಲ್ಡ್​ ಬ್ಯಾಂಕ್​ಗಳು ರಿಸರ್ವ್​ ಬ್ಯಾಂಕ್​ ಆಫ್​​​ ಇಂಡಿಯಾ(ಆರ್​ಬಿಐ) ನಿಯಂತ್ರಣದಲ್ಲಿವೆ. ಸಾಫ್ಟ್​​ವೇರ್​ ಮೂಲಕ ನಡೆಯುವ ಈ ಬ್ಯಾಂಕಿನ ಆರ್ಥಿಕ ವ್ಯವಹಾರಗಳು ಆರ್​ಬಿಐಗೆ ತಿಳಿಯುತ್ತದೆ. ಆದರೆ, ಆರ್​ಬಿಐ ವ್ಯಾಪ್ತಿಗೆ ಒಳಪಡದ ಸೊಸೈಟಿಗಳ ಆರ್ಥಿಕ ವ್ಯವಹಾರಗಳು ಯಾರಿಗೂ ಗೊತ್ತಾಗುವುದಿಲ್ಲ. ಹಾಗಾಗಿ, ಈ ಸೊಸೈಟಿಗಳ ವ್ಯವಹಾರವನ್ನು ಪಾರದರ್ಶಕತೆ ತರಲು ಸರ್ಕಾರ, ರಾಜ್ಯಾದ್ಯಂತ ಏಕರೂಪ ಸಾಫ್ಟ್​​ವೇರ್​ ಅಭಿವೃದ್ಧಿಪಡಿಸಬೇಕು.

    ಬಡ್ಡಿ ಆಮಿಷವೊಡ್ಡಿ ಹೂಡಿಕೆ
    ಕೆಲ ಸೊಸೈಟಿಗಳು ಅಧಿಕ ಬಡ್ಡಿ ಆಸೆ ತೋರಿಸಿ ಗ್ರಾಹಕರಿಂದ ನೂರಾರು ಕೋಟಿ ರೂ. ಠೇವಣಿ ಮಾಡಿಸಿ ವಂಚಿಸುತ್ತಿವೆ. ಇದರಿಂದಾಗಿ ಬಡ್ಡಿ ಆಸೆಗಾಗಿ ಠೇವಣಿ ಇಟ್ಟಿರುವ ಲಾಂತರ ಗ್ರಾಹಕರು ಬೀದಿಗೆ ಬಿದ್ದಿದ್ದಾರೆ. ನ್ಯಾಯಕ್ಕಾಗಿ ನಿರಂತರವಾಗಿ ಹೋರಾಟ ನಡೆಸಿದರೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ. ಹಲವು ವರ್ಷಗಳಿಂದ ನೆಲೆಯೂರಿದ್ದ ನಂಬಿಕಸ್ಥ ಸೊಸೈಟಿಗಳು ಗ್ರಾಹಕರು ತಮ್ಮ ಬಳಿ ಹೂಡಿಕೆ ಮಾಡಿದ ನೂರಾರು ಕೋಟಿ ರೂ. ಹಣವನ್ನು ಸಾಲದ ರೂಪದಲ್ಲಿ ಬೇರೆಯವರಿಗೆ ನೀಡಿವೆ. ಆದರೆ, ಸಮರ್ಪಕವಾಗಿ ಕೊಟ್ಟಿರುವ ಆ ಸಾಲವನ್ನು ವಸೂಲು ಮಾಡಲಾಗಿಲ್ಲ. ಸೊಸೈಟಿಗಳ ಮುಖ್ಯಸ್ಥರು ವಿವಿಧ ಆಮಿಷಕ್ಕೊಳಗಾಗಿ ಯಾವುದೇ ಭದ್ರತೆ ಇಲ್ಲದೇ ಪರಿಚಿತರಿಗೆ ಕೋಟ್ಯಂತರ ರೂಪಾಯಿ ಸಾಲ ಕೊಟ್ಟಿದ್ದಾರೆ. ಸಾಲ ಪಡೆದವರು ಹಲವು ಉದ್ಯಮಗಳಲ್ಲಿ ಈ ಹಣವನ್ನು ಹೂಡಿಕೆ ಮಾಡಿ ನಷ್ಟ ಹೊಂದಿರುವುದು ಬಹಿರಂಗವಾಗಿದೆ.

    ಸಹಕಾರ ಸಂಘಗಳ ವಿವರ
    ಕಾರ್ಯನಿರತ ಸ್ಥಗಿತ ಸಮಾಪನೆ ಒಟ್ಟು
    40,195 2,642 3,474 46,291

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts