More

    ಉತ್ತರ ಭಾರತದಲ್ಲಿ ಮೈನಸ್ 4 ಡಿಗ್ರಿ!

    ನವದೆಹಲಿ: ಉತ್ತರ ಭಾರತದಲ್ಲಿ ಈ ವಾರ ತಾಪಮಾನದಲ್ಲಿ ಸ್ವಲ್ಪ ಸುಧಾರಣೆಯಾಗಿದ್ದರೂ ಮುಂದಿನ ವಾರ ಮೈನಸ್ 4 ಡಿಗ್ರಿ ಸೆಲ್ಷಿಯಸ್​ಗೆ ಕುಸಿಯಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಜನವರಿ 14ರಿಂದ 19ರ ನಡುವೆ ಉತ್ತರ ಭಾರತದಲ್ಲಿ ಶೀತ ಮಾರುತ ಹಾವಳಿ ಇರಲಿದೆ. ಅದರಲ್ಲೂ 16ರಿಂದ 18ರ ವರೆಗೆ ಅದು ಉತ್ತುಂಗಕ್ಕೆ ತಲುಪಲಿದೆ ಎಂದು ಆನ್​ಲೈನ್ ಹವಾಮಾನ ವೇದಿಕೆ ‘ಲೈವ್ ವೆದರ್ ಆಫ್ ಇಂಡಿಯಾ’ ಸಂಸ್ಥಾಪಕ ನವದೀಪ್ ದಹಿಯಾ ಟ್ವೀಟ್ ಮಾಡಿದ್ದಾರೆ.

    ದೆಹಲಿಯಲ್ಲಿ ಅಲ್ಪ ಮಳೆಯಾಗಿ ರಾಜಧಾನಿಗೆ ಕೆಲವು ದಿನಗಳ ಮಟ್ಟಿಗೆ ಮಂಜಿನ ವಾತಾವರಣ ಇರಲಿದೆ. ಆದರೂ ದೆಹಲಿ ಮತ್ತು ಅದರ ನೆರೆಹೊರೆಯ ರಾಜ್ಯಗಳ ಕೆಲವು ಭಾಗಗಳಲ್ಲಿ ಶನಿವಾರದಿಂದ ಶೀತ ಗಾಳಿಯ ಸನ್ನಿವೇಶ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಅದಕ್ಕೆ ಇನ್ನೂ ಮೂರು ದಿನ ಇದ್ದು ಈ ನಡುವೆ ಮಂಜು ನಿರ್ಣಾಯಕ ಪಾತ್ರ ವಹಿಸಿ ಬದಲಾವಣೆ ಆಗಲೂಬಹುದು ಎಂದವರು ಅಭಿಪ್ರಾಯಪಟ್ಟಿದ್ದಾರೆ.

    ಏಕ ಅಂಕಿಯ ಗರಿಷ್ಠ ತಾಪಮಾನ ದಾಖಲಾಗಬಹುದು ಹಾಗೂ ‘ಮಂಜು ಮುಸುಕಿದ ಮುಂಜಾನೆ’ ಮತ್ತು ‘ಶೀತಸ್ಪೋಟ’ದ ದಿನಗಳನ್ನು ಕಾಣಬಹುದಾಗಿದೆ ಎಂದು ದಹಿಯಾ ಎಚ್ಚರಿಸಿದ್ದಾರೆ. ಹೊಸ ವರ್ಷದ ಮೊದಲ ತಿಂಗಳ ಕಳೆದಿರುವ 11 ದಿನಗಳು ಇದುವರೆಗಿನ ಐತಿಹಾಸಿಕ ದಿನಗಳಾಗಿದ್ದು ಮುಂದಿನ ಕೆಲವು ದಿನ ಇನ್ನೂ ಭಾರಿ ಚಳಿ ಕಾಡಲಿದೆ ಎಂದು ಅವರು ಹೇಳಿದ್ದಾರೆ. ಇದು 21ನೇ ಶತಮಾನದ ಇದುವರೆಗಿನ ಐತಿಹಾಸಿಕ ಚಳಿಯ ದಿನಗಳಾದರೂ ಅಗಬಹುದು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts