More

    ಏಳು ಹುದ್ದೆಗಳಲ್ಲಿ ಒಂದೇ ಹುದ್ದೆ ಭರ್ತಿ! ಸರ್ಕಾರದ ಸ್ಪಷ್ಟನೆ ಕೇಳಿದ ಹೈಕೋರ್ಟ್

    ನವದೆಹಲಿ: ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದಲ್ಲಿ ಉಪಾಧ್ಯಕ್ಷರ ಸ್ಥಾನ ಬಿಟ್ಟು ಬೇರೆಲ್ಲ ಹುದ್ದೆಗಳು ಖಾಲಿ ಇರುವುದರ ಬಗ್ಗೆ ದೆಹಲಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ 10 ದಿನಗಳೊಳಗೆ ಸ್ಟೇಟಸ್ ರಿಪೋರ್ಟ್ ಸಲ್ಲಿಸಲು ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ಸಚಿವಾಲಯಕ್ಕೆ ಕೋರ್ಟ್ ನಿರ್ದೇಶಿಸಿದೆ.

    ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ(ನ್ಯಾಷನಲ್ ಕಮಿಷನ್ ಫಾರ್ ಮೈನಾರಿಟೀಸ್)ದ ಏಳು ಹುದ್ದೆಗಳಲ್ಲಿ ಆರು ಹುದ್ದೆಗಳು 2020 ರ ಅಕ್ಟೋಬರ್​ನಿಂದ ತೆರವಾಗಿದೆ. ಈ ಹುದ್ದೆಗಳಿಗೆ ಶೀಘ್ರವಾಗಿ ಯೋಗ್ಯರನ್ನು ನೇಮಕಗೊಳಿಸಬೇಕು ಎಂದು ನಿರ್ದೇಶನ ಕೋರಿ ಅಭಯ್ ರತನ್ ಬೌದ್ಧ್ ಎಂಬುವರು ರಿಟ್ ಅರ್ಜಿ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ‘ರೈತ ಹೋರಾಟಗಾರರು ಕುಡಿಯೋದಕ್ಕೆ ಎಣ್ಣೆ ಕೊಡೋಣ ಬನ್ನಿ!’ ಕಾಂಗ್ರೆಸ್​ ನಾಯಕಿಯ ವಿಶೇಷ ಕರೆ

    2020ರ ಏಪ್ರಿಲ್​ನಿಂದ ಅಕ್ಟೋಬರ್ ತಿಂಗಳವರೆಗೆ ತೆರವಾದ ಆಯೋಗದ ಹುದ್ದೆಗಳಿಗೆ ಈವರೆಗೂ ನೇಮಕಾತಿ ಮಾಡಿಲ್ಲ. ಆಯೋಗಕ್ಕೆ ಉಪಾಧ್ಯಕ್ಷರು ಮಾತ್ರ ಇದ್ದು, ಉತ್ತಮ ಕಾರ್ಯನಿರ್ವಹಣೆ ಸಾಧ್ಯವಿಲ್ಲದಾಗಿದೆ. ಇದನ್ನು ಸಚಿವಾಲಯದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.

    ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್, ಇಷ್ಟೊಂದು ಹುದ್ದೆಗಳನ್ನು ತುಂಬದೆ ಇರುವುದಕ್ಕೆ ಕಾರಣವೇನು ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಹತ್ತು ದಿನಗಳ ಒಳಗೆ ಈ ಬಗ್ಗೆ ವರದಿ ಸಲ್ಲಿಸಲು ಹೇಳಿದ್ದಾರೆ.(ಏಜೆನ್ಸೀಸ್)

    ಸುಪ್ರೀಂ ಕೋರ್ಟ್ ಮುಂದೆ ವಾಟ್ಸ್​ಆ್ಯಪ್ ಹೊಸ ನೀತಿ ವಿವಾದ

    ಸುಶಾಂತ್ ಸಿಂಗ್ ಸೋದರಿ ಪ್ರಿಯಾಂಕಾ ವಿರುದ್ಧ ಸಿಬಿಐ ತನಿಖೆಗೆ ಕೋರ್ಟ್ ಅಸ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts