More

    ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

    ದೇವದುರ್ಗ: ಬಡವರು, ಶೋಷಕರ ಕಲ್ಯಾಣಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಹಾಯಕ ಆಯುಕ್ತೆ ಮಹಿಬೂಬಿ ಹೇಳಿದರು.

    ಶೋಷಕರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗ ಜಾರಿ

    ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ 2009ನೇ ಸಾಲಿನಲ್ಲಿ ನೆರೆಹಾವಳಿ ನಿರಾಶ್ರಿತರಾದ ಹೇರುಂಡಿ ಗ್ರಾಮದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ಶುಕ್ರವಾರ ಮಾತನಾಡಿದರು. 2009ರಲ್ಲಿ ಸಂಭವಿಸಿದ ನೆರೆಹಾವಳಿಯಿಂದ ಹೇರುಂಡಿ, ಕುರ್ಕಿಹಳ್ಳಿ, ಶಾವಂತಗೇರಾ, ವೀರಗೋಟ ಸೇರಿ ವಿವಿಧ ಹಳ್ಳಿಗಳ ಜನರು ನಿರಾಶ್ರಿತರಾಗಿದ್ದರು ಎಂದರು.

    ಇದನ್ನೂ ಓದಿ: ಬೀದಿಗಳಿಂದ ಕ್ರೀಡಾಂಗಣದವರೆಗೆ: ಮಾ.2 ರಿಂದ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಉದ್ಘಾಟನಾ ಆವೃತ್ತಿ

    ಹಟ್ಟಿಚಿನ್ನದಗಣಿ ಕಂಪನಿ ಸಹಕಾರದಿಂದ ಗ್ರಾಮದಲ್ಲಿ ಸುಮಾರು 11ಎಕರೆಯಲ್ಲಿ 115 ನಿವೇಶನಗಳಲ್ಲಿ ಮನೆ ನಿರ್ಮಿಸಲಾಗಿತ್ತು. ಈ ಮುಂಚೆ ಹಲವರಿಗೆ ಹಕ್ಕುಪತ್ರ ನೀಡಲಾಗಿದೆ. ಸದ್ಯ 30ಕ್ಕೂ ಹೆಚ್ಚು ಫಲಾನುಭವಿಗೆ ಹಕ್ಕುಪತ್ರ ವಿತರಿಸಿದ್ದು, ಉಳಿದವರಿಗೆ ಹಂತ ಹಂತವಾಗಿ ನೀಡಲಾಗುವುದು. ಜನರು ಸರ್ಕಾರದ ಯೋಜನೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಶಿವಪ್ಪ ಪಲಕನಮರಡಿ ಮಾತನಾಡಿ, 15 ವರ್ಷಗಳಿಂದ ಹೇರುಂಡಿ ಗ್ರಾಮದ 109 ಫಲಾನುಭವಿಗಳು ವಸತಿ ಯೋಜನೆಯಡಿ ಮನೆಹೊಂದಿದ್ದರೂ ಹಕ್ಕುಪತ್ರ ನೀಡಿರಲಿಲ್ಲ. ಇದರಿಂದ ಜೀವನ ಭದ್ರತೆ ಕಾಡುತ್ತಿತ್ತು. ಈ ಕುರಿತು ಸಂಘಟನೆ ಹಲವು ವರ್ಷ ಹೋರಾಟ ಮಾಡಿತ್ತು. ಇದರ ಪರಿಣಾಮವಾಗಿಯೇ ಜನರಿಗೆ ಮನೆಗಳ ಹಕ್ಕುಪತ್ರ ದೊರೆತಿವೆ ಎಂದರು.

    ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಗ್ರೇಡ್-2 ತಹಸೀಲ್ದಾರ್ ವೆಂಕಟೇಶ, ಶಿರಸ್ತೇದಾರ್ ಗೋವಿಂದ, ಕಂದಾಯ ಅಧಿಕಾರಿಗಳಾದ ಭೀಮರಾಯ, ದೇವರೆಡ್ಡಿ, ಹೋರಾಟಗಾರರಾದ ಹನುಮಂತಪ್ಪ ಕಾಕರಗಲ್, ಶಿವರಾಜ್ ರುದ್ರಾಕ್ಷಿ, ಬೂದೆಪ್ಪ ಮ್ಯಾತ್ರಿ ಗಬ್ಬೂರ, ಯಲ್ಲಪ್ಪ ಮಲ್ಲದಕಲ್, ಹನುಮಂತ ಸಮುದ್ರ, ಸಿದ್ದಪ್ಪ ಜಿಂಕಲ್, ಶಿವಲಿಂಗಮ್ಮ, ಯಲ್ಲಪ್ಪ, ರಾಮಪ್ಪ, ರಂಗಪ್ಪ, ಬಸವರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts