More

    ಭಾರತೀಯ ರೈಲ್ವೆಯಿಂದ ಒಂದೊಳ್ಳೆ ಕೆಲಸ; ಲಾಕ್​ಡೌನ್​ ಸಂತ್ರಸ್ತರಿಗೆ ಊಟ ಪೂರೈಕೆ…

    ನವದೆಹಲಿ: ಏಷ್ಯಾದ ಅತಿದೊಡ್ಡ ರೈಲ್ವೆ ಸೇವೆ ಎಂದು ಹೆಸರಾಗಿರುವ ಭಾರತೀಯ ರೈಲ್ವೆ ಲಾಕ್​ಡೌನ್​ ಜಾರಿಯಿಂದಾಗಿ ತೀವ್ರ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುತ್ತಿದ್ದು, ನಿತ್ಯ 2.6 ಲಕ್ಷ ಊಟ ಪೂರೈಸುವುದಾಗಿ ಭರವಸೆ ನೀಡಿದೆ.

    ಕರೊನಾ ವಿರುದ್ಧದ ಹೋರಾಟದಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳುತ್ತಿರುವ ಭಾರತೀಯ ರೈಲ್ವೆ ಈಗಾಗಲೇ ಬೋಗಿಗಳನ್ನು ಐಸೋಲೇಶನ್​ ಹಾಗೂ ಕ್ವಾರಂಟೈನ್​ ಕೇಂದ್ರಗಳನ್ನಾಗಿ ಪರಿವರ್ತನೆ ಮಾಡಿದೆ. ಇದೀಗ ಊಟ ನೀಡಲು ಮುಂದಾಗಿದೆ.

    ರೈಲ್ವೆ ಕಿಚನ್​ ಮೂಲಕ ತಲಾ 15 ರೂ.ಗೆ ಊಟವನ್ನು ಆಯಾ ರಾಜ್ಯಗಳ ಜಿಲ್ಲಾಡಳಿತಗಳಿಗೆ ವಿತರಿಸಲು ಸಿದ್ಧವಾಗಿದೆ. ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ (ಐಆರ್​ಸಿಟಿಸಿ) ಬೇಡಿಕೆಗೆ ಅನುಗುಣವಾಗಿ ಊಟದ ಪೂರೈಕೆಯನ್ನು ಹೆಚ್ಚಿಸಲು ಒಪ್ಪಿದೆ. ಈಗಾಗಲೇ ಭಾರತೀಯ ರೈಲ್ವೆ ನಿತ್ಯ ಅಂದಾಜು ಒಂದು ಲಕ್ಷ ಉಚಿತ ಊಟವನ್ನು ವಿತರಿಸುತ್ತಿದೆ.

    ಆಯಾ ಜಿಲ್ಲಾಡಳಿತ ಹಾಗೂ ರಾಜ್ಯಗಳಿಗೆ ವಲಯ ಮಟ್ಟದಲ್ಲಿ ಅಡುಗೆ ನಿರ್ವಹಣೆ ಕುರಿತು ಮಾಹಿತಿ ನೀಡಿದ್ದು, ನಂತರದ ಅವಧಿಯಲ್ಲಿ ಹಣ ಪಾವತಿ ಮಾಡಬಹುದಾಗಿದೆ ಎಂದು ಅದು ತಿಳಿಸಿದೆ.
    ವೈದ್ಯಕೀಯ ಸಿಬ್ಬಂದಿ ನೆರವಿಗೂ ಧಾವಿಸಿದ ಭಾರತೀಯ ರೈಲ್ವೆ ಪಿಪಿಇ ಕಿಟ್​ಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.

    ದೇಶಕ್ಕೆ ಆಹಾರ ಭದ್ರತೆ ಕಲ್ಪಿಸುವ ಯೋಧರಿಗೇಕಿಲ್ಲ ರಕ್ಷಣೆ? ಕೃಷಿ ಕ್ಷೇತ್ರದ ಸುವ್ಯವಸ್ಥೆಗೆ ನಾಂದಿಯಾಗಲಿದೆಯೇ ಕರೊನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts