More

    ಗಣಿನಾಡಿನ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ: ಹೊಸ ಭರವಸೆ, ಬೆಳಕು ತರಲಿ ಎಂದು ಪ್ರಾರ್ಥಿಸಿದ ಫಾದರ್ಸ್‌

    ಕೂಡ್ಲಿಗಿ: ಕ್ರಿಸ್‌ಮಸ್ ಶಾಂತಿ, ಸಮಾಧಾನ, ಪ್ರೀತಿ, ಐಕ್ಯತೆಯ ಸಂಕೇತವಾಗಿದೆ ಎಂದು ಸೇಂಟ್ ಮೈಕಲ್ ಚರ್ಚ್‌ನ ಫಾದರ್ ಆನಂದ್ ಪ್ರಸಾದ್ ಹೇಳಿದರು.

    ಪಟ್ಟಣದ ಸಂತ ಮೈಕಲ್ ಚರ್ಚ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಶತಮಾದದ ಅತಿ ಕಷ್ಟಕಾರವಾದ ವರ್ಷಗಳಲ್ಲಿ 2020 ಅಗ್ರಸ್ಥಾನದಲ್ಲಿದೆ. ದಿಢೀರನೆ ಕಾಣಿಸಿಕೊಂಡ ಕಣ್ಣಿಗೆ ಕಾಣದ ಕರೊನಾ ವೈರಸ್ ಮಾನವಕುಲವನ್ನು ಕಲ್ಪನೆಗೂ ನಿಲುಕದಷ್ಟು ಘಾಸಿಗೊಳಿಸಿದೆ. ಇಂಥ ಸಂದರ್ಭದಲ್ಲಿ ಕ್ರಿಸ್‌ಮಸ್ ಹೊಸ ಭರವಸೆ ಮತ್ತು ಪ್ರತಿಯೊಬ್ಬರಿಗೂ ಹೊಸ ಬೆಳಕು ತರಲಿ. ಪ್ರಭು ಯೇಸುವಿನ ಜನನದ ಉತ್ಸವ ಕತ್ತಲೆ ತುಂಬಿದ ವಿಶ್ವಕ್ಕೆ ಬೆಳಕಾದಂತೆ ಜಗತ್ತಿಗೆ ಆವರಿಸಿರುವ ಕತ್ತಲೆ ಸರಿದು ಬೆಳಕು ಮೂಡಲಿ ಎಂದು ಪ್ರಾರ್ಥಿಸಿದರು.

    ಕಂಪ್ಲಿ: ಕ್ರಿಸ್‌ಮಸ್ ಶಾಂತಿ, ಪ್ರೀತಿಯ ಬೆಳಕಿನ ಹಬ್ಬವಾಗಿದೆ ಎಂದು ಸಹಾಯ ಮಾತೆ ದೇವಾಲಯದ ಫಾದರ್ ವೈ.ಆನಂದ್ ಹೇಳಿದರು. ಇಲ್ಲಿನ ಸಕ್ಕರೆ ಕಾರ್ಖಾನೆ ಪ್ರದೇಶದಲ್ಲಿನ ಸಹಾಯ ಮಾತೆ ದೇವಾಲಯದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ರಿಸ್‌ಮಸ್ ಆಚರಣೆಯಲ್ಲಿ ಮಾತನಾಡಿದರು. ದೇವಕುಮಾರ ಯೇಸುಕ್ರಿಸ್ತ ಮನುಷ್ಯ ರೂಪ ತಾಳಿ ಪ್ರತಿಯೊಬ್ಬರೂ ವಿಶ್ವಾಸದಿಂದ ಪರಸ್ಪರ ಪ್ರೀತಿ, ಪ್ರೇಮ, ಮಮತೆಗಳಿಂದ ಜೀವಿಸುವಂತೆ ಬೋಧಿಸಿದ್ದಾರೆ. ಸರ್ವರೂ ಯೇಸುಕ್ರಿಸ್ತನ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿ. ಕರೊನಾ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಪ್ರಾರ್ಥಿಸಲಾಯಿತು. ಯೇಸುಕ್ರಿಸ್ತನ ಜನನ ವೃತ್ತಾಂತ ಸಾರುವ ಕ್ರಿಬ್ಸ್ ರಚಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts