More

    ಮಂತ್ರಿ ಭಾಗ್ಯ ಹಣೆ ಬರಹದಲ್ಲಿ ಇರಲಿಕ್ಕಿಲ್ಲ ! ಸಚಿವ ಸ್ಥಾನದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಶಾಸಕ ಯಶವಂತರಾಯಗೌಡ ಪಾಟೀಲ..

    ವಿಜಯಪುರ: ಬಹುತೇಕ ಮಂತ್ರಿಗಿರಿ ನನ್ನ ಹಣೆಬರಹದಲ್ಲಿ ಇರಲಿಕ್ಕಿಲ್ಲ ಅಥವಾ ನಮ್ಮ ಕ್ಷೇತ್ರದ ನಸೀಬಿನಲ್ಲಿಯೇ ಇರಲಿಕ್ಕಿಲ್ಲ….!

    ಹೀಗೊಂದು ವಿಷಾದದ ನಗೆ ಬೀರಿದ್ದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನ ಕೊಡಬೇಕಾಗಿದ್ದು ಮುಖ್ಯಮಂತ್ರಿಗಳ ಪರಮಾಧಿಕಾರ. ಮುಖ್ಯಮಂತ್ರಿಗಳು ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರಬೇಕು. ಹೀಗಾಗಿ ಆ ಬಗ್ಗೆ ನಾನೇನೂ ಅಪೇಕ್ಷಿತನಲ್ಲ ಎಂದರು.

    ಸ್ವಾತಂತ್ರಾೃ ನಂತರ ಇಂಡಿ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಈ ಹಿಂದೆ ಸುರಪುರ ಹಾಗೂ ಆರ್.ಆರ್. ಕಲ್ಲೂರ ಅವರು ತಲಾ ಮೂರು ಬಾರಿ ಶಾಸಕರಾಗಿ ಆಯ್ಕೆಯಾದರೂ ಮಂತ್ರಿಯಾಗಲಿಲ್ಲ. ರವಿಕಾಂತ ಪಾಟೀಲ ಪಕ್ಷೇತರವಾಗಿ ಮೂರು ಬಾರಿ ಆಯ್ಕೆಯಾದರು. ಉಳಿದವರು ಒಂದೊಂದು ಬಾರಿ ಗೆದ್ದರು. ಯಾರೊಬ್ಬರಿಗೂ ಮಂತ್ರಿಯಾಗುವ ಅವಕಾಶ ಸಿಗಲಿಲ್ಲ. ಹೀಗಾಗಿ ನನಗೇನು ಅಪೇಕ್ಷೆ ಇಲ್ಲ. ನನಗಿಂತಲೂ ಕ್ಷೇತ್ರದ ಜನರ ಅಪೇಕ್ಷೆ ಇದೆ. ಆದರೂ ಖುಷಿ, ಆಗಲಿಲ್ಲವೆಂದರೂ ಖಷಿ ಎಂದರು.

    ಇನ್ನು ನಿಗಮ-ಮಂಡಳಿಗಳಿಗೆ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ನಿರಾಕರಣೆ ವ್ಯಕ್ತಪಡಿಸಿದ ಶಾಸಕ ಯಶವಂತರಾಯಗೌಡ ಪಾಟೀಲ, ನಿಗಮ ಮಂಡಳಿ ಸ್ಥಾನಕ್ಕೆ ಕಾರ್ಯಕರ್ತರನ್ನು ಪರಿಗಣಿಸಬೇಕು. ಪಕ್ಷದ ಆಧಾರ ಸ್ಥಂಭವೇ ಕಾರ್ಯಕರ್ತರು. ಹೀಗಾಗಿ ಅವರಿಗೆ ಅವಕಾಶ ಕೊಡಬೇಕು. ವಂಚಿತ ಪ್ರದೇಶ, ವಂಚಿತ ಸಮುದಾಯದವರಿಗೆ ಪಕ್ಷಕ್ಕಾಗಿ ಶ್ರದ್ಧೆ, ನಿಷ್ಠೆಯಿಂದ ದುಡಿದವರಿಗೆ ಅವಕಾಶ ಸಿಗಲಿ ಎಂಬ ಸದಾಶಯ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts