More

    ಭಿನ್ನಮತವಿಲ್ಲ, ಶೆಟ್ಟರ್ ಮನೆಯಲ್ಲಿ ಸೇರಿದ್ದು ಅನುದಾನ ಪಡೆಯುವ ಉದ್ದೇಶದಿಂದ- ಸಚಿವ ಶ್ರೀರಾಮುಲು

    ರಾಯಚೂರು: ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳದೇ ಸದನ ಬಹಿಷ್ಕರಿಸಿರುವ ಕಾಂಗ್ರೆಸ್ ಪಕ್ಷದ ಕ್ರಮ ಸರಿಯಲ್ಲ. ಯಾವ ಕಾರಣಕ್ಕಾಗಿ ಕಾಂಗ್ರೆಸ್ ಸದಸ್ಯರು ಈ ಬಹಿಷ್ಕಾರ ಹಾಕಿದ್ದಾರೆ ಎಂದು ಸಚಿವ ಶ್ರೀರಾಮುಲು ಕೇಳಿದ್ದಾರೆ.

    ರಾಯಚೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರ ಪಾಲಿಗೆ ಆನಂದ್ ಸಿಂಗ್, ನಾಗೇಂದ್ರ ಅವರೆಲ್ಲ ಕಾಂಗ್ರೆಸ್​ನಲ್ಲಿದ್ದಾಗ ಪ್ರಾಮಾಣಿಕರು. ಬಿಜೆಪಿಗೆ ಬಂದು ಸಚಿವರಾಗುತ್ತಿದ್ದಂತೆ ಇವರೆಲ್ಲರೂ ಭ್ರಷ್ಟರಾದರೆ? ಅವರು ಕಾಂಗ್ರೆಸ್​ ಪಕ್ಷಕ್ಕೆ ಹೋಗುವ ಮುಂಚೆ ಬಿಜೆಪಿಯಲ್ಲೇ ಇದ್ದವರು. ಅರಣ್ಯ ವಿಚಾರಕ್ಕೆ ಸಂಬಂಧಿಸಿ ಆನಂದ್ ಸಿಂಗ್ ಆರೋಪಿಯಲ್ಲ, ರಾಜಕೀಯ ಪಿತೂರಿ ಕಾರಣಕ್ಕೆ ಬಳ್ಳಾರಿಗೆ ಕೆಟ್ಟ ಹೆಸರು ಬಂತು. ರಾಜಕೀಯ ಉದ್ದೇಶಕ್ಕಾಗಿಯೇ ಆನಂದ್ ಸಿಂಗ್, ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದ್ದು ಎಂದು ಶ್ರೀರಾಮುಲು ಹೇಳಿದರು.

    ಹುಬ್ಬಳ್ಳಿ ಮತ್ತು ಬೀದರ್ ನಲ್ಲಿ ಕೆಲವರು‌ ಪಾಕಿಸ್ತಾನದ ಪರ ಜೈಕಾರ‌ ಹಾಕುವವರನ್ನು ಬೆಂಬಲಿಸುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದೆ. ಇಂತಹ ವಿಷಯಗಳಲ್ಲಿ ಬಿಜೆಪಿ ಸರ್ಕಾರ ಸುಮ್ಮನಿರುವುದಿಲ್ಲ. ಭಯೋತ್ಪಾದನೆಗೆ ಪ್ರಚೋದನೆ ಕೊಟ್ಟು ಭಾರತವನ್ನು ಪಾಕಿಸ್ತಾನಕ್ಕೆ ಒತ್ತೆ ಇಟ್ಟು ಜೈಕಾರ ಹಾಕುವ ಸ್ಥಿತಿಗೆ ಬಂದಿದ್ದಾರೆ ಕಾಂಗ್ರೆಸ್​ನವರು. ಅವರ ಇಂತಹ ನಡವಳಿಕೆಗಳನ್ನು ಸಹಿಸಲಾಗದು. ಕಠಿಣ ಕ್ರಮ ಕೈಗೊಳ್ಳಲಾಗುವುದು. ಹುಬ್ಬಳ್ಳಿಯ ಪಾಕಿಸ್ತಾನದ ಪರ ಘೋಷಣೆ ಮಾಡಿದವರನ್ನು ಬೆಂಬಲಿಸುವ ಪ್ರಶ್ನೆ ಇಲ್ಲ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಸರ್ಕಾರ ಸನ್ನದ್ಧವಾಗಿದೆ. ಬಂಧನ ಮಾಡಿ ನಂತರ ಬಿಡುಗಡೆ ಮಾಡಿರುವುದು ಹಾಗೂ ಪುನಃ ಬಂಧಿಸಿರುವುದು ಕಾನೂನಿನ ಭಾಗವಾಗಿದ್ದು, ಅದರಲ್ಲಿ ರಾಜಕೀಯ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

    ಪ್ರವಾಹಕ್ಕೆ ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸಿದೆ. ಪ್ರಧಾನಮಂತ್ರಿ ಎದುರು ಸಿಎಂ ಪ್ರವಾಹ ಪ್ರಸ್ತಾಪಿಸಿದ ನಂತರ ಎರಡನೇ ಕಂತು ಬಂದಿದೆ ಎಂದ ಸಚಿವರು, ಶಿಶು, ಬಾಣಂತಿಯ ‌ಮರಣ ತಪ್ಪಿಸಲು ಪೌಷ್ಟಿಕ ಆಹಾರಕ್ಕಾಗಿ ೧೫ ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದರು.

    ಬಿಎಸ್ ವೈ ಪ್ರಶ್ನಾತೀತ ನಾಯಕರು, ಉತ್ತರ ಮತ್ತು ಕಲ್ಯಾಣ ಕರ್ನಾಟಕಕ್ಕೆ ಬಜೆಟಲ್ಲಿ ಹೆಚ್ಚಿನ ಅನುದಾನ ನೀಡುವ ಕುರಿತು ಚರ್ಚಿಸಲು ಶಾಸಕರು ಶೆಟ್ಟರ್ ಮನೆಯಲ್ಲಿ ಸೇರಿದ್ದರೇ ವಿನಾ ಬೇರೇನೂ ಉದ್ದೇಶದಿಂದಲ್ಲ ಎಂದು ಶ್ರೀ ರಾಮುಲು ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts