More

    ಪರಿಹಾರ ಹಣಕ್ಕಾಗಿ ಬರಗಾಲ ಬರಲೆಂದು ರೈತರು ಬಯಸುತ್ತಾರೆ: ಸಚಿವ ಶಿವಾನಂದ ಪಾಟೀಲ್​ ವಿವಾದ

    ಚಿಕ್ಕೋಡಿ: ಪರಿಹಾರದ ಹಣಕ್ಕೋಸ್ಕರ ಬರಗಾಲ ಬರೆಲೆಂದು ರೈತರು ಬಯಸುತ್ತಾರೆ ಎನ್ನುವ ಮೂಲಕ ಸಕ್ಕರೆ ಸಚಿವ ಶಿವಾನಂದ ಪಾಟೀಲ್​ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರು ರೈತರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಡಿ.23ರಂದು ರಾಷ್ಟ್ರೀಯ ರೈತ ದಿನವಾಗಿ ಆಚರಿಸಲಾಯಿತು. ಇದರ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ. ದೇಶದ ಬೆನ್ನೆಲುಬಾದ ರೈತರ ವಿರುದ್ಧ ಸಚಿವರು ಉದ್ಧಟತನದ ಮಾತುಗಳನ್ನಾಡಿದ್ದಾರೆ.

    ವಿವಾದಾತ್ಮಕ ಹೇಳಿಕೆ ಏನು?
    ರೈತರಿಗೆ ಇರುವುದೊಂದೇ ಆಸೆ, ಮೇಲಿಂದ ಮೇಲೆ ಬರಗಾಲ ಬರಲಿ ಎಂದು ಬಯಸುತ್ತಾರೆ. ಸರ್ಕಾರ ಕೊಡುವ ಪರಿಹಾರದ ಹಣಕ್ಕಾಗಿ ರೈತರು ಈ ರೀತಿ ಆಸೆ ಪಡುತ್ತಿದ್ದಾರೆ. ರೈತರಿಗೆ ಪರಿಹಾರ ನೀಡಿದ ಬಳಿಕ ರೈತರ ಆತ್ಮಹತ್ಯೆ ಸಂಖ್ಯೆಗಳು ಹೆಚ್ಚಾಗುತ್ತಿವೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

    ಇಂದು ವಿದ್ಯುತ್​ ಸೇರಿದಂತೆ ಎಲ್ಲವೂ ಪುಕ್ಕಟೆಯಾಗಿ ಸಿಗುತ್ತಿದೆ. ಆದರೂ ರೈತರಿಗೆ ಮೇಲಿಂದ ಮೇಲೆ ಬರಗಾಲ ಬರಲಿ ಎಂಬುದೇ ಆಸೆಯಾಗಿದೆ. ಏಕೆಂದರೆ ತಾವು ಮಾಡಿ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತದೆ ಎಂಬ ಬಯಕೆಯಾಗಿದೆ. ಹೀಗಾಗಿ ಅಂತಾ ಬರಗಾಲ ಬಯಸುತ್ತಿದ್ದಾರೆ. ಆದರೆ, ಸರ್ಕಾರ ಸಾಲಮನ್ನಾ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದಿದ್ದಾರೆ.

    ಇದೇ ಮೊದಲೇನಲ್ಲ
    ಶಿವಾನಂದ ಪಾಟೀಲ ವಿವಾದಾತ್ಮಕ ಹೇಳಿಕೆ ಇದೇ ಮೊದಲೇನಲ್ಲ. ಈ ಹಿಂದೆಯೂ ರೈತರ ಬಗ್ಗೆ ಲಘುವಾಗಿ ಮಾತನಾಡಿದ ಉದಾಹರಣೆಗಳಿವೆ. ಮದ್ಯ ವ್ಯಸನಕ್ಕೆ ತುತ್ತಾದರೂ ಮತ್ತು ಇನ್ಯಾವುದೇ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟರು ಆತ್ಮಹತ್ಯೆ ಎಂದು ಕತೆ ಕಟ್ಟುತ್ತಾರೆ. ಪರಿಹಾರ ಸಿಗುತ್ತೆ ಎನ್ನುವ ದುರಾಸೆ ಸಂಬಂಧಿಕರದ್ದು. ರೈತರ ಆತ್ಮಹತ್ಯೆಗಳು ಹೊಸದೇನಲ್ಲ. ಆದರೆ, 2015 ರಲ್ಲಿ ನಾವು ಐದು ಲಕ್ಷ ರೂ. ಪರಿಹಾರ ಕೊಡಲು ಆರಂಭಿಸಿದ ಬಳಿಕ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts