More

    ಪಾಕ್​ ಪರ ಘೋಷಣೆ, ರಾಮೇಶ್ವರಂ ಕೆಫೆ ಬ್ಲಾಸ್ಟ್​ ಸಿಲ್ಲಿ ಅಟೆಂಪ್ಟ್: ಸಚಿವ ಶರಣಪ್ರಕಾಶ್ ಪಾಟೀಲ್

    ಕಲಬುರಗಿ: ಫೆಬ್ರವರಿ 27ರಂದು ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ, ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್​ ಸ್ಫೋಟ ಪ್ರಕರಣಗಳು ಸಿಲ್ಲಿ ಅಟೆಂಪ್ಟ್​ ಎಂದು ಹೇಳುವ ಮೂಲಕ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್​ ಪಾಟೀಲ್​ ವಿವಾದದ ಕಿಡಿ ಹೊತ್ತಿಸಿದ್ದಾರೆ.

    ಕಲಬುರಗಿಯಲ್ಲಿ ಈ ಕುರಿತು ಮಾತನಾಡಿದ ಸಚಿವ ಶರಣಪ್ರಕಾಶ್​ ಪಾಟೀಲ್​, ನಮ್ಮ ಸರ್ಕಾರದ ಉದ್ದೇಶ ರಾಜ್ಯದ ಯೋಗಕ್ಷೇಮ, ಶಾಂತಿ-ಸುವ್ಯವಸ್ಥೆ ಮತ್ತು ಅಭಿವೃದ್ಧಿ ಇದೊಂದೆ ನಮ್ಮ ಗುರಿ ಎಂದು ಹೇಳಿದ್ದಾರೆ.

    ರಾಜ್ಯದಲ್ಲಿ ಶಾಂತಿ ಭಂಗ ಮಾಡೋಕೆ ಕೆಲವರು ಸೃಷ್ಟಿ ಮಾಡುತ್ತಾರೆ. ನಮ್ಮ ಸರ್ಕಾರ ಇವುಗಳಿಗೆಲ್ಲ ಸೊಪ್ಪು ಹಾಕುವುದಿಲ್ಲ.ನಮ್ಮ ಗುರಿ ರಾಜ್ಯದ ಅಭಿವೃದ್ಧಿ. ಇಂತಹ ಸಣ್ಣ ಘಟನೆಗೆ ನಾವು ವಿಚಲಿತರಾಗುವುದಿಲ್ಲ. ಈ ರೀತಿ ಕೃತ್ಯ ಪ್ರತಿ ದಿನ ನಡೆಯುವುದಿಲ್ಲ. ಬಿಗಿ ಭದ್ರತೆಯ ಸಂಸತ್‌ ಭವನದಲ್ಲೇ ದೊಡ್ಡ ಘಟನೆ ನಡೆದಿದೆ. ದಿಸ್ ಆರ್ ಆಲ್ ಫ್ರಿಂಜ್‌ ಎಲಿಮೆಂಟ್ಸ್‌. ಇದೊಂದು ಸಿಲ್ಲಿ ಅಟೆಂಪ್ಟ್ ಎಂದು ಹೇಳಿದ್ದಾರೆ.

    BJP tweet

    ಇದನ್ನೂ ಓದಿ: ಕೊಹ್ಲಿ ಟೆಸ್ಟ್​ ಸರಣಿಯಿಂದ ಹೊರಗುಳಿದಿರುವುದು ನಾಚಿಕೆಗೇಡಿನ ಸಂಗತಿ; ಇಂಗ್ಲೆಂಡ್​ ವೇಗಿ ಹೀಗಂದಿದ್ಯಾಕೆhttps://www.vijayavani.net/james-andersons-blockbuster-comment-on-india-stars-absence-in-test-series

    ಅಸ್ಥಿರ ಮಾಡುವ ಪ್ರಯತ್ನ ನಡೆಯುತ್ತಿವೆ

    ಇತ್ತ ತಾವು ನೀಡಿದ ಹೇಳಿಕೆ ವೈರಲ್​ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸಚಿವ ಶರಣಪ್ರಕಾಶ್​ ಪಾಟೀಲ್, ರಾಜ್ಯದಲ್ಲಿ ಕೆಲವು ಶಕ್ತಿಗಳು ಶಾಂತಿ ಹಾಳು ಮಾಡುವ ಕೆಲಸ ಮಾಡುತ್ತಿವೆ. ಹೀಗಾಗಿ ಆ ಪ್ರಕರಣವನ್ನು ಉಲ್ಲೇಖಿಸಿ ಸಿಲ್ಲಿ ಅಂತಾ ಹೇಳಿದ್ದೇನೆ ಹೊರತು ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣವನ್ನು ಹೇಳಿಲ್ಲ. ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದು ದೇಶದ್ರೋಹದ ಕೆಲಸವಾಗಿದ್ದು ಉಗ್ರರ ಕೃತ್ಯಕ್ಕೆ ನಾನು ಸಿಲ್ಲಿ ಅಂತಾ ಹೇಳಿಲ್ಲ. ರಾಜಕೀಯ ಅಸ್ಥಿರ ಮಾಡುವ ಪ್ರಯತ್ನ ನಡೆಯುತ್ತಿವೆ ಅದಕ್ಕೆ ನಾನು ಸಿಲ್ಲಿ ಎಂದಿದ್ದೇನೆಂದು ಸ್ಪಷ್ಟನೆ ನೀಡಿದ್ದಾರೆ.

    ಇದು ನಿಮಗೆ ಸಿಲ್ಲಿ ಅಟೆಂಪ್ಟಾ

    ಇತ್ತ ಶರಣಪ್ರಕಾಶ ಪಾಟೀಲ್​ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಘಟಕ, ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್ ಎಂದು ಕೂಗಿರುವುದು ಸಿಲ್ಲಿ ಅಟೆಂಪ್ಟಾ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಬ್ಲಾಸ್ಟ್‌ ಮಾಡಿರುವುದು ಸಿಲ್ಲಿ ಅಟೆಂಪ್ಟಾ, ನೂರಾರು ಜನ ಸತ್ತರೆ ಮಾತ್ರ ಅದು ನಿಮ್ಮ ಪ್ರಕಾರ ಭಯೋತ್ಪಾದನಾ ದಾಳಿ, ಅದೇ ಹತ್ತು ಜನ ಬಾಂಬ್‌ ಸ್ಪೋಟದಿಂದ ಗಾಯಗೊಂಡರೆ, ಅದು ನಿಮಗೆ ಸಿಲ್ಲಿ ಅಟೆಂಪ್ಟು. ಬಾಂಬ್‌ ಇಟ್ಟವನು ಬ್ರದರ್‌, ಬೆಂಕಿ ಹಚ್ಚಿದವರಿಗೆ ಅಮಾಯಕ ಅನ್ನೋ ಪಟ್ಟ ಕಟ್ಟುವ ನಿಮಗೆ, ನಿಮ್ಮ ಸಿಲ್ಲಿ ಅಟೆಂಪ್ಟ್‌‌ಗಳಿಗೆ ಕರ್ನಾಟಕದ ಜನತೆ ಇನ್ನೊಂದು ತಿಂಗಳಲ್ಲಿ ತಕ್ಕ ಉತ್ತರ ನೀಡುವುದು ನಿಶ್ಚಿತ ಎಂದು ತಿರುಗೇಟು ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts