More

    ಕೊಹ್ಲಿ ಟೆಸ್ಟ್​ ಸರಣಿಯಿಂದ ಹೊರಗುಳಿದಿರುವುದು ನಾಚಿಕೆಗೇಡಿನ ಸಂಗತಿ; ಇಂಗ್ಲೆಂಡ್​ ವೇಗಿ ಹೀಗಂದಿದ್ಯಾಕೆ

    ನವದೆಹಲಿ: ಪ್ರವಾಸಿ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಅತಿಥೇಯರು ಮೇಲುಗೈ ಸಾಧಿಸಿದ್ದು, ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದ್ದಾರೆ. ಇನ್ನು ಸರಣಿಯ ಐದನೇ ಪಂದ್ಯ ಮಾರ್ಚ್​ 07ರಂದು ಧರ್ಮಾಶಾಲಾದಲ್ಲಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ಪ್ರವಾಸಿ ತಂಡದ ಆಟಗಾರನೋರ್ವ ವಿರಾಟ್​ ಕೊಹ್ಲಿ ಕುರಿತು ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ.

    ವೈಯಕ್ತಿಕ ಕಾರಣಗಳಿಂ ವಿರಾಟ್​ ಕೊಹ್ಲಿ ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗಿಲ್ಲ. ವಿರಾಟ್​ ಕೊಹ್ಲಿ ಅನುಪಸ್ಥಿತಿ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚು ಪರಿಣಾಮ ಬೀರಿದ್ದು, ಇದು ಅಭಿಮಾನಿಗಳನ್ನು ನಿರಾಸೆಗೊಳಿಸಿದ್ದು ಮಾತ್ರವಲ್ಲದೇ ಸ್ವತಃ ಇಂಗ್ಲೆಂಡ್​ ವೇಗಿ ಜೇಮ್ಸ್​ ಆ್ಯಂಡರ್ಸನ್​ ವಿಷಾದ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣ ಸ್ಫೋಟಕ ಬ್ಯಾಟಿಂಗ್; ಸತತ ಎರಡನೇ ಜಯ ದಾಖಲಿಸಿದ ಕರ್ನಾಟಕ ಬುಲ್ಡೋಜರ್ಸ್​​

    ಈ ಕುರಿತು ಮಾತನಾಡಿರುವ ವೇಗಿ ಆ್ಯಂಡರ್ಸನ್​, ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ವಿರಾಟ್​ ಕೊಹ್ಲಿಗೆ ಬೌಲಿಂಗ್​ ಮಾಡದೆ ಇರುವುದು ನಾಚಿಕೆಗೇಡಿನ ಸಂಗತಿ. ಕೊಹ್ಲಿ ಆಡದೇ ಇರುವುದಕ್ಕೆ ಇಂಗ್ಲೆಂಡ್ ತಂಡದ ಅಭಿಮಾನಿಗಳು ಹೆಚ್ಚು ಖುಷಿಯಾಗುತ್ತಾರೆ. ಆದರೆ, ಇದು ನನ್ನ ದೃಷ್ಟಿಕೋನದಿಂದ ಒಳ್ಳೆಯದಲ್ಲ, ಏಕೆಂದರೆ ನಾನು ಅತ್ಯುತ್ತಮ ಆಟಗಾರರ ವಿರುದ್ಧ ಆಡಲು ಬಯಸುತ್ತೇನೆ. ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ, ಅವರು ಸರಣಿಯ ಭಾಗವಾಗಿದ್ರೆ ಚೆನ್ನಾಗಿ ಇರುತ್ತಿತ್ತು ಎಂದು ಹೇಳಿದ್ದಾರೆ.

    ಹಲವು ವರ್ಷಗಳಿಂದ ವಿರಾಟ್​ ಕೊಹ್ಲಿಗೆ ಬೌಲಿಂಗ್​ ಮಾಡುವುದು ಸವಾಲಿನ ಕೆಲಸವಾಗಿದೆ. ಏಕೆಂದರೆ ಭಾರತದ ಪಿಚ್​ಗಳಲ್ಲಿ ರಿವರ್ಸ್​ ಸ್ವಿಂಗ್​ ಹೆಚ್ಚು ಪರಿಣಾಮ ಬೀರುತ್ತದೆ. ಅದ್ಕಕೆ ಉತ್ತಮ ಉದಾಹರಣೆ ಎಂದರೆ ಬುಮ್ರಾ ಒಲಿ ಪೋಪ್​ಗೆ ಎಸೆದ ಯಾರ್ಕರ್​ ಎಂದು ಹೇಳಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts