More

    ಬರಗಾಲ ಘೋಷಣೆ ನಿರೀಕ್ಷೆ

    ಧಾರವಾಡ: ಜಿಲ್ಲೆಯಲ್ಲಿ ಮಳೆ ಕಡಿಮೆ ಆಗಿದೆ. ಕಳೆದ ವಾರ ಮಳೆಯಾಗುವ ನಿರೀಕ್ಷೆ ಇತ್ತಾದರೂ ಸಮರ್ಪಕ ಮಳೆಯಾಗಿಲ್ಲ. ಹೀಗಾಗಿ ಬರಗಾಲ ಘೋಷಣೆ ನೀರಿಕ್ಷೆಯಲ್ಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲದೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ. ರಾಜ್ಯದಲ್ಲಿ ಬರಗಾಲ ೋಷಿಸಬೇಕು ಎಂಬ ಬೇಡಿಕೆ ಇದೆ. ಸರ್ವೇ ವರದಿ ಹಾಗೂ ಮಳೆ ಪ್ರಮಾಣದ ಅಂಕಿ- ಅಂಶ ನೋಡಿ ಇದನ್ನು ಸರ್ಕಾರ ತೀರ್ಮಾನ ಮಾಡುತ್ತದೆ. ಈ ಕುರಿತು ಈಗಾಗಲೇ ಸಂಬಂಧಿಸಿದ ಸಚಿವರು ಎಲ್ಲ ಮಾಹಿತಿ ಪಡೆದಿದ್ದಾರೆ ಎಂದರು.
    ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರವರ ಪಕ್ಷದ ವಿಚಾರ. ರಾಜಕೀಯ ಪಕ್ಷಗಳು ಆಗಾಗ ಮೈತ್ರಿ ಮಾಡಿಕೊಳ್ಳುತ್ತವೆ. ಅದು ಆಯಾ ಪಕ್ಷಗಳ ನಿಲುವು. ಪ್ರತಿಪಕ್ಷಗಳ ನಿರ್ಧಾರ ಅವರಿಗೆ ಬಿಟ್ಟ ವಿಚಾರ. ಬಿಜೆಪಿಗೆ ಸೋಲಿನ ಭಯ ಇರಬಹುದು ಎಂದರು.
    ಬಿಜೆಪಿಯವರು ಬೆಂಕಿ ಹಚ್ಚಿ ದೇಶ ಒಡೆಯುತ್ತಿದ್ದಾರೆ. ಆದರೆ, ರಾಹುಲ್ ಗಾಂಧಿ ಅವರು ಭಾರತ ದೇಶ ಜೋಡಿಸಲು ಹೊರಟಿದ್ದಾರೆ. ಇದರಿಂದ ಅವರ ಖ್ಯಾತಿ ಹೆಚ್ಚುತ್ತಿದೆ. ಅದಾನಿ ವಿರುದ್ಧ ರಾಹುಲ್ ಗಾಂಧಿ ಮಾತನಾಡಲು ಆರಂಭಿಸಿದ್ದೇ ಅನರ್ಹತೆಗೆ ಕಾರಣ. ಅದಾನಿ- ಮೋದಿಗೆ ಏನು ಸಂಬಂಧ ಎಂದು ರಾಹುಲ್ ಪ್ರಶ್ನಿಸಿದ್ದರು. ಆಗ ಬಿಜೆಪಿಯವರು ಅಸಂವಿಧಾನಿಕ ಪದದ ಲೋಪದೋಷದ ಪದ ಹುಡುಕಿ ತೆಗೆದರು. ಇದೀಗ ಸದಸ್ಯತ್ವ ಅನರ್ಹ ಮಾಡಿದ್ದಾರೆ. ಇದನ್ನು ಇಡೀ ಭಾರತ ದೇಶ ನೋಡುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರು.
    ಹೊಸ ಸರ್ಕಾರ ಬಂದಾಗ ವರ್ಗಾವಣೆಗಳು ಸಹಜ ಪ್ರಕ್ರಿಯೆ. ಆದರೆ, ಕುಮಾರಸ್ವಾಮಿ ಯಾವ ಆಧಾರದ ಮೇಲೆ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೋ ಗೊತ್ತಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts