More

    ಗ್ರಾಮಸ್ಥರ ಕೋವಿಡ್ ಪರೀಕ್ಷೆ ನಡೆಸಲು ಬರಲಿವೆ ಮೊಬೈಲ್ ಕ್ಲಿನಿಕ್

    ಬೆಂಗಳೂರು ಗ್ರಾಮಾಂತರ; ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಕೋವಿಡ್ 19 ತಪಾಸಣೆ ಹಾಗೂ ಸಾಮಾನ್ಯ ಆರೋಗ್ಯ ಪರೀಕ್ಷೆ ಕೈಗೊಳ್ಳುವ ವೈದ್ಯಾಧಿಕಾರಿಗಳ ತಂಡವಿರುವ ಮೊಬೈಲ್ ವಾಹನಗಳು ಹಳ್ಳಿಗಳಿಗೆ ತೆರಳಲಿದ್ದು, ಈ  ವಿನೂತನ ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರು ಸೋಮವಾರ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಆರ್ ಅಶೋಕ್ ಅವರು,”ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಪರಿಣಾಮ ಗ್ರಾಮಾಂತರ ಪ್ರದೇಶಗಳಲ್ಲಿನ ಜನರು ಆತಂಕಿತಗೊಂಡಿದ್ದು, ಅವರ ಆರೋಗ್ಯ ಕಾಳಜಿ ಮತ್ತು ಅವರಿಗೆ ನೆಮ್ಮದಿ ನೀಡುವ ನಿಟ್ಟಿನಲ್ಲಿ ವೈದ್ಯರ ನಡಿಗೆ ಹಳ್ಳಿ ಕಡೆಗೆ ಎಂಬ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮವನ್ನ ಪರಿಚಯಿಸಲಾಗಿದೆ. ಈ ಮೂಲಕ ವಾರದಲ್ಲಿ ಮೂರು ದಿನ ವೈದ್ಯರು ಮತ್ತವರ ತಂಡ ಹಳ್ಳಿಗಳಿಗೆ ಬೇಟಿ ನೀಡಿ ಗ್ರಾಮಸ್ಥರ ಆರೋಗ್ಯ ಪರೀಕ್ಷೆ ನಡೆಸಲಿದ್ದಾರೆ. ಜ್ವರ, ಕೆಮ್ಮು, ನೆಗಡಿ, ಮೈಕೈನೋವು ಸೇರಿದಂತೆ ಸಾಮಾನ್ಯ ಆರೋಗ್ಯ ಪರೀಕ್ಷೆ ನಡೆಸಿ ಸೂಕ್ತ ಸಲಹೆ ಕೊಡುವುದರ ಜೊತೆಗೆ ಔಷಧೋಪಚಾರ ನೀಡಲಿದ್ದಾರೆ” ಎಂದರು.

    “ಒಂದು ವೇಳೆ ಲಕ್ಷಣಗಳಿದ್ದಲ್ಲಿ ಕೋವಿಡ್ ಪರೀಕ್ಷೆ ಕೂಡಾ ನಡೆಸಿ ಅಲ್ಲೇ ಆರೈಕೆ ಮಾಡುವುದಾಗಿರಲಿ ಅಥವಾ ಸೋಂಕು ಗಂಭೀರವಾಗಿದ್ದರೆ ಹತ್ತಿರದ ಆಸ್ಪತ್ರೆಗೆ ದಾಖಲಿಸುವ ನಿಟ್ಟಿನಲ್ಲಿಯೂ ನೆರವು ನೀಡಲಿದ್ದಾರೆ. ಈ ಮೂಲಕ ಕೋವಿಡ್ ನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸುವ ಮೂಲಕ ಅನೇಕ ಜೀವಗಳನ್ನ ರಕ್ಷಿಸಬಹುದಾಗಿದೆ. ಇದೇ ಈ ಕಾರ್ಯಕ್ರಮದ ಉದ್ದೇಶ”, ಎಂದು ತಿಳಿಸಿದರು.

    ಇದನ್ನೂ ಓದಿ; ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…

    “ಈ ಮೊಬೈಲ್ ಕ್ಲಿನಿಕ್ ನಲ್ಲಿ ಅಗತ್ಯವಿರುವ ಎಲ್ಲಾ ವೈದ್ಯಕೀಯ ಉಪಕರಣ, ಔಷಧಿಗಳ ಕಿಟ್ ಗಳು ಇರಲಿದ್ದು, ಎಲ್ಲಾ ಪ್ರಾಥಮಿಕ ಚಿಕಿತ್ಸೆಯನ್ನ ಕೂಡಲೇ ನೀಡಲಾಗುತ್ತದೆ. ಇದರೊಂದಿಗೆ ಗ್ರಾಮಸ್ಥರಿಗೆ ಅವರ ಆರೋಗ್ಯ ರಕ್ಷಣೆಯ ಕುರಿತಂತೆ ಸಾಕಷ್ಟು ಜಾಗೃತಿ ಮೂಡಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನ ಕೂಡಾ ಈ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ. ಇದೊಂದು ಮಾದರಿ ಕಾರ್ಯಕ್ರಮವಾಗಿದ್ದು, ಹಳ್ಳಿಗರ ಆರೋಗ್ಯ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ತಲಾ 40ರಂತೆ ಆಕ್ಸಿಜನ್ ಕಾನ್ಸ್ಂಟ್ರೇಟರ್ ಗಳನ್ನ ಒದಗಿಸಲಾಗಿದೆ. ಒಟ್ಟಿನಲ್ಲಿ ಜನರ ಜೀವ ರಕ್ಷಣೆಗೆ ಸರ್ಕಾರ ಅವಿರತ ಯತ್ನಗಳನ್ನ ಮಾಡುತ್ತಿದೆ” ಎಂದರು.

    ಇದನ್ನೂ ಓದಿ; ತೆಂಡುಲ್ಕರ್ ಪೋಸ್ಟರ್ ಹರಿದು ಹಾಕಿದ್ರು ಬಾಲಿವುಡ್ ನಟಿ ಹುಮಾ ಖುರೇಷಿ, ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts