More

    2024ರ ಲೋಕಸಭೆ ಚುನಾವಣೆಯ ಹಿನ್ನೆಲೆ ರಾಜಸ್ಥಾನ ಉಸ್ತುವಾರಿಯಾಗಿ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ನೇಮಕ

    ನವದೆಹಲಿ: ಕಳೆದ ವರ್ಷ ಉತ್ತರಾಖಂಡದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಚುನಾವಣಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇದೀಗ ಮತ್ತೊಮ್ಮೆ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.

    ಇದನ್ನೂ ಓದಿ: ಬಾಂಗ್ಲಾದೇಶ ಪ್ರಧಾನಿ ಮಧ್ಯಪ್ರವೇಶ; ನಿವೃತ್ತಿ ಹಿಂಪಡೆದ ತಮೀಮ್​ ಇಕ್ಬಾಲ್​

    ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯ ಅಖಾಡ ಸಿದ್ದವಾಗುತ್ತಿದ್ದು, 2024ರ ಲೋಕಸಭೆ ಚುನಾವಣೆಗೂ ಮುನ್ನವೇ ತನ್ನ 4 ನಾಯಕರನ್ನು ಉಸ್ತುವಾರಿಯನ್ನಾಗಿ ಬಿಜೆಪಿ ನೇಮಕ ಮಾಡಿದೆ. ಈ ಬಗ್ಗೆ ಬಿಜೆಪಿ ಹೇಳಿಕೆಯನ್ನು ಪ್ರಕಟಿಸಿದ್ದು, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಭೂಪೇಂದ್ರ ಯಾದವ್ ಅವರನ್ನು​ ಕ್ರಮವಾಗಿ ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಿಗೆ ಉಸ್ತುವಾರಿಯನ್ನಾಗಿ ನೇಮಿಸಿದೆ.

    ಇದನ್ನೂ ಓದಿ: VIDEO | ನಿರ್ಮಾಣ ಹಂತದಲ್ಲಿರುವ ರೈಲ್ವೆ ಕಟ್ಟಡವನ್ನು ಈಜುಕೊಳ ಮಾಡಿಕೊಂಡ ಯುವಕರು; ವಿಡಿಯೋ ವೈರಲ್

    ಕಳೆದ ವರ್ಷದ ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಪ್ರಲ್ಹಾದ್​ ಜೋಶಿ ಅವರನ್ನು ಉಸ್ತುವಾರಿಯನ್ನಾಗಿ ಮಾಡಿದ್ದ ಸಮಯದಲ್ಲೇ ಪಕ್ಷ ಅಧಿಕಾರವನ್ನು ಪಡೆದುಕೊಂಡಿತು. ಇನ್ನು ಕರ್ನಾಟಕ ವಿಧಾನಸಭಾ ಎಲೆಕ್ಷನ್​​ನ ಟಿಕೆಟ್​​ ಹಂಚಿಕೆಯಲ್ಲೂ ಜೋಶಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಜೋಶಿ, ಭೂಪೇಂದ್ರ ಯಾದವ್​ ನಂತರ ಕೇಂದ್ರದ ಮಾಜಿ ಸಚಿವ ಪ್ರಕಾಶ್ ಜಾವಡೇಕರ್​ ಮತ್ತು ಓಂ ಪ್ರಕಾಶ್ ಮಾಥುರ್​​​ ಅವರನ್ನು ಕ್ರಮವಾಗಿ ತೆಲಂಗಾಣ, ಛತ್ತೀಸಗಢ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts