More

    ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಕೊವಿಡ್​-19 ಸೋಂಕು

    ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಿತಿನ್​ ಗಡ್ಕರಿ ಅವರಿಗೆ ಕೊವಿಡ್​-19 ಸೋಂಕು ತಗುಲಿದೆ.

    ಈ ಬಗ್ಗೆ ಟ್ವೀಟ್ ಮಾಡಿದ ಸಚಿವರು, ನಿನ್ನೆ ನನ್ನಲ್ಲಿ ಆಯಾಸ ಕಾಣಿಸಿಕೊಂಡಿತ್ತು. ತಪಾಸಣೆಗೆ ತೆರಳಿದ್ದೆ. ಕೊವಿಡ್​-19 ಟೆಸ್ಟ್​ಗೆ ಕೂಡ ಒಳಪಟ್ಟಿದ್ದೆ. ಅದರ ವರದಿ ಪಾಸಿಟಿವ್​ ಎಂದು ಬಂದಿದೆ. ನಾನು ಸದ್ಯ ಐಸೋಲೇಶನ್​​ನಲ್ಲಿ ಇದ್ದೇನೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದದಿಂದ ಆರೋಗ್ಯವಾಗಿಯೇ ಇದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೋಹತ್ಯೆ ನಿಷೇಧಕ್ಕೆ ಪ್ರಬಲ ಕಾನೂನು ಬೇಗ ಜಾರಿಯಾಗಲಿ: ಸಿಎಂಗೆ ಪೇಜಾವರ ಶ್ರೀ ಪತ್ರ

    ಹಾಗೇ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಒಮ್ಮೆ ಕೊವಿಡ್​-19 ತಪಾಸಣೆಗೆ ಒಳಗಾಗಿ. ಸುರಕ್ಷಿತವಾಗಿರಿ ಎಂದು ಟ್ವೀಟ್​ ಮೂಲಕ ಮನವಿ ಮಾಡಿದ್ದಾರೆ. ಈಗಾಗಲೇ ಹಲವು ಕೇಂದ್ರ ಸಚಿವರು, ಸಂಸದರು, ಶಾಸಕರು ಕೊವಿಡ್​-19 ಸೋಂಕಿಗೆ ಒಳಗಾಗಿದ್ದಾರೆ. (ಏಜೆನ್ಸೀಸ್​)

    ರೈನಾ ಸಂಬಂಧಿಕರ ಮೇಲಿನ ದಾಳಿ ಪ್ರಕರಣವನ್ನು ಕೊನೆಗೂ ಭೇದಿಸಿದ ಪಂಜಾಬ್ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts