More

    6.09 ಕೋಟಿ ವೆಚ್ಚದಲ್ಲಿ ಎಕ್ಸಟೆಂನ್ಷನ್ ಕೇಂದ್ರ

    ಚಿತ್ರದುರ್ಗ: ನಗರದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ ಅಂಡ್ ಇನ್‌ಫಾರ್ಮೇಷನ್ ಸೈನ್ಸ್‌ನ ಎಕ್ಸಟೆಂನ್ಷನ್ ಸೆಂಟರ್ ಅನ್ನು 6.09 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಮಾ.12ರಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಡಿ ಕಾರ್ಯನಿರ್ವಹಿಸುವ ಈ ಸಂಸ್ಥೆಯು ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ದೇಶಾದ್ಯಂತ ಈವರೆಗೂ 47ಕೇಂದ್ರಗಳನ್ನು ಹೊಂದಿದ್ದು, ಈಗ ಚಿತ್ರದುರ್ಗದಲ್ಲಿ ಆರಂಭವಾಗುತ್ತಿರುವುದೇ ಸಂತೋಷದ ಸಂಗತಿ ಎಂದು ತಿಳಿಸಿದ್ದಾರೆ.

    ಈ ಸೆಂಟರ್ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಹಲವಾರು ಕೋರ್ಸ್‌ಗಳನ್ನು ಹೊಂದಿದೆ. ತಳಹದಿಯ ಆರಂಭಿಕ ಕೋರ್ಸ್‌ಗಳಿಂದ ಸ್ನಾತಕೋತ್ತರ ಪದವಿವರೆಗೂ ಅನೇಕ ರೀತಿಯ ವಿಭಿನ್ನ ವಿಷಯಗಳನ್ನು ಒಳಗೊಂಡಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೂ ಸಂಬಂಧಿಸಿದ ತರಬೇತಿ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.

    ಹಳೆ ಬೆಂಗಳೂರು ರಸ್ತೆಯ ಜಿಟಿಟಿಸಿ ಕಟ್ಟಡದಲ್ಲಿ ಪ್ರಸ್ತುತ ಈ ಸಂಸ್ಥೆ ಕಾರ್ಯಾರಂಭ ಮಾಡಲಿದ್ದು, ಅರ್ಹ ಜ್ಞಾನಾರ್ಜನೆ ಬಯಸುವ ವಿದ್ಯಾರ್ಥಿಗಳು ಇದರ ಲಾಭ ಪಡೆಯಬಹುದು ಎಂದು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts