More

    ವಿದೇಶಕ್ಕೆ ಹೋಗಿಲ್ಲ, ಇಲ್ಲೇ ಇದ್ದೇನೆ!

    ಬೆಂಗಳೂರು: ಲೈಂಗಿಕ ಹಗರಣದ ವಿಡಿಯೋ ಕದ್ದಿರುವ ಆರೋಪಕ್ಕೆ ಗುರಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಗೌಡ, ಖಾಸಗಿ ಸುದ್ದಿ ವಾಹಿನಿ ಮುಂದೆ ಪ್ರತ್ಯಕ್ಷವಾಗಿದ್ದಾರೆ.

    ಪ್ರಕರಣ ಬೆಳಕಿಗೆ ಬರುತ್ತಿದಂತೆ ಭೂಗತರಾಗಿದ್ದ ಕಾರ್ತಿಕ್ ಗೌಡ, ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ವಕೀಲ ದೇವರಾಜೇಗೌಡ ಅವರೇ ಪೆನ್‌ಡ್ರೈವ್ ಬಿಡುಗಡೆ ಮಾಡಿರುವುದು ಎಂದು ಆರೋಪಿಸಿದ್ದರು. ಆನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಮಾಧ್ಯಮದ ಮುಂದೆ ಕಾಣಿಸಿಕೊಂಡಿದ್ದಾರೆ. ನನ್ನ ಬಳಿ ಪಾಸ್‌ಪೋರ್ಟ್ ಸಹ ಇಲ್ಲ. ಮಲೇಷ್ಯಾಕ್ಕೆ ಹೋಗಿಲ್ಲ. ಪಾಸ್‌ಪೋರ್ಟ್ ಇಲ್ಲದೆ ವಿದೇಶಕ್ಕೆ ಹೋಗುವುದು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
    ಏ.30ಕ್ಕೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಅದರಂತೆ ವಿಚಾರಣೆಗೆ ಹಾಜರಾಗಿ ಪ್ರಜ್ವಲ್ ರೇವಣ್ಣ ೆನ್‌ನಿಂದ ಬ್ಲೂಟೂತ್ ಮೂಲಕ ನನ್ನ ಮೊಬೈಲ್‌ಗೆ ವಿಡಿಯೋ ಕಳುಹಿಸಿಕೊಂಡಿದ್ದೆ. ಅದಕ್ಕಾಗಿ ನನ್ನ ೆನ್ ಅನ್ನು ಎಸ್‌ಐಟಿಗೆ ವಹಿಸಿದ್ದೇನೆ. ಆನಂತರ ನನ್ನ ಮನೆಯಲ್ಲಿಯೇ ಇದ್ದೇನೆ. ನಾನು ವಿದೇಶಕ್ಕೆ ಹೋಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ವಿಡಿಯೋಗಳನ್ನು ಬೇರೆಯವರಿಗೆ ಕಳುಹಿಸುವುದು, ಸಂಗ್ರಹಿಸಿಕೊಳ್ಳುವುದು ಅಪರಾಧ ಎಂದು ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ವೈರಲ್ ಹಿಂದೆ ಕಾರ್ತಿಕ್ ಗೌಡ ಕೈವಾಡ ಇರುವ ಬಗ್ಗೆ ಆರೋಪ ಕೇಳಿಬಂದಿದೆ. ಆದರೆ, ಆತನ ಪತ್ತೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಲೋಕಾಯುಕ್ತಕ್ಕೆ ದೂರು

    ಸಂಸದ ಲೈಂಗಿಕ ದೌರ್ಜನ್ಯ ಪ್ರಕರಣ ಇದೀಗ ಲೋಕಾಯುಕ್ತ ಮೆಟ್ಟಿಲೇರಿದ್ದು, ಕೆಪಿಸಿಸಿಯ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ವೈ ಪುಟ್ಟರಾಜು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಮಾಧ್ಯಮಗಳಲ್ಲಿ ಪ್ರಜ್ವಲ್ ರೇವಣ್ಣ ವಿಷಯ ಪ್ರಸ್ತಾಪಿಸಿ, ಈ ಪ್ರಕರಣದಲ್ಲಿ 20ರಿಂದ 70 ಕೋಟಿ ರೂ. ಆಮಿಷವೊಡ್ಡಿರುವ ಬಗ್ಗೆ ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಕೂಡಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆಮಿಷವೊಡ್ಡಿರುವ ವ್ಯಕ್ತಿ ಹಾಗೂ ಹಣದ ಮೂಲದ ಬಗ್ಗೆ ತನಿಖೆ ನಡೆಸಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts