More

    ಹೊಸ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ : ಸಚಿವ ಮಾಧುಸ್ವಾಮಿ

    ತಿಪಟೂರು: ರಾಜ್ಯ ಸರ್ಕಾರ ಕೈಗಾರಿಕೆ ಸ್ಥಾಪಿಸಲು ವಿಶೇಷ ಉತ್ತೇಜನ ನೀಡುತ್ತಿದ್ದು, ಕೈಗಾರಿಕೆ ಸ್ಥಾಪನೆಗೆ ಅನುಕೂಲ ಕಲ್ಪಿಸಲು ಹೊಸ ಕಾಯ್ದೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

    ಹಾಲ್ಕುರಿಕೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎವಿಟಿ ನ್ಯಾಚುರಲ್ ಪ್ರಾಡಕ್ಟ್ ಕಾರ್ಖಾನೆ ಸಿಎಸ್‌ಆರ್ ಅನುದಾನದಲ್ಲಿ ಉಚಿತವಾಗಿ ನೀಡಿರುವ ವೈದ್ಯಕೀಯ ಉಪಕರಣಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕೈಗಾರಿಕೆ ಹೊರತುಪಡಿಸಿ ಇತರ ಎಲ್ಲ ಕೈಗಾರಿಕೆಗಳಿಗೂ ಅನುಮತಿ ನೀಡಲಾಗುವುದು ಎಂದರು.

    ಸರ್ಕಾರ ಗ್ರಾಮೀಣರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಗ್ರಾಮೀಣ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿದೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ವೈದ್ಯಕೀಯ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಈಗಲೂ ಹಳ್ಳಿಗಳ ಜನರು ಹೆರಿಗೆ ಸೌಲಭ್ಯಕ್ಕೆ ತಿಪಟೂರು, ತುಮಕೂರು ನಂತರ ನಗರಗಳಿಗೆ ಹೋಗುವಂತಾಗಿದೆ. ಪ್ರಾರಂಭದಿಂದಲೂ ಗರ್ಭಿಣಿಯರಿಗೆ ಚಿಕಿತ್ಸೆ ನೀಡಿರುವ ವೈದ್ಯರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ಮಾಡಿಸುವ ಕೆಲಸ ಮಾಡುತ್ತಿಲ್ಲ. ಸಾಮಾನ್ಯವಾಗಿ ಆಗುವ ಹೆರಿಗೆಗೂ ನಗರದ ಆಸ್ಪತ್ರೆಗಳಿಗೆ ಕಳಿಸುತ್ತಿದ್ದಾರೆ. ಗ್ರಾಮೀಣ ವೈದ್ಯರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೆ ಹೆರಿಗೆ ಮಾಡಿಸುವ ಕೆಲಸವಾಗಬೇಕು ಎಂದರು.

    ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ಚಿಕ್ಕನಾಯಕನಹಳ್ಳಿ ತಾಲೂಕಿನ 22 ಕೆರೆಗಳಿಗೆ ಕುಡಿಯುವ ನೀರೊದಗಿಸುವ ಯೋಜನೆ ಪ್ರಗತಿಯಲ್ಲಿದ್ದು, ಸಚಿವರ ಪ್ರಯತ್ನದ ಫಲವಾಗಿ ಶೆಟ್ಟಿಕೆರೆ ಹಾಗೂ ಸಾಸಲು ಬಳಿ ನಾಲೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಹಾಲ್ಕುರಿಕೆ ಕೆರೆಗೆ ನೀರೊದಗಿಸಲು ಅರಣ್ಯ ಇಲಾಖೆ ಅನುಮತಿ ತೊಡಕಿರುವುದರಿಂದ ಅರಣ್ಯ ಇಲಾಖೆಗೆ ಪರ್ಯಾಯ ಭೂಮಿಯೊದಗಿಸುವ ಕೆಲಸವಾಗಿದೆ. ಸದ್ಯದಲ್ಲೇ ಅನುಮತಿ ದೊರೆಯಲಿದ್ದು ಈ ಭಾಗಕ್ಕೂ ನೀರು ದೊರೆಯಲಿದೆ ಎಂದು ತಿಳಿಸಿದರು.

    10,300 ರೂಪಾಯಿಗೆ ಕೊಬ್ಬರಿ ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ. ಯಾರೋ ಬಂದು 5000 ಕೊಡಿ
    3000 ಪ್ರೋತ್ಸಾಹಧನ ಕೊಡಿ ಎಂದು ಕೇಳಿದರೆ ಸರ್ಕಾರ ನೀಡಲು ಸಾಧ್ಯವಿಲ್ಲ. 10300 ಕಡಿಮೆ ಬೆಲೆ ಬಂದರೆ ಬೆಂಬಲ ಬೆಲೆ ನೀಡಲಾಗುವುದು.
    ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts