More

    ನನ್ನನ್ಯಾರೂ ತಬ್ಬಿಕೊಂಡು ಮುತ್ತು ಕೊಟ್ಟಿಲ್ಲ ಎಂದು ಸಚಿವ ಮಾಧುಸ್ವಾಮಿ ಟಾಂಗ್​ ನೀಡಿದ್ಯಾರಿಗೆ?

    ತುಮಕೂರು: ರೈತ ಮಹಿಳೆಯರಿಗೆ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಮಾಧುಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ಹೆಣ್ಣು ಮಕ್ಕಳ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದರು. ಇದೇ ವೇಳೆ ನನ್ನನ್ನು ಯಾರು ತಬ್ಬಿಕೊಂಡು ಮುತ್ತು ಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಟಾಂಗ್​ ನೀಡಿದರು.

    ಇದನ್ನೂ ಓದಿ: ವಿವಾಹಿತೆಯೊಂದಿಗೆ ಯುವತಿ ಆತ್ಮಹತ್ಯೆ: ಸಮಾಜ ಒಪ್ಪದ ಸಂಬಂಧವೇ ಇಬ್ಬರಿಗೂ ಮುಳುವಾಯಿತಾ?

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋಲಾರ ಭಾಗದಲ್ಲಿ ನೀರು ಸಿಕ್ತಿಲ್ಲ ಎನ್ನುವ ಕಾರಣಕ್ಕೆ ಚಿಂತಾಮಣಿ ಕೆರೆಗೆ ನೀರು ಬಿಡುವ ವಿಚಾರಕ್ಕೆ ಪರಿಶೀಲನೆಗಾಗಿ ತೆರಳಿದ್ದೆವು. ಮಹಿಳೆಯರು ರೈತ ಸಂಘದವರೆಂದು ಗೊತ್ತಿರಲಿಲ್ಲ. ಸೆಕ್ರೆಟರಿಯವರಿಗೆ ಉತ್ತರ ನೀಡಲು ಹೇಳಿದ್ದೆ. ಮಧ್ಯದಲ್ಲಿ ಮಹಿಳೆಯೊಬ್ಬರು ನನ್ನದು 130 ಎಕರೆ ಒತ್ತುವರಿಯಾಗಿದೆ ಎಂದರು. ಏನಮ್ಮ ನಿನ್ನ ಪ್ರಶ್ನೆ ಎಂದು ಕೇಳಿದ್ದಕ್ಕೆ ಏನ್ರಿ ಮಾಡ್ತಿದಿರಿ ಎಂದು ಪ್ರಶ್ನಿಸಿದರು. ನನಗೂ ಸ್ವಾಭಿಮಾನವಿದೆ. ಆದೇಶ ಕೊಡಲಿಕ್ಕೆ ಬರಬೇಡ ಮನವಿ ಮಾಡಿ ಎಂದೆ. ಅವರ ಊರಿಗೆ ಹೋಗಿ ಬಾಯಿಗೆ ಬಂದಹಾಗೆ ಬೈಸಿಕೊಳ್ಳಬೇಕಾ?  ಸರಿಯೂ ಆ ಮಹಿಳೆಯದ್ದು ಅದೇ ಕೆಲಸವಂತೆ. ಈ ಗಲಾಟೆ ನಡೆಯಬಾರದಿತ್ತು. ಆ ಮಹಿಳೆ ಹಿಂದಿನಿಂದಲೂ ಅದೇ ರೀತಿ ನಡೆದುಕೊಂಡು ಬಂದಿದ್ದಾರೆ ಎಂದು ಕಿಡಿಕಾರಿದರು.

    ಮಾಜಿ ಸಿಎಂ ಸಿದ್ದರಾಮಯ್ಯರಿಂದ ರಾಜೀನಾಮೆಗೆ ಒತ್ತಾಯ ವಿಚಾರವಾಗಿ ಮಾತನಾಡಿ, ನನ್ನನ್ನು ಯಾರೂ ತಬ್ಬಿಕೊಂಡು ಮುತ್ತು ಕೊಟ್ಟಿಲ್ಲ. ನನ್ನ ನಾಯಕರು ಕರೆದು ರಾಜೀನಾಮೆ ಕೇಳಿದರೆ, ಒಂದು ಕ್ಷಣವೂ ಸುಮ್ಮನಿರೋದಿಲ್ಲ ಎಂದರು.

    ಇದನ್ನೂ ಓದಿ: ಮಹಿಳೆಯ ಶವದ ಜತೆ ಸಾರ್ವಜನಿಕ ಸ್ಥಳದಲ್ಲಿ ಸಂಭೋಗ: ಆರೋಪಿ ಬಂಧಿಸಿದ ಅಧಿಕಾರಿಗಳಿಗೆ ಕಾದಿತ್ತು ಶಾಕ್​!

    ಹೆಣ್ಣು ಮಕ್ಕಳ ಮನಸ್ಸಿಗೆ ನೋವಾಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ. ಆ ಮಹಿಳೆಯದ್ದು ಅದೇ ಸ್ವಭಾವವೆಂದು ಸ್ಥಳೀಯರು ಹೇಳಿದರು. ನಾನೇನು ತುಂಬಾ ಕೆಟ್ಟದ್ದಾಗಿ ಮಾತನಾಡಲಿಲ್ಲ ಎಂದು ಸ್ಪಷ್ಟನೆ ನೀಡಿದರು.

    ನಿನ್ನೆ ಕೋಲಾರ ತಾಲೂಕಿನ ಎಸ್​ ಅಗ್ರಹಾರ ಕೆರೆ ವೀಕ್ಷಿಸಲು ಆಗಮಿಸಿದ್ದ ವೇಳೆ ಅಹವಾಲು ಸಲ್ಲಿಸಲು ಬಂದಿದ್ದ ರೈತ ಮಹಿಳೆಯರಿಗೆ ಕಾನೂನು ಸಚಿವ ಮಾಧುಸ್ವಾಮಿ ರಾಸ್ಕಲ್​ ಎಂದು ಜರಿಯುವ ಮೂಲಕ ವಿವಾದ ಸೃಷ್ಟಿಸಿಕೊಂಡರು. ಕೆರೆಗಳ ಒತ್ತುವರಿಯನ್ನು ತೆರವು ಮಾಡಲು ಮಹಿಳೆಯರು ಮನವಿ ಮಾಡಿ ಚರ್ಚಿಸುವಾಗ ಹೇ ರಾಸ್ಕಲ್​ ಮುಚ್ಚುಬಾಯಿ ಎಂಬ ಪದ ಪ್ರಯೋಗ ಮಾಡಿದ್ದು, ಈ ವೇಳೆ ಕೆರಳಿದ ಮಹಿಳೆಯರು ಮಾಧುಸ್ವಾಮಿ ಅವರಿಗೆ ಘೇರಾವ್​ ಹಾಕಿದ ಪ್ರಸಂಗ ನಡೆಯಿತು.

    ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಲಾಕ್​ಡೌನ್​: ಕರೊನಾ ಕುರಿತು ಮತ್ತೊಂದು ಶಾಕಿಂಗ್​ ವರದಿ ನೀಡಿದ ಚೀನಾ ವೈದ್ಯರು!

    VIDEO| ರೈತ ಮಹಿಳೆಯರನ್ನು ರಾಸ್ಕಲ್​ ಎಂದು ಜರಿದ ಸಚಿವ ಮಾಧುಸ್ವಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts