More

    ಕೊವಿಡ್​-19 ಟೆಸ್ಟ್​ ವರದಿ ನೆಗೆಟಿವ್​ ಬಂದರೂ ಹೋಂ ಕ್ವಾರಂಟೈನ್​​ಗೆ ಒಳಗಾದ ಸಚಿವ ಈಶ್ವರಪ್ಪ…

    ಶಿವಮೊಗ್ಗ: ಜನಪ್ರತಿನಿಧಿಗಳಿಗೆ ಒಬ್ಬೊಬ್ಬರಾಗಿ ಕರೊನಾ ಭೀತಿ ಎದುರಾಗುತ್ತಿದೆ. ಈಗಾಗಲೇ ಹಲವು ರಾಜಕಾರಣಿಗಳು ಕರೊನಾ ಸೋಂಕಿಗೆ ಒಳಗಾಗಿದ್ದಾರೆ.

    ಮೊನ್ನೆ ಕೃಷಿ ಸಚಿವ ಬಿ.ಸಿ.ಪಾಟೀಲ್​ ಅವರು ಕರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದುದರಿಂದ ಕ್ವಾರಂಟೈನ್​ಗೆ ಒಳಪಡುತ್ತಿರುವುದಾಗಿ ಹೇಳಿದ್ದರು. ಇದೀಗ ಸಚಿವ ಕೆ.ಎಸ್​.ಈಶ್ವರಪ್ಪನವರಿಗೂ ಕರೊನಾ ಆತಂಕ ಎದುರಾಗಿತ್ತು.
    ಈ ಬಗ್ಗೆ ಟ್ವೀಟ್​ ಮಾಡಿರುವ ಈಶ್ವರಪ್ಪ, ನನ್ನ ಮನೆಯ ಸಂಪರ್ಕದಲ್ಲಿದ್ದ ನನ್ನ ದೂರದ ಸಂಬಂಧಿ ಓರ್ವರಿಗೆ ಕರೊನಾ ದೃಢಪಟ್ಟಿದೆ. ಹಾಗಾಗಿ ನಾನು ಮತ್ತು ನನ್ನ ಕುಟುಂಬದವು ಕರೊನಾ ಟೆಸ್ಟ್​ಗೆ ಒಳಪಟ್ಟಿದ್ದೆವು. ಇದೀಗ ಬಂದ ವರದಿಯಲ್ಲಿ ಕರೊನಾ ಸೋಂಕು ಇಲ್ಲದಿರುವುದು ದೃಢಪಟ್ಟಿದ್ದು ಸಮಾಧಾನ ತಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೈಕ್‌ ಸ್ಟಂಟ್‌ಗೆ ವಿರೋಧ- ಬಾಲಕರಿಂದ ಬರ್ಬರ ಹತ್ಯೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಹಾಗೇ ಈಶ್ವರಪ್ಪನವರ ಗುಂಡಪ್ಪ ಶೆಡ್​ನಲ್ಲಿರುವ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೂ ಸೋಮವಾರ ಸೋಂಕು ಕಂಡು ಬಂದಿದೆ. ಹಾಗಾಗಿ ಸದ್ಯ ಈಶ್ವರಪ್ಪನವರ ಕುಟುಂಬ ಕ್ವಾರಂಟೈನ್​​ಗೆ ಒಳಪಟ್ಟಿದೆ. (ಏಜೆನ್ಸೀಸ್​)

    ಮುಂದುವರಿದ ಸುದೀಪ್​ ಸಮಾಜಮುಖಿ ಕಾರ್ಯ: 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಕಿಚ್ಚ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts