

ನವದೆಹಲಿ: ಬೈಕ್ ಸ್ಟಂಟ್ ಮಾಡಲು ಆಕ್ಷೇಪ ವ್ಯಕ್ತಪಡಿಸಿದ ಯುವಕನನ್ನು ಮೂರು ಮಂದಿ ಬಾಲಕರು ರಸ್ತೆ ಮಧ್ಯೆಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ರಘುಬೀರ್ ನಗರದಲ್ಲಿ ಈ ಘಟನೆ ಇದೇ 8ರಂದು ನಡೆದಿದ್ದು ಮೃತನನ್ನು ಮನೀಶ್ ಎಂದು ಗುರುತಿಸಲಾಗಿದೆ. ಖಾಸಗಿ ಕಾರು ಚಾಲಕನಾಗಿದ್ದ ಈತನ ವಯಸ್ಸು 25 ವರ್ಷ. ಇವನ ಕೊಲೆ ಮಾಡಿರುವ ಮೂವರು ಅಪ್ರಾಪ್ತರಾಗಿದ್ದು ಇವರಿಗೆ 16-17 ವರ್ಷವಾಗಿದೆ ಎನ್ನಲಾಗಿದೆ.
ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಲಾರೋಪಿಗಳ ವಿರುದ್ಧ ಕೊಲೆ ಕೇಸು ದಾಖಲಿಸಲಾಗಿದೆ ಎಂದು ಕ್ಯಾಲ ಪೊಲೀಸ್ ಠಾಣೆಯ ಉಪ ಆಯುಕ್ತ ದೀಪಕ್ ಪುರೋಹಿತ್ ತಿಳಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಮನೀಶ್ ವಾಸವಿದ್ದ ಪ್ರದೇಶದಲ್ಲಿ ದಿನವೂ ಈ ಮೂವರು ಬಾಲಕರು ಬೈಕ್ ರೈಸ್ ಮಾಡುತ್ತಿದ್ದರು, ಜನರು ಓಡಾಡುವ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುತ್ತಿದ್ದರು. ಇದರಿಂದ ಸಿಟ್ಟುಕೊಂಡಿದ್ದ ಮನೀಶ್ ಇಲ್ಲಿ ಬೈಕ್ ರೇಸ್ ಮಾಡಬೇಡಿ ಎಂದು ಬೈದಿದ್ದರು. ಇದೇ ಕಾರಣಕ್ಕೆ ಬಾಲಕರು ಕೊಲೆ ಮಾಡಿದ್ದಾರೆ.
ಕೊಲೆ ಮಾಡುವ ಸಮಯದಲ್ಲಿ ಹಾಗೂ ಕೊಲೆಯಾದ ಮೇಲೆ ಇದೇ ಮಾರ್ಗವಾಗಿ ಅನೇಕ ಮಂದಿ ಓಡಾಡಿದರೂ ಯಾರೂ ಏನೂ ಮಾಡದೇ ಘಟನೆಯನ್ನು ಹಾಗೂ ಆನಂತರ ಶವವನ್ನು ನೋಡಿ ಸುಮ್ಮನೆ ಹೋಗಿದ್ದುದು ಕೂಡ ಸಿಸಿಟಿಯಲ್ಲಿ ಸೆರೆಯಾಗಿದೆ. ಘಟನೆ ನಡೆಯುವ ವೇಳೆ ಕೂಡ ಯಾರೂ ಸಹಾಯಕ್ಕೆ ಬರಲಿಲ್ಲ.
ಕೊಲೆಯಾದ ನಂತರ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
ಕ್