More

    ರಾಜ್ಯಕ್ಕೆ ರಸಗೊಬ್ಬರ ಕೊರತೆಯಾಗದಂತೆ ಕ್ರಮ | ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಭರವಸೆ

    ಬೆಂಗಳೂರು: ರಾಜ್ಯದ ಅವಶ್ಯಕತೆಗಿಂತಲೂ ಹೆಚ್ಚಿನ ರಸಗೊಬ್ಬರವನ್ನು ಕೇಂದ್ರ ಸರ್ಕಾರ ಪೂರೈಸಿದ್ದು, ಮುಂದಿನ ದಿನಗಳಲ್ಲೂ ಕೊರತೆಯಾಗದಂತೆ ಕ್ರಮವಹಿಸಲಾಗುವುದು ಎಂದು ಕೇಂದ್ರದ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಗುರುವಾರ ಭರವಸೆ ನೀಡಿದ್ದಾರೆ.

    ದೆಹಲಿಗೆ ತೆರಳಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಭೇಟಿಯಾಗಿ ರಸಗೊಬ್ಬರ ಬೇಡಿಕೆ, ಹಂಚಿಕೆ ಮತ್ತು ಬಳಕೆ ಕುರಿತು ಮಾಹಿತಿ ನೀಡಿ, ಹೆಚ್ಚುವರಿ 1 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಗೆ ಮನವಿ ಮಾಡಿಕೊಂಡರು. ಈ ಕೋರಿಕೆಯನ್ನು ಸದಾನಂದಗೌಡ ಪುರಸ್ಕರಿಸಿ, ಕರ್ನಾಟಕಕ್ಕೆ ಅಗತ್ಯವಿರುವ ರಸಗೊಬ್ಬರ ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಸಮರ್ಪಕ ಹಂಚಿಕೆ ಮತ್ತು ವಿತರಣೆ ಮೇಲಿನ ಬಿಗಿ ನಿಗಾ ವ್ಯವಸ್ಥೆ ಮುಂದುವರಿಸಲು ಪಾಟೀಲ್​ಗೆ ಸಲಹೆ ನೀಡಿದರು.

    ಇದನ್ನೂ ಓದಿ: ಅವಾಕ್ಸ್​ ಖರೀದಿಗೆ 147.81 ಶತಕೋಟಿ ಡಿಫೆನ್ಸ್ ಡೀಲ್?| 200 ಟ್ಯಾಕ್ಟಿಕಲ್​ ಡ್ರೋನ್​ಗಳು ಸೇರಲಿವೆ ಸೇನೆ

    ಬೇಡಿಕೆ ಹೆಚ್ಚಲು ಕಾರಣ: ಕರೊನಾದಿಂದಾಗಿ ಸ್ವಗ್ರಾಮಕ್ಕೆ ಮರಳಿರುವ ಯುವ ಸಮೂಹ ಕೃಷಿಗೆ ಒತ್ತು ನೀಡಿದೆ. ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಬಿತ್ತನೆ ಪ್ರದೇಶ ಹೆಚ್ಚಿದ್ದು, ಇದರಿಂದಾಗಿ ರಸಗೊಬ್ಬರ ಬಳಕೆ ಮತ್ತು ಬೇಡಿಕೆಯೂ ಏರಿಕೆಯಾಗಿದೆ. ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಅಕ್ರಮ ದಾಸ್ತಾನು ಮತ್ತು ಅಧಿಕ ಬೆಲೆಗೆ ಮಾರಾಟವನ್ನು ನಿಯಂತ್ರಿಸಲು ಕಠಿಣ ಕಾರ್ಯಾಚರಣೆ ನಡೆಸಲಾಗಿದೆ. ಕೃತಕ ಅಭಾವ ಸೃಷ್ಟಿಸಿದ ಅಂಗಡಿಗಳ ಪರವಾನಗಿ ರದ್ದುಪಡಿಸಲಾಗಿದೆ. ಅಲ್ಲದೆ, ನಕಲಿ ಬಿತ್ತನೆ ಬೀಜ ಮತ್ತು ರಾಸಾಯನಿಕ ಗೊಬ್ಬರ ಜಾಲ ಬೇಧಿಸುವಲ್ಲಿ ಕೃಷಿ ಇಲಾಖೆ ಸಫಲವಾಗಿದೆ ಎಂದು ಬಿ.ಸಿ.ಪಾಟೀಲ್ ವಿವರಿಸಿದರು. ದಿಟ್ಟ ಕ್ರಮ ಹಾಗೂ ರೈತರ ಬಗೆಗಿನ ಕಾಳಜಿಗೆ ಡಿ.ವಿ.ಸದಾನಂದಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

    ಇದನ್ನೂ ಓದಿ: ‘ಗ್ರೂಪ್ ಆಫ್​ 23’ ಮೇಲೆ ‘ಕೈ’ಕಮಾಂಡ್​ ಸರ್ಜಿಕಲ್ ಸ್ಟ್ರೈಕ್​ !: ಸಿಬಲ್​ ಕಳವಳ

    ರೈತರಿಗೆ ಕಿವಿಮಾತು: ಅನಾಮಧೇಯ ಕಂಪನಿ ಹೆಸರಿನಲ್ಲಿ ರಸಗೊಬ್ಬರವಾಗಲಿ, ಬಿತ್ತನೆ ಬೀಜವಾಗಲಿ ಮನೆ ಬಾಗಿಲಿಗೆ ಬಂದರೆ ಇಲ್ಲವೇ ಯಾರಾದರೂ ನೀಡಿದರೆ ಖರೀದಿಸಬಾರದು. ಇಲಾಖೆ, ರೈತ ಸಂಪರ್ಕ ಕೇಂದ್ರ ಸೂಚಿಸಿದ ಅಧಿಕೃತ ಕಂಪನಿಗಳ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಖರೀದಿಸಬೇಕು ಎಂದು ರೈತರಿಗೆ ಸಚಿವ ಬಿ.ಸಿ.ಪಾಟೀಲ್ ಕಿವಿಮಾತು ಹೇಳಿದ್ದಾರೆ. ವಿಜಯವಾಣಿ ಗುರುವಾರದ ಸಂಚಿಕೆಯಲಿ ್ಲಯೋತ್ಪಾದನೆ ಬಿತ್ತನೆ ಶೀರ್ಷಿಕೆಯಡಿ ಪ್ರಕಟಿಸಿದ ಅಗ್ರ ವರದಿಯೊಂದಿಗೆ ‘ಎಚ್ಚರ ರೈತರೇ ಎಚ್ಚರ’ವೆಂದು ಟ್ವೀಟ್ ಮಾಡಿದ್ದಾರೆ. ಕೆಲವು ಒಳಸಂಚುಗಳು ಅನಾಮಧೇಯ ಕಂಪನಿ ರೈತರ ಮನೆ ಬಾಗಿಲಿಗೆ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇಲಾಖೆ ಈ ಬಗ್ಗೆ ನಿಗಾ ವಹಿಸಿದೆ. ರೈತರಿಗೆ ಅನ್ಯಾಯ, ಮೋಸ ಮಾಡುವಂತಹ ಯಾವುದೇ ಜಾಲವನ್ನು ಸಹಿಸುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮವಹಿಸಲಾಗುವುದು ಎಂದು ಪಾಟೀಲ್ ತಿಳಿಸಿದ್ದಾರೆ.

    ಐಟಿ ಕೇಸ್​​ಗೆ ತಡೆ ನೀಡಲು ಸುಪ್ರೀಂ ನಕಾರ: ಡಿಕೆಶಿಗೆ ಹಿನ್ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts