More

    ದಸರಾಗೆ ಈ ಸಲ ಪಾಸ್ ರದ್ದು ಮಾಡುವ ಚಿಂತನೆ; ಉದ್ಘಾಟಕರು ಯಾರು?: ಸಚಿವರು ಹೇಳಿದ್ದಿಷ್ಟು..

    ಮೈಸೂರು: ಜಗದ್ವಿಖ್ಯಾತ ಮೈಸೂರು ದಸರಾ ಆಚರಣೆ ಸಂಬಂಧ ಈಗಾಗಲೇ ತಯಾರಿ ಆರಂಭಗೊಂಡಿದ್ದು, ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಎಸ್​.ಟಿ. ಸೋಮಶೇಖರ್​ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಬಳಿಕ ಮಾತನಾಡಿದ ಅವರು, ನಾಳೆ ದಸರಾ ಗಜಪಯಣ ನಡೆಯಲಿದೆ. ಆನೆಗಳನ್ನು ವೀರನ ಹೊಸಹಳ್ಳಿಯಿಂದ ಕರೆ ತರಲಾಗುತ್ತೆ. ಈ ಬಾರಿ 14 ಆನೆಗಳನ್ನು ಆಯ್ಕೆ ಮಾಡಿದ್ದು, 3 ಆನೆ ಶ್ರೀರಂಗಪಟ್ಟಣ ದಸರಾದಲ್ಲಿ ಪಾಲ್ಗೊಳ್ಳುತ್ತವೆ. ಈ ಬಾರಿ ಚಾಮರಾಜನಗರ ದಸರಾದಲ್ಲೂ ಆನೆ ಪಾಲ್ಗೊಳ್ಳುತ್ತೆ ಎಂದು ಹೇಳಿದರು.

    ಇನ್ನು ದಸರಾ ಉದ್ಘಾಟಕರು ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉದ್ಘಾಟಕ ತೀರ್ಮಾನ ಮುಖ್ಯಮಂತ್ರಿಯವರಗೆ ವಹಿಸಲಾಗಿದೆ. ದಸರಾ ಸಂಬಂಧ 16 ಸಮಿತಿಗಳನ್ನು ರಚಿಸಿ, ಐಎಎಸ್ ಅಧಿಕಾರಿಗಳನ್ನು ಒಳಹೊಂಡಂತೆ ಸದಸ್ಯರನ್ನು ಸೇರಿಸಲಾಗುತ್ತದೆ. ವಿಶ್ವಮಟ್ಟದಲ್ಲಿ ಪ್ರಚಾರ ಸಿಗುವಂತೆ ನೋಡಿಕೊಳ್ಳಲಾಗುತ್ತದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಅದ್ಧೂರಿ ದಸರಾ ಆಚರಣೆ ಇರಲಿದೆ ಎಂದು ಹೇಳಿದರು.

    ದಸರಾಗೆ ಈ ಸಲ ವಿವಿಐಪಿ ಪಾಸ್ ಹೊರತುಪಡಿಸಿ ಉಳಿದ ಎಲ್ಲ ಪಾಸ್‌ಗಳನ್ನು ರದ್ದು ಮಾಡಲು ಚಿಂತನೆ ನಡೆಸಲಾಗಿದೆ. ಗಣ್ಯರು, ವಿದೇಶಿಗರಿಗಾಗಿ ಹೆಚ್ಚು ಅವಲಂಬಿತವಾದ ಗೋಲ್ಡ್ ಪಾಸ್​ ಜನರ ಒತ್ತಡ ಕಡಿಮೆ ಮಾಡುವ ದೃಷ್ಟಿಯಲ್ಲಿ ರದ್ದು ಮಾಡಲಾಗುವುದು. ಪಾಸ್‌ ವಿಚಾರವಾಗಿ ಕೆಲವೇ ದಿನಗಳಲ್ಲಿ ಸ್ಪಷ್ಟವಾದ ತೀರ್ಮಾನಕ್ಕೆ ಬರುತ್ತೇವೆ. ಪಾಸ್‌ಗಳಿಂದ ಗೋಲ್ಮಾಲ್ ಉಂಟಾಗುವ ಆರೋಪಗಳಿವೆ. ಅಂತಹ ಘಟನೆಗಳಿಗೆ ಈ ಬಾರಿ ಅವಕಾಶ ಇಲ್ಲ. ಪಾಸ್​ ಬಗ್ಗೆ ವಿಸ್ತೃತ ಚರ್ಚೆ ನಡೆಯುತ್ತಿದೆ ಎಂದು ಸಚಿವರು ಹೇಳಿದರು.

    ನಿಮ್ಮೂರಿಗೀಗ ಅವರಲ್ಲ, ಇವರೇ ಇನ್​ಸ್ಪೆಕ್ಟರ್​; 13 ಡಿವೈಎಸ್​ಪಿಗಳೂ ಟ್ರಾನ್ಸ್​ಫರ್​..

    ಮಗನ ಮೇಲೆ ಚಿರತೆ ದಾಳಿ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವು; ಬದುಕುಳಿದ ಮಗನಿಗೆ ಮತ್ತೊಂದು ಶಾಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts