More

    ಸುಳ್ಳು ಸಾಬೀತುಪಡಿಸಿದರೆ ಚುನಾವಣೆ ಕಣದಿಂದ ಹಿಂದಕ್ಕೆ

    ನರಗುಂದ: ನನ್ನ ಅಧಿಕಾರವಧಿಯಲ್ಲಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಜಾಹೀರಾತು ಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಯಾವುದಾದರೂ ಕೆಲಸ ಸುಳ್ಳು ಎಂದು ಸಾಬೀತುಪಡಿಸಿದರೆ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ತಾಲೂಕಿನ ಜಗಾಪುರ ಗ್ರಾಮದಲ್ಲಿ ಕೆಆರ್​ಐಡಿಎಲ್ ಇಲಾಖೆಯ 1 ಕೋಟಿ ರೂ. ವೆಚ್ಚದಲ್ಲಿ ಜಗಾಪುರದಿಂದ ನವಲಗುಂದ ರಸ್ತೆ, 1.50 ಕೋಟಿ ರೂ. ವೆಚ್ಚದ ಹೆಬ್ಬಾಳ ಒಳ ರಸ್ತೆ ಸುಧಾರಣೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ರಾಜಕಾರಣದಲ್ಲಿ ಟೀಕೆಗಳು ಸಹಜ. ಅನವಶ್ಯಕ ವಿಷಯಗಳನ್ನು ಯಾರೂ ಕಿವಿಗೆ ಹಾಕಿಕೊಳ್ಳಬಾರದು. ಅವಕಾಶ ಸಿಕ್ಕಾಗ ಕ್ಷೇತ್ರದ ಎಲ್ಲ ಜನಾಂಗದವರ ಸೇವೆ ಮಾಡಬೇಕೆನ್ನುವ ಮಹದಾಸೆಯಿಂದ ನನ್ನ ಅಧಿಕಾರವಧಿಯಲ್ಲಿ 2 ಸಾವಿರ ಕೋಟಿ ರೂ. ಅನುದಾನ ತಂದಿದ್ದೇನೆ. ಹೀಗಾಗಿ ನರಗುಂದ ಕ್ಷೇತ್ರದ ಚಿತ್ರಣ ಬದಲಾಗಿದೆ ಎಂದರು.

    ಜಗಾಪುರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ 24.38 ಕೋಟಿ ರೂ. ಅನುದಾನ ನೀಡಲಾಗಿದೆ. ಈಗ ಮತ್ತೆ 2.50 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಜಗಾಪುರದ 66 ಬಡ ಕುಟುಂಬಗಳಿಗೆ ಆಶ್ರಯ ಮನೆಯ ಹಕ್ಕುಪತ್ರ ವಿತರಿಸಲಾಗಿದೆ ಎಂದರು.

    ಮಲ್ಲಪ್ಪ ಮೇಟಿ ಮಾತನಾಡಿದರು. ಹುಣಸೀಕಟ್ಟಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಪರಮೇಶ್ವರ, ಶಂಕ್ರಯ್ಯಜ್ಜ ಮಠದ, ಗೋವಿಂದರಡ್ಡಿ ಸಿದ್ನಾಳ, ಎಂ.ಎಚ್. ತಿಮ್ಮನಗೌಡ್ರ, ಉಮೇಶಗೌಡ ಪಾಟೀಲ, ಶಾಂತವ್ವ ದೇವಕ್ಕಿ, ಅನೀಲ ಧರಿಯಣ್ಣವರ, ಅಜ್ಜುಗೌಡ ಪಾಟೀಲ, ಎಂ.ಎಸ್. ಪಾಟೀಲ, ಈರಪ್ಪ ಹೂಗಾರ, ಬಿ.ಎಸ್. ಪಾಟೀಲ, ಕೆಂಚಪ್ಪ ಕುರಿ, ಬಸವರಡ್ಡಿ ಕಾಮರಡ್ಡಿ, ರೇಣವ್ವ ಜೋಗಣ್ಣವರ, ಭಗವಂತಪ್ಪ ಜಲಗೇರಿ, ನಿರ್ಮಲಾ ಸತರಡ್ಡಿ, ವಿಜಯಲಕ್ಷ್ಮೀ ಕುರ್ಲಗೇರಿ, ಪಿಡಿಒ ವಿ.ಆರ್. ರಾಯನಗೌಡ್ರ ಇತರರಿದ್ದರು. ಎಚ್.ಬಿ. ಗಣಾಚಾರಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts