More

    ಪೊಲೀಸರಂತೆ ಸಮವಸ್ತ್ರ ಧರಿಸಿ ಫೀಲ್ಡಿಗಿಳಿಯಲಿದ್ದಾರೆ ಗಣಿ ಇಲಾಖೆ ಅಧಿಕಾರಿಗಳು

    ಬೆಂಗಳೂರು: ಪೊಲೀಸ್, ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಇರುವಂತೆ ಇನ್ನು ಮುಂದೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಸಿಬ್ಬಂದಿಯೂ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ, ಜಿಲ್ಲಾಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಶೀಘ್ರದಲ್ಲೇ ಪೊಲೀಸ್ ಮಾದರಿಯಲ್ಲಿ ಸಮವಸ್ತ್ರ ನೀಡಲಾಗುವುದು. ಗಣಿ ಅಧಿಕಾರಿಗಳಿಗೆ ಅವರ ಸ್ಥಾನಮಾನ(ಗ್ರೇಡ್​)ಕ್ಕೆ ತಕ್ಕಂತೆ ಸ್ಟಾರ್ ನೀಡಲಾಗುತ್ತದೆ. ಬೆಲ್ಟ್, ಹ್ಯಾಟ್ ಮೇಲೆ ಪ್ರತ್ಯೇಕ ಲಾಂಛನ ಇರಲಿದೆ ಎಂದರು.

    ಇದನ್ನೂ ಓದಿ: ಧರ್ಮಸ್ಥಳದ ಧರ್ಮಾಧಿಕಾರಿಯವರ ಸರಳತೆಗೆ ಮಾರುಹೋದ ಬೈಕರ್; ನಗುನಗುತ್ತಲೇ ಮಾತಾಡಿ ತಿಂಡಿಯನ್ನೂ ಕೊಟ್ಟ ವೀರೇಂದ್ರ ಹೆಗ್ಗಡೆ

    ಯಾವುದೇ ಸ್ಥಳದಲ್ಲಾದರೂ ದಿಢೀರನೆ ದಾಳಿ ನಡೆಸುವಾಗ ಸಿಬ್ಬಂದಿಯನ್ನು ಕೆಲವರು ಗುರುತಿಸುವುದಿಲ್ಲ. ಕಡೇಪಕ್ಷ ಸಿಬ್ಬಂದಿಗೆ ಸಮವಸ್ತ್ರ ನೀಡಿದರೆ ಗುರುತಿಸಲು ಸುಲಭವಾಗುತ್ತದೆ, ಗಂಭೀರತೆ ಬರುತ್ತದೆ ಎಂದರು.

    ಇದರ ಜತೆಗೆ ನಿವೃತ್ತ ಸೇನಾಯೋಧರನ್ನು ಇಲಾಖೆಯಲ್ಲಿ ಭದ್ರತಾ ಅಧಿಕಾರಿ (ಸೆಕ್ಯೂರಿಟಿ) ನಿಯೋಜನೆ ಮಾಡಿಕೊಳ್ಳುವ ಚಿಂತನೆ ಇದೆ. ಹೊರಗುತ್ತಿಗೆ ಆಧಾರದ ಮೇಲೆ ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ತುಮಕೂರು ಸೇರಿ ಪ್ರತಿಜಿಲ್ಲೆಗೆ ಐವರು ಭದ್ರತಾ ಸಿಬ್ಬಂದಿ ನೇಮಕ ಮಾಡುವುದು ಮತ್ತು ವಾಹನ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

    ಇದನ್ನೂ ಓದಿ: ಗಂಡ ಮಾರ್ಕೆಟ್​ನಲ್ಲಿ ಬೇರೆ ಹೆಂಗಸಿನ ಜತೆಗಿದ್ದ; ಅದನ್ನು ಕಂಡ ಹೆಂಡತಿ ಬೀದಿರಂಪ ಮಾಡಿದ್ಲು; ಮದ್ವೆಯಾಗಿ ಒಂದೇ ವರ್ಷಕ್ಕೆ ಹೀಗೆಲ್ಲ…

    ನಾನು ನೀವು ಹೋಗಿ ಅವರ ಬಟ್ಟೆ ಬಿಚ್ಚಿದ್ವಾ? ಆ ಯಪ್ಪ ಎದುರಿಗೆ ಸಿಕ್ಕಾಗ ಏನು ಹೇಳಬೇಕೋ ಹೇಳುತ್ತೇನೆ: ಸಿಡಿ ಕೇಸ್​ ಬಗ್ಗೆ ಡಿ.ಕೆ. ಸುರೇಶ್ ಸಿಡಿಮಿಡಿ

    ಲವರ್​ ಮದುವೆ ನಿಶ್ಚಯವಾಗಿದ್ದಕ್ಕೆ ಸಿಟ್ಟಾಗಿ ಆತನ ಮೇಲೆ ಆ್ಯಸಿಡ್ ಎರಚಿದ ವಿವಾಹಿತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts