More

    ಉಗ್ರರ ಗುಂಡಿನ ದಾಳಿಗೆ ಜಮ್ಮು ಕಾಶ್ಮೀರದ ಮೂವರು ಯುವ ಬಿಜೆಪಿ ನಾಯಕರ ಸಾವು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಾಜಿಗುಂಡ ಏರಿಯಾದಲ್ಲಿ ಸ್ಥಳೀಯ ಬಿಜೆಪಿ ನಾಯಕರ ಮೇಲೆ ಉಗ್ರರು ಗುರುವಾರ ಗುಂಡಿನ ದಾಳಿ ನಡೆಸಿದ್ದು, ಗಂಭೀರ ಗಾಯಗಳಿಂದ ಫಿದಾ ಹುಸೇನ್​​ ಯಾಟೂ, ಉಮರ್​ ರಂಜಾನ್​ ಹಜ್ಜಾನ್​ ಮತ್ತು ಉಮರ್​ ರಶೀದ್​ ಎಂಬುವರು ಮೃತಪಟ್ಟಿದ್ದಾರೆಂದು ಕುಲ್ಗಾಮ್​ ಜಿಲ್ಲೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ಘಟನೆ ಕಾಜಿಗುಂಡದ ವೈಕೆ ಪೋರಾದಲ್ಲಿರುವ ಈದ್ಗಾದಲ್ಲಿ ನಡೆದಿದೆ. ರಾತ್ರಿ 8.30ರ ಸುಮಾರಿಗೆ ಉಗ್ರರು ಗುಂಡಿನ ದಾಳಿ ನಡೆಸುವಾಗ ಸಂತ್ರಸ್ತರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾದರೂ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ದಾಳಿಕೋರರು ಆಲ್ಟೋ ಕಾರಿನಲ್ಲಿ ಪರಾರಿಯಾದರೆಂದು ಸ್ಥಳೀಯರು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಪುಲ್ವಾಮಾ ಪಾತಕಿ ಕೃತ್ಯ, ಕಳಚಿತು ಪಾಕ್​ ಮುಖವಾಡ…

    ವೈಕೆ ಪೋರಾ ನಿವಾಸಿ ಫಿದಾ ಹುಸೇನ್​ ಯಾಟೂ ಭಾರತೀಯ ಜನತಾ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಉಳಿದಂತೆ ವೈಕೆ ಪೋರಾ ನಿವಾಸಿಗಳಾದ ಉಮರ್​ ರಂಜಾನ್​ ಹಜ್ಜನ್​​ ಮತ್ತು ಉಮರ್​ ರಶೀದ್​ ಬೇಗ್​ ಸ್ಥಳೀಯ ಬಿಜೆಪಿ ನಾಯಕರಾಗಿದ್ದರು.

    ದಾಳಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ದಾಳಿ ನಡೆದ ಕಾಜಿಗುಂಡದ ಈದ್ಗಾ ಪ್ರದೇಶವನ್ನು ಭಾರತೀಯ ಸೇನೆ ಸುತ್ತುವರಿದಿದ್ದು, ಉಗ್ರರರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

    ಇನ್ನು ಘಟನೆಯನ್ನು ಖಂಡಿಸಿರುವ ಪ್ರಧಾನಿ ಮೋದಿ ಟ್ವೀಟ್​ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ನಮ್ಮ ಯುವ ಕಾರ್ಯಕರ್ತರ ಹತ್ಯೆಯನ್ನು ಖಂಡಿಸುತ್ತೇನೆ. ಯುವಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದರು. ಇಂತಹ ದುಃಖದ ಸಮಯದಲ್ಲಿ ಮೃತರ ಕುಟುಂಬದ ಜತೆ ನಾನಿರುತ್ತೇನೆ. ಯುವಕರ ಆತ್ಮಕ್ಕೆ ಶಾಂತಿ ಸಿಗಲೆಂದು ಹೇಳಿದ್ದಾರೆ.

    ಇದನ್ನೂ ಓದಿ: ಭಾರತದ ದಾಳಿ ಭೀತಿ, ಪಾಕ್ ಸೇನಾ ಮುಖ್ಯಸ್ಥರಿಗೆ ನಡುಕ!

    ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್​ ಗವರ್ನರ್​ ಮನೋಜ್​ ಸಿನ್ಹಾ ಸಹ ಘಟನೆಯನ್ನು ಖಂಡಿಸಿದ್ದಾರೆ. ದಕ್ಷಿಣ ಕಾಶ್ಮೀರದ ಕಾಜಿಗುಂಡ ಏರಿಯಾದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸುತ್ತೇನೆ. ಹಿಂಸಾಚಾರವನ್ನು ಮಾಡುವವರು ಮಾನವೀಯತೆಯ ಶತ್ರುಗಳು ಮತ್ತು ಇಂತಹ ಹೇಡಿತನ ಕೃತ್ಯಗಳನ್ನು ನಾವೆಂದಿಗೂ ಒಪ್ಪಿಕೊಳ್ಳಲಾಗದು. ಹತ್ಯೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇದರ ಜತೆಯಲ್ಲಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದು, ಸರ್ಕಾರದಿಂದ ಬರುವ ಎಲ್ಲ ನೆರವನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)

    ಸುಟ್ಟ ಕಾರಿನಲ್ಲಿ ಶವ ಪತ್ತೆ ಪ್ರಕರಣ: ಪತ್ನಿಯ ಪ್ರೀತಿ ನಾಟಕ ನಂಬಿ ಹೋದವನಿಗೆ ಕಾದಿತ್ತು ದುರಂತ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts