More

    ಜಮ್ಮುವಿನಲ್ಲಿ ಉಗ್ರರಿಂದ ದಾಳಿ: ಕೊಡಲಿಯಿಂದ ಪೊಲೀಸ್‌ ಅಧಿಕಾರಿ ಹತ್ಯೆ

    ಜಮ್ಮು: ಜಮ್ಮು ಕಾಶ್ಮೀರದ ಕಿಶ್‌ತ್ವಾರ್ ಜಿಲ್ಲೆಯಲ್ಲಿ ಉಗ್ರರು ಏಕಾಏಕಿ ದಾಳಿ ನಡೆಸಿದ್ದು, ಕೊಡಲಿಯಿಂದ ಪೊಲೀಸ್‌ ಅಧಿಕಾರಿಯನ್ನು ಹತ್ಯೆಗೈದಿರುವ ಘಟನೆ ಸೋಮವಾರ ನಡೆದಿದೆ. ಘಟನೆಯಲ್ಲಿ ಎಎಸ್‌ಐ ಒಬ್ಬರಿಗೆ ಗಂಭೀರವಾಗಿ ಗಾಯವಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

    ಪಾಷಿದ್‌ ಇಲ್ಬಾಲ್‌ ಘಟನೆಯಲ್ಲಿ ಹುತಾತ್ಮರಾದ ಪೊಲೀಸ್‌ ಅಧಿಕಾರಿ. ಎಎಸ್‌ಐ ವಿಶಾಲ್‌ ಸಿಂಗ್‌ ಚಿಕಿತ್ಸೆ ಪಡೆಯುತ್ತಿದ್ದಾರೆ.

    ವರದಿ ಪ್ರಕಾರ, ಡಕನ್ ಪ್ರದೇಶದ ಟಾನ್‌ದಾರ್‌ ಗ್ರಾಮದಲ್ಲಿ ಸ್ಥಳೀಯ ಪೊಲೀಸರ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಲಾಗಿದೆ. ಪೊಲೀಸ್‌ ಅಧಿಕಾರಿ ಸ್ಥಳದಲ್ಲಿಯೇ ಮೃತಪಟ್ಟರೆ, ಎಎಸ್‌ಐ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಆರೋಪಿಗಳನ್ನು ಬಶ್ರಾತ್ ಹುಸೇನ್‌ ಮತ್ತು ಆಶಿಖಿ ಹುಸೇನ್‌ ಎಂದು ಗುರುತಿಸಲಾಗಿದೆ. ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಇವರನ್ನು ಕೆಲ ತಿಂಗಳ ಹಿಂದೆ ಬಂಧಿಸಲಾಗಿತ್ತು. 20 ದಿನಗಳ ಹಿಂದಷ್ಟೇ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ. ಜಮ್ಮು ಕಾಶ್ಮೀರದ ಕುಲ್ಗಾಮ ಜಿಲ್ಲೆಯಲ್ಲಿ ಅರ್ಮಿ ಜವಾನ್‌ ಒಬ್ಬರನ್ನು ಉಗ್ರರು ಗುಂಡಿಟ್ಟು ಗಾಯಗೊಳಿಸಿದ ಬೆನ್ನಲ್ಲೇ ಈ ಘಟನೆಯೂ ನಡೆದಿದೆ.

    ಘಟನೆ ಬಳಿಕ ದಾಳಿಕೋರರನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ನೇತೃತ್ವದ ತಂಡ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್‌)

    ಕರೊನಾ ಸೋಂಕು ಪರೀಕ್ಷೆ ವಿಚಾರದಲ್ಲಿ ಬಡವರ ಪರವಾಗಿ ನಿಂತ ಸುಪ್ರೀಂಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts