More

    ಮತ್ತೆ ಕೃಷ್ಣ ಜತೆಗೆ ಮಿಲನಾ?; ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರಕ್ಕೆ ನಾಯಕಿ …

    ಬೆಂಗಳೂರು: ಕೃಷ್ಣ ಮತ್ತು ಮಿಲನಾ ಈಗಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಲವ್​ ಮಾಕ್ಟೇಲ್​’ ಮತ್ತು ಅದರ ಮುಂದುವರೆದ ಭಾಗದಲ್ಲಿ ಒಟ್ಟಿಗೆ ನಟಿಸಿದ ಮೇಲೆ, ಇತ್ತೀಚೆಗೆ ‘ಲವ್​ ಬರ್ಡ್ಸ್​’ ಎಂಬ ಚಿತ್ರದಲ್ಲೂ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಕಾಂತಾರ ಸಿನಿಮಾ ನೋಡಿದ್ರಾ ಎಂಬ ಪ್ರಶ್ನೆಗೆ ಸಮಯ ಸಿಕ್ಕಿಲ್ಲ ಎಂದು ಉತ್ತರ ಕೊಟ್ಟ ರಶ್ಮಿಕಾ!

    ‘ಲವ್​ 360’ ಬಳಿಕ ನಿರ್ದೇಶಕ ಶಶಾಂಕ್​ ಪ್ರಾರಂಭಿಸಿರುವ ಹೊಸ ಚಿತ್ರ ‘ಕೌಸಲ್ಯಾ ಸುಪ್ರಜಾ ರಾಮ’. ಇತ್ತೀಚೆಗಷ್ಟೇ ವಿಭಿನ್ನ ವಿಡಿಯೋ ಮೂಲಕ ಶಶಾಂಕ್​ ಈ ಚಿತ್ರದ ಟೈಟಲ್​ ಬಿಡುಗಡೆ ಮಾಡಿದ್ದರು. ಚಿತ್ರದ ಚಿತ್ರೀಕರಣವೂ ಪ್ರಾರಂಭವಾಗಿದೆ. ಆದರೆ, ಕೃಷ್ಣಗೆ ನಾಯಕಿ ಯಾರು ಎಂಬ ವಿಷಯವನ್ನು ಚಿತ್ರತಂಡದವರು ಹೇಳಿರಲಿಲ್ಲ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಮೂಲಗಳ ಪ್ರಕಾರ ಒಬ್ಬ ನಾಯಕಿಯಾಗಿ ಮಿಲನಾ ಆಯ್ಕೆಯಾಗಿದ್ದಾರಂತೆ.

    ಇದೊಂದು ತಾಯಿ-ಮಗ ನಡುವಿನ ಭಾವನಾತ್ಮಕ ಚಿತ್ರವಾಗಿದ್ದು, ನಾಯಕನಾಗಿ ‘ಡಾರ್ಲಿಂಗ್​’ ಕೃಷ್ಣ, ತಾಯಿಯ ಪಾತ್ರದಲ್ಲಿ ಸುಧಾ ಬೆಳವಾಡಿ, ತಂದೆಯ ಪಾತ್ರದಲ್ಲಿ ರಂಗಾಯಣ ರಘು ನಟಿಸುತ್ತಿದ್ದಾರೆ. ಜತೆಗೆ ಅಚ್ಯುತ್​ ಕುಮಾರ್​, ಗಿರಿರಾಜ್​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಚಿತ್ರದ ಕುರಿತು ಇತ್ತೀಚೆಗೆ ಮಾತನಾಡಿದ್ದ ಶಶಾಂಕ್​, ‘ಇದೊಂದು ಭಾವನಾತ್ಮಕ ಚಿತ್ರ. ಹಾಗಂತ ಇಲ್ಲಿ ಮನರಂಜನೆಗೂ ಕೊರತೆಯಿಲ್ಲ. ಮನರಂಜನೆ, ಸೆಂಟಿಮೆಂಟ್​ ಇರಡೂ ಇರುವ, ಕುಟುಂಬ ಸಮೇತರಾಗಿ ನೋಡಬಹುದಾದ ಸುಂದರ ಚಿತ್ರ’ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಸ್ಪರ್ಧೆಯಿಂದ ಹಿಂದೆ ಸರಿಯಿತಾ ‘ಆದಿಪುರುಷ್​’? ಜನವರಿಯಲ್ಲಿ ಬಿಡುಗಡೆ ಡೌಟು!

    ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರವನ್ನು ಶಶಾಂಕ್​ ಸಿನಿಮಾಸ್​ ಹಾಗೂ ಸಚಿವ ಬಿ.ಸಿ. ಪಾಟೀಲ್​ ಅವರ ಕೌರವ ಪ್ರೊಡಕ್ಷನ್ಸ್​ ಜಂಟಿಯಾಗಿ ನಿರ್ಮಿಸುತ್ತಿವೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಅರ್ಜುನ್​ ಜನ್ಯ ಸಂಗೀತ ನೀಡುತ್ತಿದ್ದಾರೆ. ಚಿತ್ರಕ್ಕೆ ಸುಜ್ಞಾನ್​ ಛಾಯಾಗ್ರಹಣ, ಗಿರಿ ಮಹೇಶ್​ ಸಂಕಲನ ಇರಲಿದೆ.

    ಯಾವ ಬಾಲಿವುಡ್​ ನಟನಿಗೂ ತಮ್ಮ ಪಾತ್ರ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ರಿಷಭ್​ ಹೇಳಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts