More

    ಚೀನಾದ ಆ್ಯಪ್​​ಗಳನ್ನು ನಿಷೇಧಿಸಿದ ಭಾರತವನ್ನು ಶ್ಲಾಘಿಸಿದ ಅಮೆರಿಕ​ ವಿದೇಶಾಂಗ ಕಾರ್ಯದರ್ಶಿ

    ವಾಷಿಂಗ್ಟನ್​ ಡಿಸಿ: ಚೀನಾದ 29 ಆ್ಯಪ್​ಗಳನ್ನು ನಿಷೇಧಿಸಿದ ಭಾರತದ ನಿರ್ಧಾರವನ್ನು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಅವರು ಸ್ವಾಗತಿಸಿದ್ದಾರೆ.

    ಗಡಿಯಲ್ಲಿ ಸದಾ ಕಾಲು ಕೆರೆಯುವ ಚೀನಾ ಜೂ.15ರಂದು ಭಾರತದ 20 ಯೋಧರನ್ನು ಹತ್ಯೆ ಮಾಡಿದೆ. ಆ ದೇಶದ ಸೈನಿಕರೂ ಒಂದಷ್ಟು ಜನ ಸತ್ತಿದ್ದರೂ, ಇದುವರೆಗೂ ನಿಖರ ಸಂಖ್ಯೆಯನ್ನು ಅದು ಹೇಳಿಲ್ಲ. ಇದನ್ನೂ ಓದಿ: ನರಿಗಳೂ ಕಿಲಕಿಲನೆ ನಗುತ್ತವೆ…! ಅನುಮಾನವಿದ್ದರೆ ಈ ವಿಡಿಯೋ ನೋಡಿ…

    ದೇಶದೊಳಗೆ ಚೀನಾ ಉತ್ಪನ್ನಗಳ ಬಹಿಷ್ಕಾರದ ಅಭಿಯಾನ ಶುರುವಾಗುತ್ತಿದ್ದಂತೆ, ಕೇಂದ್ರ ಸರ್ಕಾರವೂ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡು, ಭಾರತದಲ್ಲಿ ತುಂಬ ಪ್ರಚಲಿತದಲ್ಲಿದ್ದ ಟಿಕ್​ಟಾಕ್​ ಸೇರಿ ಒಟ್ಟು 59 ಆ್ಯಪ್​ಗಳನ್ನು ನಿಷೇಧಿಸಿದೆ. ದೇಶದ ಭದ್ರತೆ, ಸಮಗ್ರತೆಯ ದೃಷ್ಟಿಯಿಂದ ಬ್ಯಾನ್​ ಮಾಡುತ್ತಿರುವುದಾಗಿ ಹೇಳಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಂಪಿಯೋ, ಕೆಲವು ಮೊಬೈಲ್​ ಆ್ಯಪ್​ಗಳನ್ನು ನಿಷೇಧ ಮಾಡಿದ ಭಾರತದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಇದೊಂದು ಉತ್ತಮ ನಡೆ ಎಂದಿದ್ದಾರೆ. (ಏಜೆನ್ಸೀಸ್​)

    ಪ್ರಿಯಾಂಕಾ ಗಾಂಧಿ ವಾದ್ರಾಗೆ ಶಾಕ್​ ನೀಡಿದ ಕೇಂದ್ರ ವಸತಿ ಸಚಿವಾಲಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts