More

    ಸೋನು ಸೂದ್ ಮಾಡಿದ ಒಂದೇ ಸಹಾಯಕ್ಕೆ ಆತನ ಅಭಿಮಾನಿ ಮಾಡಿದ್ದೇನು ನೋಡಿ!

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಾಲಿವುಡ್​ ನಟ ಸೋನು ಸೂದ್​, ಮಹಾರಾಷ್ಟ್ರದ ಮುಂಬೈನಲ್ಲಿನ ಸಾಕಷ್ಟು ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು. ನಿತ್ಯ ಹತ್ತಾರು ವಾಹನಗಳ ಮೂಲಕ ಜನರನ್ನು ಕಳುಹಿಸಿ ಅವರ ಪ್ರೀತಿ ಗಿಟ್ಟಿಸಿಕೊಂಡಿದ್ದರು. ಸೋಷಿಯಲ್​ ಮೀಡಿಯಾದಲ್ಲಿ ಸೋನು ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸೋಷಿಯಲ್​ ಮಿಡಿಯಶ ಮೂಲಕವೇ ಸೋನು ಅವರಿಗೆ ಧನ್ಯವಾದವನ್ನೂ ಅರ್ಪಿಸುತ್ತಿದ್ದಾರೆ. ಇದೀಗ ಬಿಹಾರದ ಅಭಿಮಾನಿಯೊಬ್ಬ ವಿಭಿನ್ನ ಶೈಲಿಯಲ್ಲಿ ಕೃತಜ್ಞತೆ ಅರ್ಪಿಸಿದ್ದಾರೆ.

    ಇದನ್ನೂ ಓದಿ: ಪುಟಾಣಿಗಳೇ ಮೊಬೈಲ್ ಗೀಳು ಒಳ್ಳೆಯದಲ್ಲ; ಹಾರುವ ಹಂಸಗಳ ಸಂದೇಶವಿದು…

    ಬಿಹಾರ ಮೂಲದ ನಿರಾಶ್ರಿತನೊಬ್ಬ ಕೆಲಸಕ್ಕೆಂದು ಮುಂಬೈಗೆ ಬಂದಿದ್ದ. ಕರೊನಾ ಹಿನ್ನೆಲೆಯಲ್ಲಿ ಸೋನು ಸೂದ್ ಸಹಾಯದಿಂದ ಮರಳಿ ಊರು ತಲುಪಿದ್ದ. ನಟನ ಕಾರ್ಯಕ್ಕೆ ಮನಸೋತು, ಊರಲ್ಲೇ ವೆಲ್ಡಿಂಗ್​ ಶಾಪ್​ ಓಪನ್​ ಮಾಡಿದ್ದು, ಅದಕ್ಕೆ ಸೋನು ಸೂದ್​ ವೆಲ್ಡಿಂಗ್​ ಶಾಪ್​ ಎಂದು ಹೆಸರಿಟ್ಟಿದ್ದಾನೆ. ಸದ್ಯ ಆ ಫೋಟೋ ಎಲ್ಲೆಡೆ ಹರಿದಾಡುತ್ತಿದ್ದು, ಸೋನು ಸೂದ್​ ಅವರನ್ನೂ ತಲುಪಿದೆ.

    ಇದನ್ನೂ ಓದಿ: ಆನ್​ಲೈನ್​ನಲ್ಲಿ ಒಂದಾದರು ರಮ್ಯಾ- ರಕ್ಷಿತಾ

    ಕೇರಳ, ಕರ್ನಾಟಕ, ಬಿಹಾರ, ಓರಿಸ್ಸಾ ಹೀಗೆ ಸಾಕಷ್ಟು ರಾಜ್ಯಗಳ ಜನರನ್ನು ಅವರವರ ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ನಟ ಸೋನು ಸೂದ್​ ಮಾಡಿದ್ದರು. ಅಷ್ಟೇ ಒಂದಷ್ಟು ಮಂದಿಯನ್ನು ವಿಮಾನದ ಮೂಲಕವೂ ಶಿಫ್ಟ್ ಮಾಡಿಸಿದ್ದರು.
    ಸದ್ಯ ಈ ಲಾಕ್​ಡೌನ್​ ಅನುಭವವನ್ನೇ ಪುಸ್ತಕ ರೂಪದಲ್ಲಿ ಹೊರತರುವ ವಿಚಾರ ಸೋನು ಸೂದ್​ ತಲೆಯಲ್ಲಿದ್ದು, ಶೀಘ್ರದಲ್ಲಿಯೇ ಆ ಕೆಲಸಕ್ಕೂ ಅವರು ಮುಂದಡಿ ಇಡಲಿದ್ದಾರೆ. (ಏಜೆನ್ಸೀಸ್​)

    PHOTOS: ಬಿಕಿನಿಯಲ್ಲಿ ನಟಿ ಇಲಿಯಾನಾ ಬಿಸಿಲು ಕಾಯಿಸುತ್ತಿರೋ ಪರಿ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts