More

    ಕುಟುಂಬದ ಸದಸ್ಯರಿಗೆ ಆಟಗಾರರ ಜತೆಗಿರಲು ಅವಕಾಶ ನೀಡಿದ್ದೇ ಮುಂಬೈ ಇಂಡಿಯನ್ಸ್ ಯಶಸ್ಸಿಗೆ ಕಾರಣವಂತೆ!

    ನವದೆಹಲಿ: ಕರೊನಾ ಭೀತಿಯ ನಡುವೆಯೂ ಐಪಿಎಲ್ 13ನೇ ಆವೃತ್ತಿಯ ವೇಳೆ ಅರಬ್ ರಾಷ್ಟ್ರಕ್ಕೆ ಕುಟುಂಬದ ಸದಸ್ಯರನ್ನು ಕರೆದೊಯ್ಯಲು ಬಿಸಿಸಿಐ ನಿರ್ಬಂಧ ಹೇರಿರಲಿಲ್ಲ. ಆದರೂ ಕೆಲ ತಂಡಗಳು ಮತ್ತು ಆಟಗಾರರು ಕುಟುಂಬದ ಸದಸ್ಯರನ್ನು ತವರಿನಲ್ಲೇ ಬಿಟ್ಟು ಐಪಿಎಲ್ ಟೂರ್ನಿಗೆ ತೆರಳಿದ್ದರು. ಆದರೆ ಮುಂಬೈ ಇಂಡಿಯನ್ಸ್ ತಂಡ ಮಾತ್ರ ತನ್ನ ತಂಡದ ಎಲ್ಲ ಸದಸ್ಯರಿಗೆ, ಮಕ್ಕಳ ಸಹಿತ ಕುಟುಂಬದ ಸದಸ್ಯರನ್ನು ಯುಎಇಗೆ ಕರೆದೊಯ್ಯಲು ಅವಕಾಶ ಕಲ್ಪಿಸಿತ್ತು. ಇದರಿಂದಾಗಿಯೇ ಮುಂಬೈ ಇಂಡಿಯನ್ಸ್ ತಂಡ ಸತತ 2ನೇ ಮತ್ತು ಒಟ್ಟಾರೆ 5ನೇ ಬಾರಿ ಐಪಿಎಲ್ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಯಿತು ಎಂದು ತಂಡದ ಪ್ರಮುಖ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.

    ಕುಟುಂಬದ ಪ್ರಾಮುಖ್ಯತೆಯ ಬಗ್ಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ತಿಳಿದಿದೆ. ಪಂದ್ಯ ಮುಗಿಸಿ ಹೋಟೆಲ್ ಕೋಣೆಗೆ ಮರಳಿದಾಗ ಮಾನಸಿಕವಾಗಿ ಬೆಂಬಲ ನೀಡುವಂಥವರು ಆಟಗಾರರ ಜತೆಗಿರುವುದು ಅಗತ್ಯತೆ ಬಗ್ಗೆ ಅವರಿಗೆ ಅರಿವಿದೆ ಎಂದು ಮುಂಬೈ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

    ಸೂರ್ಯಕುಮಾರ್ ಐಪಿಎಲ್ ಟೂರ್ನಿಗೆ ಪತ್ನಿ ದೇವಿಶಾ ಶೆಟ್ಟಿ ಅವರನ್ನು ಜತೆಗೆ ಕರೆದೊಯ್ದಿದ್ದರು. ಮಂಗಳೂರು ಮೂಲದ ದೇವಿಶಾ ಅವರನ್ನು ಸೂರ್ಯಕುಮಾರ್ 2016ರಲ್ಲಿ ವಿವಾಹವಾಗಿದ್ದರು.

    ಪಂದ್ಯದಿಂದ ಮರಳಿದ ಬಳಿಕ ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವಕಾಶ ಲಭಿಸಿದ್ದರಿಂದ ನಾವು ಮುಂದಿನ ಪಂದ್ಯಕ್ಕೆ ತಾಜಾತನದಿಂದ ಸಜ್ಜಾಗುತ್ತಿದ್ದೆವು. ಒಬ್ಬ ಆಟಗಾರ ಯಶಸ್ಸಿನಿಂದ ಎಲ್ಲ ಆಟಗಾರರ ಕುಟುಂಬವೂ ಸಂಭ್ರಮಿಸುತ್ತಿತ್ತು. ಕುಟುಂಬದ ಸದಸ್ಯರು ತಂಡದ ಇತರ ಆಟಗಾರರಿಗೂ ಉತ್ತಮ ನಿರ್ವಹಣೆ ತೋರಲು ಸ್ಫೂರ್ತಿ ತುಂಬುತ್ತಿದ್ದರು ಎಂದು ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿನ ಬಗ್ಗೆ ವಿವರಿಸಿದ್ದಾರೆ.

    ಬಾಂಗ್ಲಾ ಕ್ರಿಕೆಟಿಗ ಶಕೀಬ್ ವಿರುದ್ಧ ಬಾಲಿವುಡ್ ನಟಿ ಕಂಗನಾ ಹರಿಹಾಯ್ದಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts