More

    ಕರ್ನಾಟಕ ಸೇರ್ತೀವಿ ಅಂದಿದ್ದಕ್ಕೆ ಗ್ರಾಮ ಪಂಚಾಯತಿಯನ್ನೇ ವಿಸರ್ಜಿಸಲು ಮುಂದಾದ ಮಹಾ ಸರ್ಕಾರ..!

    ವಿಜಯಪುರ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಈಗ ಇನ್ನೊಂದು ಹಂತವನ್ನೇ ತಲುಪಿದೆ ಎನ್ನಬಹುದು. ಕರ್ನಾಟಕದ ಬಸ್​ಗಳ ಮೇಲೆ ಮಹಾ ಪುಂಡರು ದಾಳಿ ಮಾಡಿದ ನಂತರ ಮಹಾರಾಷ್ಟ್ರದಲ್ಲಿರುವ ಕೆಲವು ಗ್ರಾಮಗಳಲ್ಲಿ ಕರ್ನಾಟಕ ಸೇರುವ ಕೂಗು ಕೇಳಿಸಿತ್ತು. ಈಗ ವಿರೋಧವನ್ನು ಮಟ್ಟಹಾಕಲು ಮಹಾ ಸರ್ಕಾರ ಯಾವ ಹೆಜ್ಜೆ ಇಡಲೂ ಸಿದ್ಧ ಎಂದು ತೋರಿಸಿಕೊಟ್ಟಿದೆ.

    ಇದೀಗ ಕರ್ನಾಟಕ ಸೇರಲು ನಿರ್ಧಾರ ಮಾಡಿರುವ ಕನ್ನಡಿಗರಿಗೆ ಮಹಾ ಸರ್ಕಾರ ಬೆದರಿಕೆ ಹಾಕತೊಡಗಿದೆ. ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನಲ್ಲಿರೋ ಕನ್ನಡಿಗರಿಗೆ ನೀವು ಕರ್ನಾಟಕಕ್ಕೆ ಸೇರುತ್ತೇವೆ ಎಂದರೆ ನಾವು ನಿಮ್ಮ ಗ್ರಾಮ ಪಂಚಾಯತಿಯನ್ನೇ ವಿಸರ್ಜಿಸುತ್ತೇವೆ ಎಂದು ಮಹಾರಾಷ್ಟ್ರ ಸರ್ಕಾರ ಉದ್ಧಟತನ ಮೆರೆಯಲು ಮುಂದಾಗಿದೆ.

    ಈಗ ಕರ್ನಾಟಕ ಸೇರಲು ಇಚ್ಛೆ ವ್ಯಕ್ತ ಪಡಿಸಿದ್ದ ಅಕ್ಕಲಕೋಟ ತಾಲೂಕಿನ 11 ಗ್ರಾಮ ಪಂಚಾಯತಿಗಳನ್ನು ವಿಸರ್ಜನೆ ಮಾಡಲು ಮಹಾ ಸರ್ಕಾರ ಮುಂದಾಗಿದೆ. ಕರ್ನಾಟಕಕ್ಕೆ ಸೇರಲು ಠರಾವು ಪಾಸ್ ಮಾಡಿರುವ ಗ್ರಾಪಂ ವಿಸರ್ಜನೆ ಹಾಗೂ ಗ್ರಾಮ ಪಂಚಾಯತಿಯ ಅಧಿಕಾರಿಗಳನ್ನು ಸೇವೆಯಿಂದ ತೆಗೆದು ಹಾಕೋ ಬೆದರಿಕೆ ಕೂಡ ಒಡ್ಡಿದೆ.

    ಆದರೆ ಇದ್ಯಾವುದಕ್ಕೂ ಬಗ್ಗದ ಕನ್ನಡಿಗರು ವಿಸರ್ಜನೆ ಬೆದರಿಕೆಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಗಲ್ಲು ಶಿಕ್ಷೆ ನೀಡಿದರೂ ನಾವು ಯಾವುದಕ್ಕೂ ಹೆದರಲ್ಲಾ ಎಂದು ಗಡಿನಾಡ ಕನ್ನಡಿಗರು ಉತ್ತರಿಸಿದ್ದಾರೆ! ಈ ಹಿಂದೆ 2002 ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 22 ಗ್ರಾಮಗಳ ಜನರು ಮಹಾರಾಷ್ಟ್ರಕ್ಕೆ ಸೇರಲು ನಿರ್ಧಾರ ಮಾಡಿದ್ದರು. ಅಗತ್ಯ ಮೂಲಭೂತ ಸೌಕರ್ಯ ನೀಡಿ ಇಲ್ಲವೇ ಮಹಾರಾಷ್ಟ್ರಕ್ಕೆ ಸೇರುತ್ತೇವೆಂದು ತೀರ್ಮಾನ ಮಾಡಿದ್ದರು. ಆಗಿನ ಕರ್ನಾಟಕ ಮುಖ್ಯಮಂತ್ರಿ ಎಸ್ಎಂ ಕೃಷ್ಣ 204 ಕೋಟಿ ರೂಪಾಯಿಯನ್ನು ಆ ಭಾಗಕ್ಕೆ ಅನುದಾನ ನೀಡಿದ್ದರು.

    ಈಗ ಅದೇ ರೀತಿ ಮಹಾರಾಷ್ಟ್ರ ಸರ್ಕಾರ ನಮಗೆ ಅನುದಾನ ನೀಡಿ ಎಲ್ಲಾ ಸೌಕರ್ಯ ನೀಡಿ ಎಂದು ಅಕ್ಕಲಕೋಟ ಜನರ ಒತ್ತಾಯ ಮಾಡಿದ್ದಾರೆ. ಅನುದಾನ ಹಾಗೂ ಇತರೆ ಸೌಕರ್ಯ ನೀಡಿ ಇಲ್ಲವೇ ಕರ್ನಾಟಕಕ್ಕೆ ಸೇರಲು ಅನುಮತಿ ನೀಡಿ ಎಂದು ಜನರು ಒತ್ತಾಯ ಮಾಡಿದ್ದಾರೆ. ಇದು ಒಂದು ಗ್​ರಾಮದ ಜನರ ಮಾತಲ್ಲ. ಇದು ಸೊಲ್ಲಾಪೂರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ವಿವಿಧ ಗ್ರಾಮಗಳ ಜನರ ಒತ್ತಾಯ. ಇದಕ್ಕೆ ಮಹಾ ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎನ್ನುವದನ್ನು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts