More

    ಇನ್ನು ಗುಜರಾತಿನಲ್ಲಿ ವಿರೋಧ ಪಕ್ಷವೇ ಇರಲ್ವಾ?!

    ಅಹಮದಾಬಾದ್​: ಗುಜರಾತ್​ ವಿಧಾನಸಭಾ ಚುನಾವಣೆಯಲ್ಲಿ ಈಗಾಗಲೇ ಬಿಜೆಪಿ ಮ್ಯಾಜಿಕ್​ ನಂಬರ್​ ದಾಟಿ ಭರ್ಜರಿ ಗೆಲುವನ್ನು ಪಡೆದುಕೊಂಡಿದೆ. ಆದರೆ, ಹಳೆಯ ಪಕ್ಷವಾದ ಕಾಂಗ್ರೆಸ್​ನ ಸಾಧನೆ ಹೀನಾಯವಾಗಿದ್ದು, ಕೇವಲ 15 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು 1 ಕ್ಷೇತ್ರದಲ್ಲಿ ಮುನ್ನಡೆ ಪಡೆದಿದೆ. ಕಾಂಗ್ರೆಸ್​ ಕೆಲವೇ ಕೆಲವು ಸೀಟುಗಳನ್ನು ಪಡೆದುಕೊಂಡಿರುವುದರಿಂದ ಇದೀಗ ಗುಜರಾತಿನಲ್ಲಿ ಅಧಿಕೃತವಾಗಿ ವಿರೋಧ ಪಕ್ಷವೇ ಇಲ್ಲದಂತಾಗಿದೆ.

    2017ರ ಚುನಾವಣೆಯಲ್ಲಿ ಬಿಜೆಪಿ ಒಟ್ಟು 182 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಮಾತ್ರ ಗಳಿಸಿತ್ತು. ಆದರೆ, ಈ ಬಾರಿ ದಾಖಲೆ ಬರೆದಿರುವ ಬಿಜೆಪಿ 155 ಸ್ಥಾನಗಳಲ್ಲಿ ಗೆದ್ದಿದ್ದು 2 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

    ಆದರೆ ಇತರ ಪಕ್ಷಗಳ ಸ್ಥಿತಿ ಚಿಂತಾಜನಕವಾಗಿದೆ. ಕಾಂಗ್ರೆಸ್​ ಕೇವಲ 15 ಸ್ಥಾನಗಳಲ್ಲಿ ಗೆದ್ದಿದ್ದು 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಇದು ಬಿಜೆಪಿಯ ನಂತರ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಪಕ್ಷದ ಕಥೆ. ಇನ್ನು ‘ಆಪ್​’ 4 ಸ್ಥಾನಗಳಲ್ಲಿ ಗೆದ್ದಿದ್ದು ಒಂದರಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಸ್ಪರ್ಧೆ ಮಾಡಿರುವ ಎಲ್ಲಾ 4 ಸ್ವತಂತ್ರ ಅಭ್ಯರ್ಥಿಗಳೂ ಗೆದ್ದಿದ್ದಾರೆ.

    ನಿಯಮದ ಪ್ರಕಾರ ವಿರೋಧ ಪಕ್ಷವಾಗಿ ಗುರುತಿಸಿಕೊಳ್ಳಲು ಒಟ್ಟು ಕ್ಷೇತ್ರಗಳ ಶೇಕಡ 10 ಸ್ಥಾನಗಳನ್ನಾದರೂ ಪಡೆಯಬೇಕು. ಗುಜರಾತಿನಲ್ಲಿ 182 ಸ್ಥಾನಗಳಿದ್ದು ಕಾಂಗ್ರೆಸ್​ ಕೈಯಲ್ಲಿ ಅಗತ್ಯವಿರುವ 19 ಸ್ಥಾನಗಳನ್ನೂ ಪಡೆದುಕೊಳ್ಳಲಾಗಿಲ್ಲ. ಇದರಿಂದಾಗಿ ಇನ್ನು ಮುಂದಿನ 5 ವರ್ಷಗಳ ಕಾಲ ಗುಜರಾತಿನಲ್ಲಿ ಅಧಿಕೃತವಾಗಿ ವಿರೋಧ ಪಕ್ಷವೇ ಇರೋದಿಲ್ಲ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts