More

    ನರೇಗಾ ಕೆಲಸದ ದಿನ 100ರಿಂದ 150ಕ್ಕೆ ಹೆಚ್ಚಳ; 15 ದಿನಗಳೊಳಗೆ ವರದಿ ಸಲ್ಲಿಕೆ

    ದೆಹ್ರದುನ್​​: ರಾಜ್ಯದಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಕೆಲಸದ ದಿನವನ್ನು 100 ದಿನಗಳಿಂದ 150 ದಿನಗಳಿಗೆ ಹೆಚ್ಚಿಸಿರುವುದಾಗಿ ಉತ್ತರಾಖಂಡ ಸರ್ಕಾರ ತಿಳಿಸಿದೆ. ಇನ್ನು 15 ದಿನಗಳೊಳಗೆ ಪ್ರತಿ ಜಿಲ್ಲೆಯವರು ಜಿಲ್ಲಾವಾರು ನರೇಗಾ ಕೆಲಸದ ವರದಿ ಸಲ್ಲಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

    ಇದನ್ನೂ ಓದಿ: ವಿಮಾನಕ್ಕೇ ಕಾಂಪಿಟೇಶನ್​ ಕೊಡುತ್ತೆ ಈ ರೈಲು! ಒಂದೇ ಗಂಟೆಯಲ್ಲಿ 620 ಕಿಮೀ ಪ್ರಯಾಣ

    ಸೋಮವಾರದಂದು ರಾಜ್ಯ ಉದ್ಯೋಗ ಖಾತರಿ ಮಂಡಳಿಯೊಂದಿಗೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ ರಾವತ್​ ಸಭೆ ನಡೆಸಿ ಈ ಪ್ರಕಟಣೆ ಹೊರಡಿಸಿದ್ದಾರೆ. ಕೆಲಸದ ದಿನ 50 ದಿನ ಹೆಚ್ಚಿಸಲಾಗಿದೆ. ಅದರ ಖರ್ಚನ್ನು ರಾಜ್ಯ ಸರ್ಕಾರ ಭರಿಸಲಿದೆ. ಸಾಕಷ್ಟು ಜಿಲ್ಲೆಗಳಲ್ಲಿ ಉತ್ತಮವಾಗಿ ಕೆಲಸ ಮಾಡಲಾಗಿದೆ. ಎಲ್ಲ ಜಿಲ್ಲೆಗಳು ನಮ್ಮೊಂದಿಗೆ ಅನುಭವವನ್ನು ಹಂಚಿಕೊಳ್ಳಬೇಕು. ಕೆಲಸದ ವರದಿಯನ್ನು ಎಲ್ಲ ಜಿಲ್ಲಾಧಿಕಾರಿಗಳು ಇನ್ನು 15 ದಿನಗಳೊಳಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಈ ದೇಶದಲ್ಲಿ 12 ವರ್ಷಕ್ಕೇ ಸೆಕ್ಸ್​ಗೆ ಅನುಮತಿ! ಡಿವೋರ್ಸ್​ ಕೊಡೋದು ಕಾನೂನು ಬಾಹಿರವಂತೆ

    ಈವರೆಗೆ ರಾಜ್ಯದಲ್ಲಿ 12.19 ಲಕ್ಷ ಜನರಿಗೆ ನರೇಗಾ ಯೋಜನೆಯ ಜಾಬ್​ ಕಾರ್ಡ್​ ನೀಡಲಾಗಿದೆ. 2020ರಲ್ಲಿಯೇ ಸುಮಾರು 2.66 ಲಕ್ಷ ಜನರಿಗೆ ಕಾರ್ಡ್​ ಮಾಡಿಕೊಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಏಜೆನ್ಸೀಸ್​)

    ಪಂಚರ್​ ಟೈಯರ್​ನಲ್ಲೇ ಪತ್ನಿ ಮನೆಗೆ ಪ್ರಯಾಣ ಬೆಳೆಸಿದ ಯುವಕನಿಗೆ ಕಾದಿತ್ತು ಶಾಕ್​! ಅಪಘಾತವಂತೂ ಅಲ್ಲ

    ಮದ್ವೆಗೆ ಬರ್ದಿದ್ರೂ ಉಡುಗೊರೆ ಹಾಕಿ! ಲಗ್ನಪತ್ರಿಕೆಯಲ್ಲೇ ಗೂಗಲ್​ ಪೇ, ಫೋನ್​ ಪೇ ಕ್ಯೂಆರ್​ ಕೋಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts