More

    ನರೇಗಾ ಕಾರ್ಮಿಕರಿಗೆ ಸಿಕ್ತು ಬಿಂದಿಗೆ ತುಂಬ ಬೆಳ್ಳಿ, ತಾಮ್ರದ ನಾಣ್ಯಗಳು!

    ಲಖನೌ: ಮಹಾತ್ಮ ಗಾಂಧಿ ನ್ಯಾಷನಲ್ ರೂರಲ್ ಗ್ಯಾರೆಂಟಿ ಆ್ಯಕ್ಟ್​ (MGNREGA) ಯೋಜನೆಯ ಕಾರ್ಮಿಕರು ಹೊಸ ಪಂಚಾಯಿತಿ ಕಟ್ಟಡ ನಿರ್ಮಾಣದ ಕೆಲಸದಲ್ಲಿದ್ದಾಗ ಆ ಸ್ಥಳದಲ್ಲಿ ಅವರಿಗೆ ಬಿಂದಿಗೆ ತುಂಬಾ ಬೆಳ್ಳಿ, ತಾಮ್ರದ ನಾಣ್ಯಗಳು ಸಿಕ್ಕಿದ ಅಚ್ಚರಿಯ ಘಟನೆಯೊಂದು ನಿನ್ನೆ ಅಪರಾಹ್ನ ವರದಿಯಾಗಿದೆ. ಆ ನಾಣ್ಯಗಳು 19ನೇ ಶತಮಾನದ್ದು ಎಂದು ಗುರುತಿಸಲಾಗಿದೆ.

    ಉನ್ನಾವೋ ಜಿಲ್ಲೆಯ ಕನ್ಹಾವು ಗ್ರಾಮದಲ್ಲಿ ಈ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು ಸಿಕ್ಕಿರುವಂಥದ್ದು. ನಾಣ್ಯ ಸಿಕ್ಕಿ ಕೂಡಲೇ ಕಾರ್ಮಿಕರ ನಡುವೆ ಹೊಡೆದಾಟ ಆರಂಭವಾಗಿದೆ. ಕೆಲವರು ಕೈಗೆ ಸಿಕ್ಕಷ್ಟು ನಾಣ್ಯಗಳನ್ನು ಹೊತ್ತುಕೊಂಡು ಓಡಿ ಹೋಗಿದ್ದಾರೆ. ಆದಾಗ್ಯೂ, ಪೊಲೀಸರು ಅವರ ಬೆನ್ನತ್ತಿ ಅವರಿಂದ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ನಾಣ್ಯಗಳು 1862ನೇ ಇಸವಿಯದ್ದಾಗಿವೆ. 17 ಬೆಳ್ಳಿ ಮತ್ತು 287 ತಾಮ್ರದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಸಫಿಪುರ ಖಜಾನೆಯಲ್ಲಿ ಇರಿಸಲಾಗಿದೆ ಎಂದು ಸಫಿಪುರ ಎಸ್​ಡಿಎಂ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

    ಇದನ್ನೂ ಓದಿ: ಚಲಿಸುತ್ತಿದ್ದ ಟಾಟಾ ಇಂಡಿಕಾ ಇದ್ದಕ್ಕಿದ್ದಂತೆ ಹೊತ್ತಿ ಉರಿಯಿತು

    2013ರ ಅಕ್ಟೋಬರ್ ತಿಂಗಳಲ್ಲಿ ಬೃಹತ್ ಪ್ರಮಾಣದ ನಿಧಿ ಶೋಧ ನಡೆದ ದೌಂಡಿಯಾ ಖೇಡಾಕ್ಕೆ ಈ ಗ್ರಾಮ ಸಮೀಪದಲ್ಲಿದೆ. 19ನೇ ಶತಮಾನದ ರಾಜನೊಬ್ಬ ತನ್ನಲ್ಲಿದ್ದ 1,000 ಟನ್ ಚಿನ್ನವನ್ನು ಮಣ್ಣು ಮಾಡಿದ್ದ ಎಂಬ ಶೋಬನ್​ ಸರ್ಕಾರ್ ಸ್ವಾಮೀಜಿ ಹೇಳಿಕೆಯ ಮೇರೆಗೆ ಅಂದು ಶೋಧಕಾರ್ಯ ಆರಂಭವಾಗಿತ್ತು. 15 ದಿನಗಳ ಕಾಲ ಭೂಮಿಯನ್ನು ಅಗೆದ ಬಳಿಕ ಆ ಕೆಲಸವನ್ನು ಅಧಿಕಾರಿಗಳು ಕೈಬಿಟ್ಟಿದ್ದರು. (ಏಜೆನ್ಸೀಸ್)

    ಇಬ್ಬರು ಭಾರತೀಯರನ್ನು ಉಗ್ರಪಟ್ಟಿಗೆ ಸೇರಿಸುವ ಪಾಕ್​ ಪ್ರಯತ್ನಕ್ಕೆ ಪಂಚ ರಾಷ್ಟ್ರಗಳ ಪಂಚ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts