More

    ಮೆಟ್ರೋ ರೈಲು ಟಿಕೆಟ್​ ದರ ಕಡಿತ! ಸೋಮವಾರದಿಂದಲೇ ಹೊಸ ನಿಯಮ ಜಾರಿ

    ಚೆನ್ನೈ: ಕರೊನಾ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿದ್ದಂತೆಯೇ ಎಲ್ಲ ರಾಜ್ಯ ಸರ್ಕಾರಗಳು ರಾಜ್ಯದ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹಾಕಲಾರಂಭಿಸಿವೆ. ತಮಿಳುನಾಡಿನ ಚೆನ್ನೈನ ಮೆಟ್ರೋ ರೈಲು ಪ್ರಯಾಣ ದರದಲ್ಲೂ ಇದೀಗ ಹಲವು ಬದಲಾವಣೆಯನ್ನು ತರಲಾಗಿದೆ.

    ಚೆನ್ನೈ ಮೆಟ್ರೋ ರೈಲಿನ ಗರಿಷ್ಠ ಟಿಕೆಟ್​ ದರವನ್ನು 20 ರೂಪಾಯಿ ಇಳಿಸಿರುವುದಾಗಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ತಿಳಿಸಿದ್ದಾರೆ. ಈ ಹಿಂದೆ 70 ರೂಪಾಯಿಯಿದ್ದ ಗರಿಷ್ಠ ಟಿಕೆಟ್​ ದರ ಇನ್ನು ಮುಂದೆ 50 ರೂಪಾಯಿಯಾಗಿರಲಿದೆ.

    2 ಕಿಮೀವರೆಗಿನ ದೂರಕ್ಕೆ 10 ರೂಪಾಯಿ, 2ರಿಂದ 5 ಕಿಮೀ ದೂರಕ್ಕೆ 20 ರೂಪಾಯಿ ಹಾಗೂ 5ರಿಂದ 12 ಕಿಮೀ ದೂರಕ್ಕೆ 30 ರೂಪಾಯಿ ಟಿಕೆಟ್​ ದರ ನಿಗದಿಪಡಿಸಲಾಗಿದೆ. 12ರಿಂದ 21 ಕಿಮೀವರೆಗಿನ ಪ್ರಯಾಣಕ್ಕೆ 40 ರೂಪಾಯಿ ತೆರಬೇಕಾಗುತ್ತದೆ. ಹಾಗೂ 21 ಕಿಮೀಗಿಂತ ಹೆಚ್ಚಿನ ಪ್ರಯಾಣಕ್ಕೆ (32 ಕಿಮೀವರೆಗೆ) 50 ರೂಪಾಯಿ ಟಿಕೆಟ್​ ಕೊಂಡುಕೊಳ್ಳಬೇಕಾಗುತ್ತದೆ. ಈ ಎಲ್ಲ ನಿಯಮಗಳು ಸೋಮವಾರದಿಂದ ಅಂದರೆ ಫೆಬ್ರವರಿ 22ರಿಂದಲೇ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಮದುವೆ ದಿನವೇ ನಾಪತ್ತೆಯಾದ ವಧು! ಅಕ್ಕನ ಬದಲು ತಂಗಿಗೆ ತಾಳಿ ಕಟ್ಟಿದ ವರ!

    ಗಂಡನಿಗೆ ಗುಡ್ ಬೈ ಹೇಳಲು ಸಿದ್ದಳಾದ ಈ ಮಾದಕ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts