More

    ಬೆಂಗಳೂರಿನಲ್ಲಿ ಐಪಿಎಲ್​ ಪಂದ್ಯಗಳು ನಡೆಯುವ ದಿನ ರಾತ್ರಿ 1 ಗಂಟೆವರೆಗೂ ಮೆಟ್ರೋ ಸೇವೆ ವಿಸ್ತರಣೆ!

    ಬೆಂಗಳೂರು: ಇಂದಿನಿಂದ ಕ್ರೀಡಾಭಿಮಾನಿಗಳಿಗೆ ಐಪಿಎಲ್​ ಹಬ್ಬ ಶುರುವಾಗಿದೆ. ಈ ಬಾರಿಯಾದರೂ ಆರ್​ಸಿಬಿ ತಂಡ ಕಪ್​ ಗೆಲ್ಲುವ ನಿರೀಕ್ಷೆಯನ್ನು ಅಭಿಮಾನಿಗಳು ಹೊಂದಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಐಪಿಎಲ್ ಪಂದ್ಯಗಳು ನಡೆಯಲಿದ್ದು, ಈಗಾಗಲೇ ಆರ್​ಸಿಬಿ ಅಭಿಮಾನಿಗಳು ಟಿಕೆಟ್​ ಖರೀದಿಗೆ ಮುಗಿಬಿದ್ದಿದ್ದಾರೆ. ಕ್ರೀಡಾಭಿಮಾನಿಗಳಿಗೆ ಅನುಕೂಲವಾಗಲೆಂದೇ ಈ ಬಾರಿ ಮೆಟ್ರೋ ಕೂಡ ತನ್ನ ಸೇವೆಯನ್ನು ವಿಸ್ತರಿಸಲಿದೆ.

    ರಾಜಧಾನಿಯಲ್ಲಿ ಏಪ್ರಿಲ್ 2, 10, 17, 26 ಹಾಗೂ ಮೇ 21 ರಂದು ಐಪಿಎಲ್ ಪಂದ್ಯಗಳು ನಡೆಯಲಿವೆ. ರಾತ್ರಿ ವೇಳೆ ಪಂದ್ಯಗಳು ನಡೆಯುವ ಹಿನ್ನೆಲೆಯಲ್ಲಿ ಕ್ರೀಡಾಭಿಮಾನಿಗಳಿಗೆ ಅನುಕೂಲವಾಗಲೆಂದು ಮಧ್ಯರಾತ್ರಿ 1 ಗಂಟೆಯವರೆಗೂ ಮೆಟ್ರೋ ಸೇವೆ ವಿಸ್ತರಣೆ ಮಾಡಲಿದೆ.

    ಬಯ್ಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ಸಂಚಾರ ಸೇವೆಯಲ್ಲಿ ವಿಸ್ತರಣೆ ಮಾಡಲಾಗಿದೆ. ರಾತ್ರಿ ಪಂದ್ಯವನ್ನು ಮುಗಿಸಿಕೊಂಡು ಯಾವುದೇ ಭೀತಿಯಿಲ್ಲದೆ ಆರಾಮಾಗಿ ಕ್ರೀಡಾಭಿಮಾನಿಗಳು ಪ್ರಯಾಣಿಸಬಹುದಾಗಿದೆ.

    ಇದನ್ನೂ ಓದಿ: ಇಡ್ಲಿಗಾಗಿ ಒಂದೇ ವರ್ಷದಲ್ಲಿ 6 ಲಕ್ಷ ರೂ. ಖರ್ಚು ಮಾಡಿದ ಭೂಪ!

    ಅಂದಹಾಗೆ ಐಪಿಎಲ್​ 16ನೇ ಆವೃತ್ತಿ ಇಂದು ಸಂಜೆ 7.30ರಿಂದ ಆರಂಭವಾಗಲಿದೆ. ಮೊದಲ ದಿನವೇ ಗುಜರಾತ್​ ಜೇಂಟ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಗುಜರಾತಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

    ಐಪಿಎಲ್​ 16ನೇ ಆವೃತ್ತಿಯ ಅಧಿಕೃತ ಟೆಲಿವಿಷನ್​ ಪ್ರಸಾರ ಹಕ್ಕನ್ನು ಸ್ಟಾರ್​​ಸ್ಪೋರ್ಟ್ಸ್​ ವಾಹಿನಿ ಪಡೆದುಕೊಂಡಿದೆ. ಇಂಗ್ಲಿಷ್ ಹಾಗೂ ಹಿಂದಿ ಮಾತ್ರವಲ್ಲದೆ, ಕನ್ನಡ, ತೆಲುಗು, ಮರಾಠಿ, ಮಲಯಾಳಂ, ಗುಜರಾತಿ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಐಪಿಎಲ್​ 16ನೇ ಆವೃತ್ತಿಯನ್ನು ಸ್ಟಾರ್​ಸ್ಪೋರ್ಟ್ಸ್​ ಪ್ರಸ್ತುತಪಡಿಸುತ್ತಿದೆ. (ದಿಗ್ವಿಜಯ ನ್ಯೂಸ್​)

    ಥ್ಯಾಂಕ್​ ಯು ಬೆಂಗಳೂರು! ಆರ್​ಸಿಬಿ ಬಗ್ಗೆ ಭಾವನಾತ್ಮಕ ಪತ್ರ ಬರೆದ ಎಬಿ ಡಿವಿಲಿಯರ್ಸ್​

    ಈ ಬಾರಿಯಾದ್ರೂ ಅರ್ಜುನ್​ ತೆಂಡೂಲ್ಕರ್​ಗೆ ಅವಕಾಶ ಕೊಡ್ತೀರಾ? ರೋಹಿತ್ ಕೊಟ್ಟ​ ಉತ್ತರ ವೈರಲ್​

    ಈ ಬಾರಿ ಐಪಿಎಲ್​ನಲ್ಲಿ 10 ಕನ್ನಡಿಗರು; ಆರ್​​​ಸಿಬಿಯಲ್ಲಿ ಕರುನಾಡ ಕುಡಿಗಳು ಎಷ್ಟು ಜನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts