More

    ಡ್ರಗ್ಸ್​ ಚಟಕ್ಕೆ ಬಿದ್ದು ಹೆತ್ತ ಮಗುವನ್ನೇ ಭಾರಿ ಬೆಲೆಗೆ ಮಾರಿದ ದಂಪತಿ: ಆದ್ರೆ ದೇವರ ಆಟವೇ ಬೇರೆ ಇತ್ತು!

    ಬೀಜಿಂಗ್​: ಮಾದಕ ವಸ್ತುವಿಗೆ ದಾಸರಾದ​ ಚೀನಾ ದಂಪತಿ ಅದರಿಂದ ಹೊರಬರುವ ದಾರಿಯನ್ನು ನೋಡದೇ ತಮ್ಮ ಮಗನನ್ನೇ ಡ್ರಗ್ಸ್​ಗಾಗಿ ಮಾರಾಟ ಮಾಡಿರುವ ಅಮಾನವೀಯ ಘಟನೆ ವರದಿಯಾಗಿದೆ.

    ನಮಗೆ ತೊಂದರೆಯಿದೆ ಎಂದು ಹೇಳಿ ಮಕ್ಕಳಿಲ್ಲದ ದಂಪತಿಯನ್ನು ಆನ್​ಲೈನ್​ ಮೂಲಕ ಸಂಪರ್ಕಿಸಿ ಕಳೆದ ಅಕ್ಟೋಬರ್​ನಲ್ಲೇ ಮಗುವನ್ನು ಮಾರಾಟ ಮಾಡಿದ್ದರು. ಮಾದಕ ವ್ಯಸನಿಗಳ ಪೊಲೀಸ್​ ಇತಿಹಾಸ ಪುಸ್ತಕದಲ್ಲಿದ್ದ ದಂಪತಿಯನ್ನು ಮಗು ಮಾರಾಟ ಮಾಡಿದ ಮರು ದಿನವೇ ಹೋಟೆಲ್​ ರೂಮ್​ ಒಂದರಲ್ಲಿ ಬಂಧಿಸಲಾಗಿತ್ತು. ಇದನ್ನೂ ಓದಿ: ಮತ್ತೆ ಬಿಗಿಯಾಗಲಿದೆ ಲಾಕ್​ಡೌನ್​?: ಡಬ್ಲ್ಯುಎಚ್​ಒದಿಂದ ಹೊರಬಿತ್ತು ಆಘಾತಕಾರಿ ಮಾಹಿತಿ

    ದಂಪತಿಯು ನೈರುತ್ಯ ಚೀನಾದ ನೈಜಿಯಾಂಗ್​ ನಗರದ ನಿವಾಸಿಗಳಾಗಿದ್ದು, ತಮ್ಮ ಸ್ವಾರ್ಥಕ್ಕಾಗಿ ಮಗು ಮಾರಾಟ ಮಾಡಿದ ಆಪಾದನೆ ಸಾಬೀತಾಗಿದ್ದು, ಮಗು ಕಳ್ಳಸಾಗಾಣೆ ಅಪರಾಧದಲ್ಲಿ ಕಳೆದ ತಿಂಗಳು ನ್ಯಾಯಾಲಯದಿಂದ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾರೆ. ಪೊಲೀಸರು ಮಗುವನ್ನು ಸಹ ರಕ್ಷಣೆ ಮಾಡಿದ್ದು, ಸದ್ಯ ಮಗು ಅಜ್ಜಿ-ತಾತರ ಆಶ್ರಯದಲ್ಲಿ ಬದುಕುತ್ತಿದೆ.

    ಕ್ಷಣ ಕ್ಷಣದ ಮಾಹಿತಿ ಹಾಗೂ ಕುತೂಹಲಕಾರಿ ಸುದ್ದಿಗಳಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಫಾಲೋ ಮಾಡಲು ಇಲ್ಲಿ ಕ್ಲಿಕ್ಕಿಸಿ

    ದಂಪತಿಯನ್ನು ವ್ಯಾಂಗ್​ ಮತ್ತು ಝೋಂಗ್​ ಎಂದು ಗುರುತಿಸಲಾಗಿದ್ದು, ಬಹಳ ದಿನಗಳಿಂದ ಡ್ರಗ್ಸ್​ ದಾಸರಾಗಿದ್ದರು ಎಂದು ತಿಳಿದುಬಂದಿದೆ. ತಮ್ಮ ವ್ಯಸನದಿಂದ ಸಾಲದ ಸುಳಿಯಲ್ಲಿ ಸಿಲುಕಿದ್ದರು. ಕಳೆದ ವರ್ಷ ಝೋಂಗ್ ಗರ್ಭಿಣಿಯಾಗಿದ್ದ ಸಮಯದಲ್ಲೂ ಅನೇಕ ಬಾರಿ ಡ್ರಗ್ಸ್​ ಸೇವನೆ ಮಾಡಿದ್ದಾಳೆ. ಆಗಲೇ ಒಂದು ನಿರ್ಧಾರಕ್ಕೆ ಬಂದಿದ್ದ ದಂಪತಿ ತಮ್ಮ ಸಾಲದ ಋಣವನ್ನು ತೀರಿಸಿಕೊಳ್ಳಲು ಮಗು ಮಾರಾಟಕ್ಕೆ ಮುಂದಾದರು.

    ಕಳೆದ ವರ್ಷ ಫೆಬ್ರವರಿಯಲ್ಲಿ ಝೋಂಗ್​ಗೆ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಲ್ಯಾನ್​ ಎಂಬ ಮಹಿಳೆ ಪರಿಚಿತರಾಗುತ್ತಾರೆ. ಲ್ಯಾನ್​ ಮತ್ತು ಆಕೆಯ ಪತಿ ಚೆನ್​ ಒಂದು ಮಗುವನ್ನು ಪಡೆದುಕೊಳ್ಳಲು ವೈದ್ಯಕೀಯ ತಪಾಸಣೆ ಸೇರಿದಂತೆ ಸಾಕಷ್ಟು ಪ್ರಯತ್ನಗಳನ್ನು ಮಾಡಿರುತ್ತಾರೆ. ಈ ವಿಚಾರ ಝೋಂಗ್​ ತಿಳಿದು ಅವರನ್ನು ಸಂಪರ್ಕಿಸಿ ಮಗು ಮಾರಾಟದ ಬಗ್ಗೆ ಮಾತಾಡಿ, ತುಂಬಾ ಕಷ್ಟ ಇದೆ ಎಂದು ನಂಬಿಸಿ ಕಳೆದ ಅಕ್ಟೋಬರ್​ನಲ್ಲಿ ಮಾರಾಟ ಮಾಡುತ್ತಾರೆ. ಬರೋಬ್ಬರಿ 60,000 ಯಾನ್​ಗೆ ಅಂದರೆ ಭಾರತೀಯ ಕರೆನ್ಸಿ 6,46,909 ರೂ. ಗೆ ಮಾರಾಟ ಮಾಡಿದ್ದಾರೆ. ಇದನ್ನೂ ಓದಿ: ಬನ್ನೇರುಘಟ್ಟಕ್ಕೆ ಹೋದ ಓರ್ವ ಯುವತಿ ಇಬ್ಬರು ಯುವಕರು ಶವವಾಗಿ ಪತ್ತೆ

    ಇದೀಗ ಪೊಲೀಸರ ಅತಿಥಿಯಾಗಿರುವ ದಂಪತಿ ವಿವಿಧ ಅಪರಾಧಗಳ ಅಡಿಯಲ್ಲಿ ಕಂಬಿ ಎಣಿಸುತ್ತಿದ್ದಾರೆ. ಹೆತ್ತ ಮಗುವನ್ನೇ ಮಾದಕ ವ್ಯಸನಕ್ಕಾಗಿ ಮಾರಾಟ ಮಾಡುವ ತಾಯಿಯೂ ಇದ್ದಾಳಾ ಎಂಬ ಸಾಕಷ್ಟು ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

    ಭಾರತೀಯ ಯೋಧರು ಹುತಾತ್ಮರಾದ ಬಗ್ಗೆ ರಾಹುಲ್​ ಗಾಂಧಿಗೆ ಎರಡು ಅನುಮಾನ; ಪ್ರಧಾನಿಗೆ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts