More

    ವಿದ್ಯಾರ್ಥಿಗಳಿಗೆ ದೇಶಪ್ರೇಮ ಮೂಡಲಿ

    ಭಾಲ್ಕಿ: ಯುವ ಜನರಲ್ಲಿ ದೇಶಪ್ರೇಮ ದೃಢವಾಗಿದ್ದರೆ ಅವರ ಪ್ರತಿ ಕೆಲಸ ಅರ್ಥಗರ್ಭಿತವಾಗಿರುತ್ತದೆ. ದೇಶಸೇವೆಯಲ್ಲಿ ತೊಡಗಿಸಿಕೊಂಡ ಮಹಾತ್ಮರ ಬಗ್ಗೆ ಸದಾ ಗೌರವ ಹೊಂದಲು ಸಾಧ್ಯ ಎಂದು ತಾಪಂ ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ ಹೇಳಿದರು.

    ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಪಂಚಾಯಿತಿ, ತಾಪಂ ಮತ್ತು ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಮೃತ ಕಲಶ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿದ್ಯಾರ್ಥಿ ದೆಸೆಯಿಂದಲೇ ದೇಶಾಭಿಮಾನ ಬೆಳೆಸಿಕೊಳ್ಳುವ ಅವಕಾಶ ಒದಗಿದಾಗ ಪ್ರತಿ ಮಗು ದೇಶದ ಆಸ್ತಿ ಆಗಲಿದೆ. ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ದೇಶಪ್ರೇಮ ಬಿಂಬಿಸುತ್ತದೆ. ದೇಶದ ಮೂಲೆ ಮೂಲೆಯಿಂದ ಮಣ್ಣು ಶೇಖರಣೆ ಮಾಡಿ ವಿವಿಧ ರೀತಿಯ ಸಸ್ಯ ಬೆಳೆಸುವ ವಿಶಿಷ್ಟ ಉದ್ದೇಶ ಹೊಂದಲಾಗಿದೆ ಎಂದರು.

    ಕಿರಿಯ ತರಬೇತಿ ಅಧಿಕಾರಿ ಪ್ರಭು ಸಿರ್ಸಿಕರ್ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಲಕ್ಷ್ಮೀಕಾಂತ ಪವಾರೆ ಅಧ್ಯಕ್ಷತೆ ವಹಿಸಿದರು. ಲಕ್ಷ್ಮಣ ಸ್ವಾಗತಿಸಿದರು. ಮಲ್ಲಯ್ಯ ಸ್ವಾಮಿ ನಿರೂಪಣೆ ಮಾಡಿದರು. ವಿಠಲ ಚಲುವಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts