More

    ಕೂಲಿಕಾರ್ಮಿಕರಿಗೆ ನರೇಗಾ ಆಸರೆ

    ಹುಕ್ಕೇರಿ: ಲಾಕ್‌ಡೌನ್ ವೇಳೆ ದಿನದ ದುಡಿಮೆ ಅವಲಂಬಿತರಿಗೆ ಉದ್ಯೋಗ ನೀಡಲು ನರೇಗಾ ಯೋಜನೆಯಡಿ ಕೆಲಸ ಪ್ರಾರಂಭಿಸಿದ ರಾಜ್ಯದ ಮೊದಲ ತಾಲೂಕು ಹುಕ್ಕೇರಿ. ಬೆಳವಿ ಗ್ರಾಪಂ ತಾಲೂಕಿನಲ್ಲಿ ಈ ಪ್ರಯತ್ನಕ್ಕೆ ಕೈಜೋಡಿಸಿದ ಮೊದಲ ಗ್ರಾಮ ಪಂಚಾಯಿತಿಯಾಗಿದೆ ಎಂದು ತಾಪಂ ಸದಸ್ಯ ಬಾಳಾಸಾಹೇಬ ನಾಯಿಕ ಹೇಳಿದರು.

    ಅವರು ಗುರುವಾರ ತಾಲೂಕಿನ ಬೆಳವಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಮಹಾಮಾರಿ ಕರೊನಾ ವೈರಸ್ ನಿಯಂತ್ರಿಸಲು ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾಯಿತು. ಇದರಿಂದ ಉದ್ಯೋಗವಿಲ್ಲದೆ ಬಡವರ್ಗದ ಜನರು ಜೀವನ ನಿರ್ವಹಣೆಗೆ ಪರಿತಪಿಸುವಂತಾಯಿತು. ಇಂತಹ ಸ್ಥಿತಿಯಲ್ಲಿ ಉದ್ಯೋಗ ಖಾತ್ರಿಯಡಿ ಅವರಿಗೆ ಕೆಲಸ ಒದಗಿಸಿದ್ದರಿಂದ ಅನುಕೂಲವಾಗಿದೆ ಎಂದರು. ಗ್ರಾಮದಲ್ಲಿನ ಹಳ್ಳಗಳಿಗೆ ನಿರ್ಮಿಸಿರುವ ಬಾಂದಾರಗಳಲ್ಲಿ ಸಾಕಷ್ಟು ಹೂಳು ತುಂಬಿದೆ. ಅವುಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಮಹಾಲಕ್ಷ್ಮೀ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಪ್ಪಾಸಾಹೇಬ ಸಾರಾಪುರೆ ಮತ್ತು ಪಿಡಿಒ ಶೀಲಾ ತಳವಾರ ಅವರು ಕಾರ್ಮಿಕರಿಗೆ ಮಾಸ್ಕ್ ವಿತರಿಸಿದರು. ಗ್ರಾಪಂ ಅಧ್ಯಕ್ಷ ಥಳೆಪ್ಪ ದಂಡಿ, ಸದಸ್ಯರಾದ ಮಲ್ಲಪ್ಪ ನಾಯಿಕ, ಭೂಪಾಲ ಚಿನಗುಡಿ, ರಾಮಣ್ಣ ತೇರದಾಳಿ, ಕಾರ್ಯದರ್ಶಿ ರಾಮಣ್ಣ ಬಹಾದ್ದೂರಿ, ಶಕ್ತಿಸಿಂಗ್ ಖಟಾವಕರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts