More

    ಹಗಲಲ್ಲಿ ಕೂಲಿಗಾರರು, ರಾತ್ರಿ ಕಳ್ಳರು! ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿದ್ದ ನೇಪಾಳಿ ಗ್ಯಾಂಗ್

    ಬೆಂಗಳೂರು: ಹಗಲಿನಲ್ಲಿ ಅಪಾರ್ಟ್​ಮೆಂಟ್​ನಲ್ಲಿ ಸೆಕ್ಯೂರಿಟಿ ಗಾರ್ಡ್​ ಕೆಲಸ ಮಾಡಿಕೊಂಡು ರಾತ್ರಿ ವೇಳೆ ಮನೆ ಕಳ್ಳತನ ಮಾಡುತ್ತಿದ್ದ ಆರು ಮಂದಿ ನೇಪಾಳಿ ಗ್ಯಾಂಗ್​ನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

    ನೇಪಾಳ ಮೂಲದ ರಾಜೇಶ್​ ಖಡಕ ಅಲಿಯಾಸ್​ ಬಿಷ್ಣು (26), ಸಚಿನ್​ ಕುಮಾರ್​ ಬೋರಾ ಅಲಿಯಾಸ್​ ಭಮ್ಮಜಿ (25), ಮುಖೇಶ್​ ಖಡ್ಕಾ (22), ಕರಣ ಖಡಕ ಅಲಿಯಾಸ್​ ಕಿರಣ್​ (19), ರಾಜುಸಿಂಗ್​ ಅಲಿಯಾಸ್​ ಪುರಾನ್​ ಖಡಕ್​ (32) ಹಾಗೂ ಎಗ್ಗಿರಾಜ್​ ಖಡಕ್​ (45) ಬಂಧಿತರು. 17 ಲಕ್ಷ ರೂ. ಮೌಲ್ಯದ 340 ಗ್ರಾಂ ಚಿನ್ನಾಭರಣ ಹಾಗೂ 200 ಗ್ರಾಂ ಬೆಳ್ಳಿ ಅಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೂರ್ವ ವಿಭಾಗ ಡಿಸಿಪಿ ಡಾ.ಎಸ್​.ಡಿ. ಶರಣಪ್ಪ ತಿಳಿಸಿದ್ದಾರೆ.

    ನೇಪಾಳ ಮೂಲದ ಆರೋಪಿಗಳು 2 ವರ್ಷಗಳ ಹಿಂದೆ ಪ್ರತ್ಯೇಕವಾಗಿ ಬೆಂಗಳೂರಿಗೆ ಬಂದಿದ್ದರು. ರಾಜರಾಜೇಶ್ವರಿನಗರ, ರಾಮಮೂತಿರ್ನಗರ, ಕೆ.ಆರ್​.ಪುರದ ಅಪಾರ್ಟ್​ಮೆಂಟ್​ಗಳಲ್ಲಿ ಸೆಕ್ಯೂರಿಟಿ ಗಾರ್ಡ್​ ಮತ್ತು ಕಾರ್​ ವಾಷಿಂಗ್​ ಕೆಲಸ ಮಾಡುತ್ತಿದ್ದರು.
    ಹಗಲಿನ ವೇಳೆ ಸೆಕ್ಯೂರಿಟಿ, ಕಾರ್​ ವಾಷ್​ ಕೆಲಸ ಮಾಡುತ್ತಿದ್ದ ಆರೋಪಿಗಳು ಲಾಕ್​ ಆಗಿರುವ ಮನೆಗಳನ್ನು ಗುರುತಿಸಿ ಕಳ್ಳತನಕ್ಕೆ ಸ್ಕೆಚ್​ ಹಾಕುತ್ತಿದ್ದರು. ರಾಮಮೂರ್ತಿನಗರದ ಉದ್ಯಮಿ ಕುಟುಂಬ ಸಮೇತ ಮುಳಬಾಗಿಲಿಗೆ ಹೋಗಿದ್ದರು. ಇವರ ಮನೆಯನ್ನು ಗುರುತಿಸಿದ ರಾಜೇಶ್​, ತನ್ನ ಸ್ನೇಹಿತರ ಜತೆ ಸೇರಿ ಬೀಗ ಒಡೆದು ಚಿನ್ನಾಭರಣ ಕಳವು ಮಾಡಿದ್ದರು.

    ಈ ಕುರಿತು ತನಿಖೆ ಕೈಗೊಂಡಾಗ ಆರೋಪಿಯೊಬ್ಬನ ಮುಖ ಚಹರೆ ಪತ್ತೆಯಾಗಿತ್ತು. ಇದರ ಆಧಾರದ ಮೇಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉಳಿದವರ ಸುಳಿವು ಲಭ್ಯವಾಗಿತ್ತು. ಅಷ್ಟರಲ್ಲಿ ಉಳಿದವರು ಊರಿಗೆ ಹೋಗಲು ಸಿದ್ದತೆ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಎಲ್ಲರನ್ನು ವಶಕ್ಕೆ ಪಡೆಯಲಾಗಿದೆ. ಕರೊನಾ ಲಾಕ್​ಡೌನ್​ ಇದ್ದ ಕಾರಣಕ್ಕೆ ಕಳವು ಮಾಡಿದ್ದ ಚಿನ್ನಾಭರಣ ಮಾರಾಟಕ್ಕೆ ಸಾಧ್ಯವಾಗಿರಲಿಲ್ಲ. ಲಾಕ್ಡೌನ್​ ಸಮಯದಲ್ಲಿ ಆರೋಪಿಗಳು ಕದ್ದ ವಸ್ತುಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗಿರಲಿಲ್ಲ. 17 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ರಾಮಮೂತಿರ್ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 5 ಮತ್ತು ಆರ್​.ಆರ್​.ನಗರದ 1 ಪ್ರಕರಣ ಸೇರಿದಂತೆ 6 ಕನ್ನಗಳವು ಪ್ರಕರಣಗಳನ್ನು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ ಮೆರೆದಿದ್ದವರು ಅಂದರ್​!

    ಮಗನಿಗೆ ಗೊತ್ತಾಗದಂತೆ ಸೊಸೆಯನ್ನು 80 ಸಾವಿರ ರೂಪಾಯಿಗೆ ಮಾರಿದ ಮಾವ!

    ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts