More

    ಮಿಯಾಂವ್​ ಮಿಯಾಂವ್​: ಬೆಕ್ಕಿನ ಚಿತ್ರದೊಂದಿಗೆ ಮುಂಬೈ ಜನತೆಗೆ ಪೊಲೀಸರ ಎಚ್ಚರಿಕೆ!

    ಮುಂಬೈ: ಸೃಜನಾತ್ಮಕ ಸಾಮಾಜಿಕ ಜಾಲತಾಣ ಪೋಸ್ಟ್​ಗಳಿಗೆ ಹೆಸರುವಾಸಿಯಾಗಿರೋ ಮುಂಬೈ ಪೊಲೀಸರು ಮತ್ತೊಮ್ಮೆ ಅದ್ಭುತ ಪೋಸ್ಟ್​ನಿಂದ ಗಮನ ಸೆಳೆದಿದ್ದಾರೆ. ಈ ಬಾರಿಯ ಪೋಸ್ಟ್​ ಸಂದೇಶವಾಗಿರದೇ ಜನತೆಗೆ ಎಚ್ಚರಿಕೆಯನ್ನೂ ಸಹ ನೀಡಿದೆ.

    ಬೆಕ್ಕಿನ ಚಿತ್ರದೊಂದಿಗೆ ಟ್ವೀಟ್​ ಮಾಡಿರುವ ಮುಂಬೈ ಪೊಲೀಸರು, “ಮಿಯಾಂವ್​ ಮಿಯಾಂವ್ ಮಾತ್ರ ಇಲ್ಲಿ ಸ್ವೀಕೃತವಾಗುತ್ತದೆ. ಡ್ರಗ್ಸ್​ಗೆ ನೋ ಎನ್ನಿ” ಎಂದು ಕರೆ ನೀಡಿದ್ದಾರೆ.

    ಮಿಯಾಂವ್​ ಮಿಯಾಂವ್​ಗೂ ಬೆಕ್ಕಿಗೂ ಏನು ಸಂಬಂಧ ಎಂಬ ಪ್ರಶ್ನೆ ನಿಮ್ಮಲ್ಲಿ ಉಂಟಾಗಬಹುದು, ಅದಕ್ಕೆ ಉತ್ತರ ಮುಂದಿದೆ. ಅಂದಹಾಗೆ ಮಿಯಾಂವ್​ ಮಿಯಾಂವ್ (Meow meow) ಸ್ಟ್ರೀಟ್​ ಡ್ರಗ್​ನ ಹೆಸರು. ಇದರ ವೈಜ್ಞಾನಿಕ ಹೆಸರು ಮೆಫೆಡ್ರೋನ್​. ಕೊಕೇನ್​ನಷ್ಟೇ ಸ್ಟ್ರೀಟ್​ ಡ್ರಗ್​ ಸಹ ಹೆಚ್ಚು ಪರಿಣಾಮಕಾರಿಯಾಗಿದೆ. ಸ್ಟ್ರೀಟ್​ ಡ್ರಗ್​ಗೆ ಇಂಟರ್ನೆಟ್​ನಲ್ಲಿ ಭಾರಿ ಬೇಡಿಕೆ ಬಂದ ಹಿನ್ನೆಲೆಯಲ್ಲಿ 2007ರಿಂದ ಮಿಯಾಂವ್​ ಮಿಯಾಂವ್​ ಎಂದು ಕರೆಯಲು ಆರಂಭಿಸಲಾಯಿತು. ಇದನ್ನೂ ಓದಿ: ಆನೆ ತಿಂದಿದ್ದು ಪೈನಾಪಲ್​ನಲ್ಲಿ ತುಂಬಿದ್ದ ಸ್ಪೋಟಕವಲ್ಲ: ಓರ್ವ ಆರೋಪಿಯ ಬಂಧನ ಬಳಿಕ ಪ್ರಕರಣಕ್ಕೆ ತಿರುವು!​

    ಇನ್ನು ಭಾರತದಲ್ಲಿ ಅಕ್ಟೋಬರ್​ 2ರ ಗಾಂಧಿ ಜಯಂತಿ ಸಂಭ್ರಮದೊಂದಿಗೆ ರಾಷ್ಟ್ರೀಯ ಮಾದಕ ವಸ್ತು ವ್ಯಸನ ವಿರೋಧಿ ದಿನವನ್ನು ಆಚರಿಸುತ್ತೇವೆ. ಗಾಂಧೀಜಿಯು ಸಹ ಡ್ರಗ್ಸ್​ ಅನ್ನು ತೀವ್ರವಾಗಿ ಖಂಡಿಸಿದ್ದರು.

    ಮಾದಕ ವಸ್ತುಗಳು ಆರೋಗ್ಯದ ಮೇಲೆ ಅತೀವ ಪರಿಣಾಮವನ್ನು ಬೀರುತ್ತದೆ. ಮೆದುಳು ಸಂಬಂಧಿ ರೋಗಕ್ಕೆ ತುತ್ತಾಗುವುದರಿಂದ ವೃತ್ತಿ, ಕುಟುಂಬ, ಪ್ರೀತಿ ಪಾತ್ರದವರು ಹಾಗೂ ನಾಗರಿಕ ಪ್ರಜ್ಞೆಯನ್ನು ಡ್ರಗ್ಸ್​ ಕಸಿದುಕೊಳ್ಳುತ್ತಾರೆ. ಕೆಲವರು ಕುತೂಹಲಕ್ಕಾಗಿ ಅಥವಾ ಫನ್​ಗಾಗಿ ಡ್ರಗ್​ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಜೀವ ಉಳಿಸುವ ಔಷಧಗಳನ್ನೇ ಡ್ರಗ್ಸ್​ ಆಗಿ ತೆಗೆದುಕೊಳ್ಳುತ್ತಾರೆ ಎಂದು ಪರಿಣಿತರು ಹೇಳಿದ್ದಾರೆ. (ಏಜೆನ್ಸೀಸ್​) ಇದನ್ನೂ ಓದಿ: VIDEO| ಸಾಗರದಾಳದಲ್ಲಿ ಪತ್ತೆಯಾದ ಪ್ರಮುಖ 10 ನಿಗೂಢ ಪ್ರಾಣಿಗಳಿವು…!

    ಇನ್ನು2-3 ದಿನಗಳಲ್ಲಿ ಚೀನಾಕ್ಕೆ ಸೆಡ್ಡು ಹೊಡೆಯಲಿದೆ ಮಹಾರಾಷ್ಟ್ರ…! ದಾಖಲೆ ಬರೆಯುವತ್ತ ಸಾಗಿದೆ ಈ ರಾಜ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts